ಫಲಹಾರವ ಮಾಡೋ ಪದುಮಲೋಚನನೆ|
ಒಲಿದು ಶ್ರೀ ಭೂದೇವಿ ಅರಸಿಯರೊಡನೆ ಪ
ಕದಳೀ ಕಪಿಥ್ಥಶರ್ಕರ ಮೋದದಿಂದಲೀ|
ಒದಗಿ ಬೆಂಡುಖರ್ಜೂರಿ ಘೃತಮೋಪ್ತದಿಂದಲಿ1
ಕಳೆದ ಸಿಗುರಿಯಾ ಕಬ್ಬಿನ ಪೇರು ಬದರಿಯಾ|
ಬಲಿದ ಪರಿಮಳ ರುಚಿಗಳ ಒಪ್ಪನಿಂದಾ 2
ವಸುಧೆಯೊಳುಳ್ಳ ಸಕಲ ಫಲಸಾರವಾ|
ಬಿಸಿಯಾದ ಪಲ್ಗೆನೆಯ ಮಧುಸಹಿತಾ 3
ಗುರುಮಹೀಪತಿಸ್ವಾಮಿ ಶರಣ ರಕ್ಷಕನೇಮಿ|
ಸುರರಿಗಮೃತವೆರೆದಾನಂದ ಕರದಲಿ4