ಮಂಗಳಂ ಮಂಗಳಂ ಲಕ್ಷ್ಮೀಶಗೆ ಮಂಗಳಂ
ಮಾಕಮಲಾಸನ ವಂದಿತ ಶೃಂಗಾರಶೇಖರ ತುಂಗಗಿರೀಶ ಪ.
ಶ್ರೀಲೋಲ ಶುಭಗುಣಜಾಲಪಾಲಿತ ಸತ್ವ
ಶೀಲ ಸುಂದರ ವನಮಾಲ
ನೀಲಕುಂತಲ ನಿರ್ಜಿತಾಳಿ ಕುಲಾನನ
ಕಪೋಲ ಗೋಪಾಲ 1
ಶರಣಾಗತ ರಕ್ಷಕರಣ ಧುರೀಮ ಮ-
ದ್ಫರಣ ತ್ರಿಲೋಕೀ ಧಾರಣ
ಕರುಣಾಮೃತ ಹರ ತರುಣಾರ್ಕ ಕೋಟಿಭಾ
ಭರಣ ರಮಾಧೃತ ಚರಣಾರವಿಂದ 2
ನಿತ್ಯ ಪದ್ಮ ಸರೋವರ
ಪದ್ಮ ನಿರಂತರ ಸಂಚಾರ
ಪದ್ಮನಾಭ ಹೃತ್ಪದ್ಮ ಸುಸಂಸ್ಥಿತ
ಪದ್ಮ ಪತ್ರ ನೇತ್ರ ಪದ್ಮಜ ಜನಕ 3
ಇಂದಿರಾವರ ಪೂರ್ಣೇಂದು ನಿಭಾನನ
ವಂದನೀಯ ವಾಸುದೇವ
ಮಂದಿರೆ ಮಮ ನಿತ್ಯಾನಂದದಾಯಿ ನಿಜ
ಬಂಧುತಯಾಸ್ಥಿತ ಮಂದಹಸಿತೆ 4
ದಾಸೀಕೃತ ಕಂಜಜೇಶಾಹೀಶ ವಿ-
ವೇಶಾಮರೇಶ ರಮೇಶಾ
ಶೇಷ ಭೂಧರ ನಿಜ ವಾಸ ದಯಾರಸ
ಮಾಶುಪ್ರವರ್ಷಯ ಹೇ ಶ್ರೀನಿವಾಸ 5