ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುದಿನವು ಶ್ರವಣಮನನಾದಿ ಸಾಧನ ಮಾಡು ಇನ್ನು ಸಂಶಯವ್ಯಾತಕೊ ಪ. ಏನು ಶಪಥವ ಮಾಡಲಿ ಮತವು ಹಿರಿದೆಂದು ಜ್ಞಾನಿಗಳ ಸಮ್ಮತವೊ ಅ.ಪ. ಗುರುಮಧ್ವಶಾಸ್ತ್ರವೆ ಸಕಲ ಶಾಸ್ತ್ರಧಿಕೆಂದು ಶಿರವರಿದು ಮುಂದಿರಿಸಲೆ ಪರಮತಜಾಲವೆಲ್ಲ ವೇದವಿರುದ್ಧವೆಂದು ಶರಧಿಯನು ನಾ ದಾಟಲೆ1 ಭಾಗವತಶಾಸ್ತ್ರವೆ ಬಹು ಭಾಗ್ಯವೆಂತೆಂದು ನೆಗಹಿ ಪರ್ವತವ [ನಿಲಿಸಲೆ] ಭಾಗವತ ನಿಂದಕಗೆ ಬಹು ನರಕವೆಂತೆಂದು ಪರ್ವ- ತಾಗ್ರದಿಂ ಧುಮುಕಲೆ 2 ವಿದಿತ ದೈವರೊಳಗೆ ವಿಷ್ಣು ಉತ್ತಮನೆಂದು ವೇದಂಗಳ ಒಡನುಡಿಸಲೆ ಅಧಿಕಾರಿಗಳೊಳಗೆ ಅಂಬುಜಸಂಭವನೆಂದು [ಕಾದೆಣ್ಣೆ]ಯೊಳು ಮುಣುಗ [ಲೆ] 3 ಪರಲೋಕಸಾಧನಕೆ ತಾರತಮ್ಯಮತವೆಂದು ಗರಳವನು ಕುಡಿಯಲೆ ಹರಿದಿನಕೆ ಮರುದಿನಕೆ ಸರಿಯಿಲ್ಲವೆಂತೆಂದು ಹರಿವ ಹಾವನು ಹಿಡಿಯಲೆ 4 ಗುರುಮಧ್ವರಾಯರೆ ಆತ್ಮರಕ್ಷಕರೆಂದು ಅನಲವ ಕೈ ಪಿಡಿಯಲೆ ಅಮಿತ ಗುಣಪೂರ್ಣನೆಂದು ಅ- ಶರೀರವನು ನುಡಿಸಲೆ 5
--------------
ವಾದಿರಾಜ
ಪರಮ ಪಾವನಕಾಯ ಗುರುರಾಯ ಜೀಯ ವರ ಭಾಗವತರ ಪ್ರಿಯ ಸುರರ ಸಹಾಯ ಪ. ಶ್ರೀ ತಂದೆ ಮುದ್ದುಮೋಹನ ದಾಸರೆಂದೆನಿಸಿ ವಾತ ಜನಕನ ಒಲಿಸಿ ವೈರಾಗ್ಯ ಧರಿಸಿ ಖ್ಯಾತಿಯನು ಪಡೆದ ಅನಾಥ ರಕ್ಷಕ ಸ್ವಾಮಿ ನೀತ ಗುರು ನಿಮ್ಮ ಪದಕೆ ನಾ ತುತಿಸಿ ನಮಿಪೆ 1 ಘನ ಅಂಶದಲಿ ನೆಲಸಿ ಅನವರತ ಸಲಹುವೊ ಮನವ ಮಾಡಿರಬಲೆ ಅಂಜಿ ಬೆದರೆ ಘನ ಜ್ಯೋತಿ ಸ್ವೀಕರಿಸಿ ತನುವಿಗಭಯ ತೋರಿ ಮನದಿ ಪದವನೆ ನಂಬೆ ರಕ್ಷಿಸಿದ ಗುರುವೆ 2 ಅಪಮೃತ್ಯು ಬಂದು ಬಹು ಅಪರಿಮಿತ ಭಯಪಡಿಸಿ ಸುಪಥ ಕಾಣದೆ ನಿಮ್ಮ ಪದವ ನಂಬಿರಲು ಸ್ವಪ್ನದಲಿ ನಿಜರೂಪ ಗುಪ್ತದಿಂದಲಿ ತೋರಿ ಆಪತ್ತು ಪರಿಹರಿಪೆನೆಂದಭಯವಿತ್ತ 3 ಪರಿಪರಿ ಅಪಮೃತ್ಯು ಪರಿಹಾರವನೆಗೈದು ಪರಮ ಹರುಷದಿ ಕಾಯ್ದು ಆಯುವನೆ ಇತ್ತು ಕರಕರೆಯ ಬಿಡಿಸಿ ಕಾಯ್ದಂಥ ಘನ ಚರಿತೆಯನು ಅರಿತು ವರ್ಣಿಸಲರಿಯೆ ಪರಮ ಪ್ರಿಯ ದೊರೆಯೆ 4 ಆಪನ್ನ ರಕ್ಷಕರೆ ಶ್ರೀ ಪತಿಯ ತೋರುವ ಘನಶಕ್ತರೆ ಕಾಪಾಡುವೋ ಕರ್ತರೆಂದು ನಾ ನಂಬಿರುವೆ ಗೋಪಾಲಕೃಷ್ಣವಿಠ್ಠಲನ ನಿಜ ಪ್ರಿಯರೆ 5
--------------
ಅಂಬಾಬಾಯಿ
ಸಂಸಾರದೊಳ್ ಪ ನಾನುನನ್ನದೆಂದು ವೃಥಾ ನರಳಿಬಳಲುವೆ ಅ.ಪ ತಂದೆ ತಾಯಿಯು ಬಂಧು ಬಳಗವು ಸಂ ಬಂಧಿಗಳೆಲ್ಲರು ಸತಿಸುತರೂ ಎಂದಿಗು ರಕ್ಷಕರೆಂದು ನೀ ತಿಳಿದು ಮಂದಮತಿಯೆ ಮುಂದೇ ಕೆಡುವೆಯೊ 1 ದುರ್ವಿದಗ್ಧ ವಿಜ್ಞಾನನಾಗಿ ಗರ್ವಪಡಲೂ ಸುಪರ್ವರ್ ನಗರೇ 2 ಸತ್ಯವೆಂಬುವದು ಮಾತೃ ಪಿತನು ಸ- ರ್ವೋತ್ತಮ ಜ್ಞಾನವು ಭೂತದಯೆಯು ಸ- ನ್ಮಿತ್ರಧರ್ಮವು ಭ್ರಾತೃಗಳ್ ಶಾಂತಿಯು ಪತ್ನೀ ಕ್ಷಮೆಯೂ ಪುತ್ರರ್ ನಿತ್ಯರಿವರು 3 ನಡೆವುದು ಯಾತ್ರೆಯು ನುಡಿವುದು ಮಂತ್ರ ನಡೆಸುವನು ಎಂದು ಧೃಡವಾಗಿ ನಂಬದೆ4 ಧ್ಯಾನನದೀಯೊಳು ಸ್ನಾನಮಾಡಿಸು- ಶ್ರೀನಿವಾಸನ ಸೇವೆಯಿದೆನ್ನದೆ 5 ಮೂರು ವಿಧವಾದ ಜೀವ ಕೋಟಿಯೊ- ಳಾರು ನಾನೆಂದು ದೂರದೃಷ್ಟಿಯಿಂ ಧೀರ ನಾಗಿದರ ಪರವ ಗಾಣದೆ 6 ನೀಮನವಲಿದು ವ್ಯರ್ಥನಾದೆ ನಾಮಾ ಜಪಿಸೀ ಕಾಮಿತ ಪಡಿಯದೆ 7
--------------
ಗುರುರಾಮವಿಠಲ