ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಿ ದಾನವ ಕೋರುವಿ ಎಂಥಾ ಕೂಸಮ್ಮ ಶ್ರೀ- ಕಾಂತ ಸುಜನಮಾನಸಂತರಂಗದಿ ನಿತ್ಯ ನಿಂತು ನಲಿವ ಕೃಷ್ಣ ಪ. ಕ್ಷೀರ ವಾರಿಧಿಯಲ್ಲಿದ್ದನಾದರು ಬೆಣ್ಣೆ ಕ್ಷೀರವ ಕದ್ದು ಮೆದ್ದ ತೋರುವ ತತ್ವ ಶುದ್ಧ ಆದರು ಬಹು ಕ್ರೂರ ರಕ್ಕಸರ ಗೆದ್ದ ನೀರಜಾಲಯ ರಮಣ ಗೋಕುಲ ನಾರಿಯರ ಮೇಲ್ ಬಿದ್ದು ರಮಿಸಿದ ವಾರಿಜಾಸನ ವಂದ್ಯ ಸುರವರ ವೈರಿ ಶಕಟನ ಕಾಲಲೊದ್ದ 1 ಸಂಸಾರಾರ್ಣವ ತಾರಕನಾದರು ಪಾಂಡು- ವಂಶ ರಕ್ಷಣಕಾರಕ ಹಂಸಾದ್ಯ ಸುರಮಾರಕನಾದರು ನಾನಾ ಹಿಂಸಾದೋಷ ನಿವಾರಕ ಕಂಸಮರ್ದನ ವೈನತೇಯ ಶು- ಪಾದ ಕಮಲ ತಿ- ಲಾಂಶ ದೋಷರಹಿತ ಗೋಪಾ- ಲಾಂಶವೇರಿ ವಿನೋದಗೊಳುತಿಹ 2 ಶುದ್ಧ ಪೂರ್ಣಾನಂದ ಸುಜನಾರ್ತಿವಾರÀ ನಿ- ಷಿದ್ಧ ಕಲುಷದೂರಾ ಕ್ರುದ್ಧ ಖಳವಿದಾರ ಕಿಂಕರ ಪರಿಚರ ಸಿದ್ಧಾಂತ ಶ್ರುತಿ ಶೇಖರಾ ಬುದ್ಧ ರೂಪದಿ ಭೂತಪತಿಗೆ ಸ- ಮೃದ್ಧಿ ಜಯಪಾಲಿಸಿ ಸುರೋತ್ತಮ ಸಿದ್ಧವಂದಿತ ಶೇಷಗಿರಿಯೊಳ- ಗಿದ್ದು ದಾಸರನುದ್ಧರಿಸುತಿಹ 3
--------------
ತುಪಾಕಿ ವೆಂಕಟರಮಣಾಚಾರ್ಯ