ಕೃಪೆಯಿಲ್ಲ ವ್ಯಾಕೊ ಎನ್ನ ಮ್ಯಾಲೆ ಕೃಷ್ಣಮೂರುತೀ
ಅಪರಾಧವೆಲ್ಲ ಕ್ಷಮಿಸಿ ಸಲಹೊ ಪಾರ್ಥಸಾರಥಿ ಪ
ನೀನಲ್ಲದನ್ಯರಿಲ್ಲವೆಂದು ನಿಖಿಲ ನಿಗಮವು
ನಾನಾ ಪರಿಯಲಿ ಸಾರುವದು ಸಕಲಶಾಸ್ತ್ರವು 1
ಮನಾದಿಗಳಿಗಗೋಚರನೆಂದೆಲ್ಲ ಪೇಳ್ವರು 2
ಅನಾಥ ರಕ್ಷಕಾಪ್ರಮೇಯ ಆದಿಪುರುಷನೇ
ಸನಂದನಾದಿ ಸಕಲಯೋಗಿ ವಂದ್ಯ ಚರಣನೇ 3
ನಿರಪರಾಧಿಗಳನು ಪೊರೆಯಲೇಕೆ ಸಂಶಯ
ಸುರೇಶರುದ್ರ ಬ್ರಹ್ಮಜನಕ ನೀನೆ ನಿಶ್ಚಯ 4
ಕರುಣದಿ ನೀನೆ ಕಾಯಬೇಕು ಮರೆಯದೆನ್ನನು
ಗುರುರಾಮ ವಿಠಲ ಬಿಡದಿರುಕೈದಾಸದಾಸನು 5