ಒಟ್ಟು 5 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉರಮಂದಿರೆಯ ಇಂದಿರೆಯೆ ಪರಿಪಾಲಿಸನುದಿನ ಪ ನಿತ್ಯಪ್ರಕೃತಿಯ ಕೃತ್ಯನಡೆಸಿ ನಿರ್ಲಿಪ್ತಳಾಗಿಹೆ ನಿತ್ಯಮುಕ್ತಳೆ 1 ಮೊಕ್ಷದನ ಗುಣ ಈಕ್ಷಿಪಳೆ ಜಗರಕ್ಷಕಳೆ ಕಮಲಾಕ್ಷನಾ ಪ್ರಿಯೆ 2 ಭರದಿ ಕರವೀರಪುರದಿ ನಿಂದೆ ಉರಗಗಿರಿ ಶ್ರೀ ವೆಂಕಟೇಶನ ಪರಮಪ್ರೀಯೆ ನಿತ್ಯಾವಿಯೋಗಿನಿ ಪದುಮಸರೋನಿವಾಸಿನಿ 3 ಮುಕ್ತನಾಥಗೆ ಪ್ರೀಯೆ-ನೀ ಅವ್ಯಕ್ತತತ್ವಾಭಿಮಾನಿಯೇ | ವ್ಯಕ್ತಗೊಳಿಸೆನ್ನ ಚಿತ್ತದಲಿ ವೇದೋಕ್ತನ ನೀ ನಿತ್ಯದಲ್ಲಿ 4 ಪುರುಷಸೂಕ್ತಸುಮೇಯ ಶ್ರೀ ಉರಗಾದ್ರಿವಾಸವಿಠಲನ ಹರುಷದಲಿ ನಲಿದಾಡಿ ಸುಖಿಸುವ 5
--------------
ಉರಗಾದ್ರಿವಾಸವಿಠಲದಾಸರು
ಜಯ ಲಕ್ಷ್ಮಿ ಬಾ ಹಸೆಗೆ ಜಯ ಜಯ ಜಗನ್ಮಾತೆ ತ್ರೈಲೋಕವಿಖ್ಯಾತೆ ಪ ಮುತ್ತಿನ ಮಂಟಪದಿ ರತ್ನಪೀಠವಿರಿಸಿ ಮುತ್ತೈದೆಯರು ನಿನ್ನ ಅರ್ಥಿಯಲಿ ಕರೆವರು ಅ.ಪ ಗೆಜ್ಜೆ ಸರಪಣಿ ಕಾಲಗೆಜ್ಜೆ ನಾದದಿಂದ ಹೆಜ್ಜೆನಿಡುತ ಬಾ ಬಾ ಸಜ್ಜನರಕ್ಷಕಳೆ1 ಅಚ್ಚ ಜರಿ ಪೀತಾಂಬರ ಹೆಚ್ಚಿನಾಭರಣಗಳು ಮಿತ್ರೇರಲಂಕರಿಸುವರು ಅಚ್ಚುತನೊಡಗೊಡಿ 2 ಮುತ್ತಿನ್ಹಾರ ಪದಕ ಜತ್ತಿಲೊಲಿಯುತಿಹುದು ಹಸ್ತ ಕಡಗ ದೋರ್ಯ ಸಿಸ್ತಿನ ಸುಂದರಿಯೆ 3 ಕರ್ತೃ ಕಮಲನಾಭ ವಿಠ್ಠಲನರಸಿಯೆ ಹಸ್ತಿಗಮನೆ ಬಾ ಬಾ ಉತ್ತಮ ಪೀಠಕೆ 4
--------------
ನಿಡಗುರುಕಿ ಜೀವೂಬಾಯಿ
ಲಕ್ಷ್ಮೀದೇವಿ ಕಮಲಾಕ್ಷಿ ತಾಯೆ ಸೂಕ್ಷ್ಮಮತಿಯನಿತ್ತು ಪೊರೆದು ರಕ್ಷಿಪದೇವಿ ಪ ಹರಿಯರಾಣಿ ಭುಜಗವೇಣಿ ಪರಿಪರಿಯ ಕ್ಲೇಶಗಳಳಿವ ದುರಿತದೂರನ ಕರಪಿಡಿಯುತ ಬಾ ಪರಿ ವೈಭವದಿ 1 ವಂದಿಸುವೆ ನಿನ್ನ ಪದಕೆ ಅಂಬುಜಾಕ್ಷಿ ಕರುಣವ ಮಾಡಿ ಕಂಬು ಕಂಧರನೊಡಗೂಡುತ ಬಾ ಸಂಭ್ರಮ ಸೂಸುತಲಿ 2 ಗೆಜ್ಜೆ ಪೈಜನಿ ಪಾಡಗರುಳಿಯು ಸಜ್ಜಾಗಿಹ ಕಾಲುಂಗುರ ಧ್ವನಿಯ ಮೂರ್ಜಗದೊಡೆಯನ ಕರಪಿಡಿಯುತ ಬಾ ಸಜ್ಜನ ರಕ್ಷಕಳೆ 3 ನಡುವಿಗೆ ನವರತ್ನದ ಪಟ್ಟಿ ಬಿಡಿಮುತ್ತುಗಳುದುರುವ ಪೀತಾಂಬರ ಬಡನಡÀು ಬಳುಕುತ ಅಡಿ ಇಡು ಬಾ ನಿ- ನ್ನೊಡೆಯನ ಕೂಡುತಲಿ 4 ಕರದಲಿ ಕಂಕಣ ಹಾಸರ ಬಳೆಗಳು ಬೆರಳಲಿ ಉಂಗುರ ಥಳಥಳಿಸುತಲಿ ಗರುಡಗಮನ ನೊಡಗೂಡುತ ಬಾ ಬಾ ಗರುವವು ಮಾಡದಲೆ5 ವಂಕಿನಾಗಮುರುಗಿ ಕರದಲಿ ಬಿಂಕದಿ ಪಿಡಿದಿಹ ತಾವರೆ ಕುಸುಮವು ಪಂಕಜಾಕ್ಷನೊಡಗೂಡುತ ಮನ ಶಂಕೆಯು ಮಾಡದಲೆ6 ಕಠ್ಠಾಣಿಸರ ಪದಕಗಳ್ಹೊಳೆಯುತ ಕಟ್ಟಿದ ಉಂಗುರಡ್ಡಿಕಿ ಶೋಭಿಸುತ ಚಿತ್ತಜನಯ್ಯನನೊಡಗೂಡುತ ಬಾ ಮತ್ತೆ ಹರುಷದಲಿ 7 ಥಳಥಳಿಸುವ ಗಲ್ಲಕೆ ಅರಿಶಿನವು ನಲಿಯುವ ಮೂಗುತಿ ಮುಖುರ ಬುಲಾಕು ಹೊಳೆವ ಮೀನು ಬಾವಲಿ ಚಳತುಂಬುಗಳ್ಹೊಳೆಯುತ ಘಳಿಲನೆ ಬಾರಮ್ಮ 8 ಕುರುಡಿ ಬಾವಲಿ ಬುಗುಡಿ ಚಂದ್ರ ಮುರುವಿನ ಕಾಂತಿ ಮುಗುಳ್ನಗೆ ಮುಖವು ಉರುಗಾದ್ರೀಶನ ಕರಪಿಡಿಯುತ ಬಾ ಕರೆ ಕರೆ ಮಾಡದಲೆ 9 ಘಣೆಯಲಿ ಕುಂಕುಮ ಬೈತಲೆ ಬಟ್ಟು ಥಳಥಳಿಸುವ ಕಣ್ಣಿಗೆ ಕಪ್ಪಿಟ್ಟು ಎಳೆಬಾಳೆಯ ಸುಳಿಯಂದದಿ ಬಳುಕುತ ಘಳಿಲನೆ ಬಾರಮ್ಮ10 ಕೆಂಪಿನ ರಾಗುಟಿ ಜಡೆ ಬಂಗಾರವು ಸಂಪಿಗೆ ಮಲ್ಲಿಗೆ ಸರಗಳ ಮುಡಿದು ಸೊಂಪಿಲಿ ಶ್ರೀ ಹರಿಯೊಡನಾಡುತ ನಲಿಯುವ ಸಂತಸ ತೋರಮ್ಮ11 ಇಂದಿರೆ ಶ್ರೀರಮೆ ಭಾರ್ಗವಿಯೆ ನಂದತ್ರಯಾ ಸದಾಸುಶೀಲೆ ಸುಗಂಧಿ ಸುಂದರಿ ಮಂದಗ ಮನೆಯೆ ಚಂದದಿ ಬಾರಮ್ಮ 12 ಸುತ್ತೆಲ್ಲ ಸುರಸ್ತ್ರೀಯರು ಮುತ್ತಿನ ಛತ್ರ ಚಾಮರದರ್ಪಣ ಪಿಡಿದು ನೃತ್ಯಗಾಯನ ಮಾಡುತ ಕರೆವರು ಸತ್ವರ ಬಾರೆನುತ 13 ಶ್ರಮ ಪರಿಹರಿಸೆನುತಲಿ ಬೇಡುವೆನು ಮಮತೆಲಿ ಕರಗಳ ಮುಗಿಯುತ ಬೇಡಲು ಕಮಲನಾಭ ವಿಠ್ಠಲನೊಡನೆ ಶ್ರೀ- ಕಮಲೆಯು ಬರುತಿಹಳು14
--------------
ನಿಡಗುರುಕಿ ಜೀವೂಬಾಯಿ
ಸರಸಿಜಾಲಯೆ ನಿಲಯೆ ಪಸ್ಥಳದಲ್ಲಿ ನೆಲಸಿ ಸಜ್ಜನರ ರಕ್ಷಕಳೆಂದು ಅ.ಪಕ್ಷೀರಸಾಗರಜಾತೆ ಮಾರನಯ್ಯನ ಪ್ರೀತೆಸಾರಸದಳನೇತ್ರೆಮಾರಮಣನ ಮನಸಾರ ಸೇವಿಪ ಮುದ್ದುಕೀರವಾಣಿಯ ಭಕ್ತಸ್ತೋಮ ರಕ್ಷಕಳೆಂದು 1ಅಂಬುಧಿಶಯನ ಪೀತಾಂಬರಧಾರಿಯಶಂಖು ಚಕ್ರಾಂಕಿತಹರಿಶೌರಿಯಶಂಭರಾರಿಯ ಪಿತನ ನಂಬಿಸೇವಿಪ ಜಗ-ದಂಬ ನಿನ್ನಯ ಪಾದಾಂಬುಜಕ್ಕೆರಗುತ 2ಪದ್ಮನಾಭನ ರಾಣಿ ಪದ್ಮ ಸಂಭವೆ ದೇವಿಪದ್ಮಾಕ್ಷಿ ಪದ್ಮ ಪಾಣಿಯೆ ಸುಂದರಿಪದ್ಮಾಸನನ ಮಾತೆ ಪದ್ಮಮುಖಿಯೆ ಹೃ-ತ್ಪದ್ಮದಿ ಹರಿಪಾದ ಪದ್ಮವ ತೋರೆಂದು 3ಸಾರಸಾಕ್ಷಿಯೆ ಹರಿಯ ಆರಾಧಿಸುವ ಜನರ-ಪಾರದು:ಖವನೀಗಿಪೊರೆವೆಯೆಂದುಬಾರಿಬಾರಿಗು ನಿನ್ನಚಾರುದರ್ಶನವಿತ್ತುಕೋರಿದ ವರಗಳ ಬೀರಿ ಭಕ್ತರ ಕಾಯೆ 4ಕರುಣದಿ ಭಕುತರ ಕರೆದು ಕಾಪಾಡುವಬಿರುದು ನಿನ್ನದು ತಾಯೆ ತ್ವರಿತದಿ ಕಾಯೆಕರುಣಿಸೆ ಕಮಲನಾಭ ವಿಠ್ಠಲನ ರಾಣಿಮರೆಯದೆ ಹರಿಯ ಧ್ಯಾನವ ಕೊಟ್ಟು ಸಲಹೆಂದು 5
--------------
ನಿಡಗುರುಕಿ ಜೀವೂಬಾಯಿ