ಒಟ್ಟು 11 ಕಡೆಗಳಲ್ಲಿ , 10 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣವೇಕೆ ಬಾರದಯ್ಯಾ ಕರಿವರದನೆ ಪ ಶರಣ ರಕ್ಷಕನೆಂದು ನಿನ್ನ ಮೊರೆಯ ಹೊಕ್ಕೆನೊ ಸರಸಿಜಾಕ್ಷ ಮರಣ ಕಾಲದಿ ಮಗನ ಕರೆದ ಪುರುಷ ಪುಣ್ಯ ಶರಧಿಯೇನೊ ಅ.ಪ. ತುತಿಸಸಲಿಲ್ಲವೆಂದು ಎನ್ನ ಹಿತವಗೈಯದೆ ಜರಿಪರೇನೊ ತುತಿಸಲಾಪವೇ ಶ್ರುತಿಗಳನ್ನು ಮಿತಿಗೆ ಸಿಲ್ಕದ ನಿನ್ನ ಮಹಿಮೆ 1 ಏನು ಸಾಧನವವÀ ಮಾಡಲಿಲ್ಲವೆಂದು ಕೈಬಿಡುವೆಯೇನೊ ನೀನು ದಯಮಾಡಿದಲ್ಲದೆ ಏನು ಸಾಧನ ಮಾಡಲಾಪೆನೊ 2 ಪಾಪಪುಣ್ಯ ಕರ್ಮಗಳಿಗೆ ನೀನೆ ಪ್ರೇರಕನಲ್ಲವೇನೊ ಶ್ರೀ ಪರಾತ್ಪರ ನೀ ಸ್ವತಂತ್ರ ನಾ ಪರಾಧೀನನಲ್ಲವೆ 3 ಪುಣ್ಯಗೈದವರಲಿ ಕರುಣವನು ಗೈವುದೇನು ಮಹಿಮೆ ಘನ್ನ ಪಾಪಿಗಳಲಿ ನೀ ಪ್ರಸನ್ನನಾಗಲು ಖ್ಯಾತಿಯಲ್ಲವೆ 4 ಪತಿತಪಾವನ ದೀನರಕ್ಷಕ ಶ್ರಿತ ಜನಮಂದಾರನೆಂಬ ವಿತತ ಬಿರುದು ಬರಿದೆ ಪೇಳೋ ಗತಿ ಪ್ರದಾಯಕನಲ್ಲವೇನೊ 5 ದುರಿತ ರಾಶಿ ನೋಡಿ ಬೆದರಿ ನಿಂತೆಯೇನೊ ನೀನು ದುರಿತ ದೂರನಲ್ಲವೇ ನಿನ್ನ ಸ್ಮರಣೆ ನೋಡದ ದುರಿತವಿಹುದಿ 6 ತರಳತನದ ಸಲಿಗೆಯಿಂದ ಪರಿಪರಿಯಲ್ಲಿ ನುಡಿದೆನಯ್ಯಾ ಪರಮ ತತ್ವವರಿಯೆ ನಾನು ಪೊರೆಯೊ ಎನ್ನ ಕರಿಗೀರೀಶ 7
--------------
ವರಾವಾಣಿರಾಮರಾಯದಾಸರು
ಚಿತ್ತೈಸಬೇಕೆನ್ನ ಮಾತು ಕೇಳಯ್ಯ ಮತ್ತೆ ಹುಟ್ಟದಂತೆ ಮಾಡೊ ರಂಗಯ್ಯ ಪ ನಾನಾ ಯೋನಿಯಲೆನ್ನ ನೀನಿಡದಿರಯ್ಯ ಶ್ರೀನಿವಾಸ ಬೇಡಿಕೊಂಬೆ ಶ್ರೀ ರಂಗಯ್ಯ 1 ದೀನ ರಕ್ಷಕನೆಂದು ದೈನ್ಯದಿಂ ಬೇಡುವೆ ಜ್ಞಾನವಂತನ ಮಾಡಿ ಸಲಹೊ ರಂಗಯ್ಯ 2 ದಾನವಾಂತಕ ನಿನ್ನ ಭಕುತರಪರಾಧ ನೀನೆಣಿಸದೆ ನಿರುತ ಸಲಹೊ ರಂಗಯ್ಯ 3 ನಾ ನಿನ್ನ ಮರೆತರೂ ನೀ ನನ್ನ ಮರೆಯೆ ಏನೆಂಬೆ ನಿನ್ನ ಕರುಣಕೆ ಶ್ರೀ ರಂಗಯ್ಯ 4 ಭಾನು ಕೋಟಿ ಪ್ರಕಾಶ ಶ್ರೀ ರಂಗಯ್ಯವಿಠಲ ಮಾನದಿಂದಲಿ ಪೊರೆಯೊ ಶ್ರೀನಿಧಿ ರಂಗಯ್ಯ 5
--------------
ರಂಗೇಶವಿಠಲದಾಸರು
ಜನನ ಮರಣ ಎರಡು ಇಲ್ಲವೊ ತಾ ತಿಳಿದ ಮೇಲೆ ಪ ಮನದೊಳಿರುವ ಮಮತೆ ಅಳಿದು ಘನವಿವೇಕವಾಗಿ ಕಾಣುವ ಇನಕುಲೇಶನನ್ನು ಬಿಡದೆಅನುರಾಗದೊಳು ಭಜಿಸಿದವಗೆ ಅ.ಪ ಆರುಮೂರು ಮೀರಿ ನೋಡೆಲೈ ಅಲ್ಲಿರುವ ತಾರಕದಾರಿ ಪ್ರಣವ ಸಾರುತಿದೆ ನೋಡೈ ಘೋರ ಕತ್ತಲೆಯನರಿದು ಮಾರಜನಕನನ್ನು ನೆನೆದು ಏರಿ ಶಿಖರದೊಳಗೆಯಿರುವ ತೇರು ಕಂಡುಬಂದಬಳಿಕ 1 ದಾನವಾರಿಯನ್ನು ಕಾಣೆಲೊ ಶ್ರೀಪರಮ ಚರಿತ ಗಾನಲೋಲನನ್ನು ಕಾಣೆಲೈ ಭಾನುಕೋಟಿರೂಪನಹುದು ಗುರುವು ತುಲಸಿರಾಮದಾಸ ದೀನರಕ್ಷಕನೆಂದು ಭಜನೆ ಮಾಡಿಕೊಂಡು ಬಂದಬಳಿಕ 2
--------------
ಚನ್ನಪಟ್ಟಣದ ಅಹೋಬಲದಾಸರು
ಬಂದ ದುರಿತಗಳೆಲ್ಲ ಪರಿಹರಿಸಿ ಪೊರೆವದು ಪ ಎಷ್ಟು ಪರಿಯಲಿ ನಿನ್ನ ಎಷ್ಟು ನಾ ಮೊರೆ ಇಡಲು ಕಷ್ಟವನು ಕಳೆವ ಭರ ಕಾಣಲಿಲ್ಲ ದೃಷ್ಟಿಲಿ ನೋಡದೆ ಹೋಗಿ ದಣಿಸುವ 1 ಸಾರ್ಥಕವು ಏನು ಎನ್ನ ಸಲಹದಿರಲು ಕೀರ್ತಿವಂತನು ಎನಿಸಿಕೊಂಡು ಕಾಯದಿರೆ ಅಪಕೀರ್ತಿ ಬಾರದೆ ನಿನಗೆ ಅಧಿಕ ಜನರೊಳಗೆ 2 ಧಾರುಣಿಯೊಳಧಿಕರಿನ್ನಾರು ನಿನಗಿನ್ನು ತೋರು ಮಾರಜನಕನಾದ ಮಹಾಮಹಿಮನೆ ಧೀರ 'ಹೊನ್ನಯ್ಯ ವಿಠ್ಠಲ’ ದೀನ ರಕ್ಷಕನೆಂದು ಸಾರುತದೆ ನಿಮ್ಮ ಕೀರ್ತಿ ಸಕಲ ಲೋಕದಲಿ 3
--------------
ಹೆನ್ನೆರಂಗದಾಸರು
ಬಂದೆನ್ನ ಮನಮಂದಿರದಲಿ ನಿಲ್ಲೊ | ಹೇ ಶ್ರೀನಿವಾಸ ಬಂದೆನ್ನ ಮನಮಂದಿರದಲಿ ನಿಲ್ಲೊ ಪ. ಇಂದಿರೇಶ ವೈಕುಂಠದಿಂದ ನೀ ಬಂದು ಈಗ ಎನ್ನ ಹೃದಯ ಕಮಲದಿ ಅ.ಪ. ಜಗದಂತರಾತ್ಮ ನಿರ್ಮಲಾತ್ಮ | ನಿರ್ಗತ ದುರಿತಾತ್ಮ ನಿಗಮಾದಿಗಳೊಂದ್ಯ ನೀ ನಿತ್ಯಾತ್ಮ | ಜೀವಂತರಾತ್ಮ ಸುಗುಣವಂತ ನಿನ್ನ ಬಗೆ ಬಗೆ ಮಹಿಮೆಯ ಪೊಗಳಬಲ್ಲೆನೆ ನಾ ಖಗವಾಹನನೆ 1 ಅರಿಯೇನೋ ಅನ್ಯರ ಹರಿ ಸರ್ವೇಶ | ಹೃತ್ಕಮಲದಿ ವಾಸ ಪರಿಹಾರಗೈಸೊ ಈ ಭವಕ್ಲೇಶ | ನಂಬಿದೆ ಸರ್ವೇಶ ಅರಘಳಿಗೆ ನಿನ್ನಗಲಿರಲಾರೆನೊ ಸಿರಿಸಹಿತದಿ ನಿನ್ನರಮನೆಯಿಂದಲಿ 2 ಇಂದು | ನೀ ರಕ್ಷಕನೆಂದು ಕರಕರೆಗೊಳಿಪುದು ಧರ್ಮವೆ ನಿಂದು | ನೀ ಕಾಯಲಿಬೇಕಿಂದು ಸರಿಯಲ್ಲವು ಈ ತೆರದಲಿ ತೊರೆವುದು ಶರಣ ರಕ್ಷಕನೆಂಬೊ ಬಿರುದು ಪೊತ್ತಿಲ್ಲವೆ 3 ಎಂತೆಂತು ಸಹಿಸಲಿ ಈ ಭವಕ್ಲೇಶ | ಜೀವಾಂತರವಾಸ ಕಂತುಪಿತ ಎಣಿಪರೆÀ ಎನ್ನಯ ದೋಷ | ಸರಿಯಲ್ಲ ಸುರೇಶ ಇಂತು ನಿನಗೆ ಒಪ್ಪಿಸಿದರೊ ಗುರುಗಳು ಚಿಂತಿತಾರ್ಥ ನಿನಗೆನ್ನ ತರ ತಿಳಿಯದೆ 4 ಬೆಟ್ಟದ ಒಡೆಯ ಬೇಗನೆ ಬಾರೊ | ಹೃತ್ಕಮಲದಿ ತೋರೊ ಶ್ರೇಷ್ಠ ಶ್ರೀ ಗುರುಗಳ ಕರುಣವ ಬೀರೊ | ಸಲಹುವರಿನ್ಯಾರೊ ಮುಟ್ಟಿ ಭಜಿಪೆ ನಿನ್ನ ಶ್ರೇಷ್ಠ ಪದಂಗಳ ಸೃಷ್ಟೀಶ ಗೋಪಾಲಕೃಷ್ಣವಿಠ್ಠಲನೆ 5
--------------
ಅಂಬಾಬಾಯಿ
ಬಾಗಿ ಬೇಡುವೆ ಪ್ರಾಣರಾಯ ಭಕ್ತಪ್ರಿಯ ಪ ಭಾಗವತ ಜನಪ್ರಿಯ ಅ.ಪ ಚಿತ್ರಾವತಿಯ ತೀರವಾಸ ಭಕ್ತಪೋಷ ಗಾತ್ರ ಮರೆದು ನಿನ್ನ ಸ್ತೋತ್ರ ಮಾಡುತಲಿ1 ಬಂದೆ ನೀನೇ ಗತಿಯೆಂದು ಎನ್ನ ತಂದೆ ಮುಂದಿನಾಗಮಗಳ ಒಂದು ನಾನರಿಯೆ 2 ಅನಾಥ ರಕ್ಷಕನೆಂದು ಎನ್ನಬಂಧು ಪ್ರಾಣನಾಥವಿಠಲ ಸರ್ವರಿಗೆ ಬಂಧು ಎಂದು 3
--------------
ಬಾಗೇಪಲ್ಲಿ ಶೇಷದಾಸರು
ಭಂಡನೆಂದು ಎನ್ನ ನೀ ತಿಳಿಯೋ ಅಖಿಲಾಂಡನಾಯಕ ಪ ತಂಡ ತಂಡದಿ ಒದಗಿ ಬರುತಿಹ ಗಂಡ ಸಂತತಿ ನಾ ಕಂಡು ಬೆದರುವ ಷಂಡನಲ್ಲವೊ ಪುಂಡರೀಕ ಲೋಚನನೇ ದೊಡ್ಡ 1 ಮಂದ ಮಾನವರಿಂದ ನುಡಿಸುವ ನಿಂದೆ ವಚನಗಳಿಂದ ಮನ ನೊಂದರೂ ಗೋವಿಂದ ನಿನ್ನನು ಬಂಧುವೆಂದು ನಂದದಿ ಪೊಗಳುವ 2 ದ್ವೇಷಿ ಜನಗಳೂ ರೋಷದಿಂದಲಿ ಶೋಷಿಸಿದರೂ ನೀ ಕಮ ಲೇಶ ಎನ್ನನು ಪೋಷಿಸುವನೆಂದು ಘೋಷಿಸುವೆನೋ ಶೇಷಶಯನನೇ 3 ಹೀನ ಮಾನವರಿಂದ ನೀ ಅವಮಾನ ನೀಡಿದರೂ ವರ ಜಾನಕೀಶನೆ ನೀನು ಎನ್ನಯ ಮಾನರಕ್ಷಕನೆಂದು ಅರಿಯುವ 4 ಸಣ್ಣ ಮಾನವರಿಂದ ಎನ್ನಯ ಸಕಲ ವೈಭವವು ದೊಡ್ಡ ಸೊನ್ನೆಯಾದರು ನಿನ್ನ ಪಾದಗ ಳನ್ನು ಬಿಡೆನೊ ಪ್ರಸನ್ನ ಮೂರುತಿ 5
--------------
ವಿದ್ಯಾಪ್ರಸನ್ನತೀರ್ಥರು
ಮೂಢನು ನಾನಯ್ಯ ನಿನ್ನನುಬೇಡಲರಿಯೆನಯ್ಯಪ. ದಯಾಸಿಂಧು ಹರಿಯೆ ದಯದಲಿ ನೋಡು ವಜ್ರದಖಣಿಯೆಭಯಪಡುವೆನು ಈ ಭವಸಾಗರದಿ ಅ-ಭಯವ ಪಾಲಿಸೊ ಹಯವದನನೆ ಹರಿ 1 ದಿಕ್ಕುಯಾರು ಇದಕೆ ಪಾಪವು ಉಕ್ಕಿತು ದಿನದಿನಕೆಸೊಕ್ಕಿ ಸಿಲುಕಿದೆನು ಯಮನ ಪಾಶಕೆಚಿಕ್ಕವನನು ನೋಡಕ್ಕರದಲಿ ಹರಿ 2 ಸಿರಿಹಯವದನನ್ನ ಶರಣರ ಶಿರೋಮಣಿರನ್ನಗುರುದೊರೆಯೆ ನಂಬಿದೆ ನಿನ್ನಕರಿಯ ರಕ್ಷಕನೆಂದು ಕರೆವೆನೊ ಮುನ್ನ3
--------------
ವಾದಿರಾಜ
ಕಂಡೀರೆ ನೀವೆಲ್ಲರೂ ಶ್ರೀಕೃಷ್ಣನ ಕಂಡೀರೆ ಪಕಂಡೀರೆ ಪಾಂಡುರಂಗನನೂ ಕಳಕೊಂಡಿರೆಪಾಪ ಸರ್ವವನೂ ಅಂಡಜವಾಹನನಾಗಿಸಂಚರಿಸುವಪುಂಡರೀಕಾಕ್ಷಬ್ರಹ್ಮಾಂಡ ನಾಯಕನನ್ನೂ 1ಎಂಟನೆ ಅವತಾರಿಯೆನಿಸಿ ದೇವಕಿ ಎಂಟನೇಗರ್ಭದಿ ಜನಿಸಿ ಎಂಟನೆಮಾಸಶ್ರಾವಣಕೃಷ್ಣಾಷ್ಟಮಿ ದಿನ ನಟ್ಟಿರುಳಿನಲಿಸೃಷ್ಟಿಗಿಳಿದ ಶ್ರೀಕೃಷ್ಣನ 2ಮಧುರಾ ಪಟ್ಟಣದಿ ಮೈದೋರಿ ಬಹುವಿಧವಾಗಿ ಗೋಕುಲದೊಳಗಾದಧಿಘೃತಚೋರಕನೆಂದು ಯಶೋದೆಗೆಪದುಮಾಕ್ಷಿಯರು ಬಂದು ದೂರುವ ಕೃಷ್ಣನ 3ದನುಜೆ ಪೂತನೆಯಸುಗೊಂಡು ತನ್ನಜನನಿಗೋಪಿಗೆ ಬಾಯೊಳ್ ತೋರ್ದ ಬ್ರಹ್ಮಾಂಡವನಜಾಕ್ಷಿಯರ ಕೂಡಿ ಯಮುನಾ ತೀರದೊಳಾಡಿವನಿತೆಯರುಡುವ ಶೀರೆಗಳೊಯ್ದ ಕೃಷ್ಣನೇ 4ಗೋವಳರರಸನೆಂದೆನಿಸಿ ಶಿರಿಗೋವರ್ಧನವೆತ್ತಿಗೋವ್ಗಳ ಮೇಸಿ ಪಾವಕನುಕಾಳಿಮರ್ದನ ಗೈದು ಮಾವ ಕಂಸನ ಗೆಲ್ದಮಧುರೆಯೊಳ್ ಕೃಷ್ಣನಾ 5ದ್ವಾರಕಾಪುರವೊಂದ ರಚಿಸಿ ಬಲವೀರರಾಮನ ದೊರೆರಾಯನೆಂದೆನಿಸಿನಾರಿಯರ್ ಹದಿನಾರು ಸಾವಿರ ವಡಗೂಡಿಮಾರಕೇಳಿಯೊಳ್ ಮುದ್ದು ತೋರುವ ಕೃಷ್ಣನ 6ಶರದ ಸೇತುವಿಗೆ ಮೈಯ್ಯಾಂತ ಉಟ್ಟಶೆರಗೀಗೆ ವರವ ದ್ರೌಪದಿಗೊಲಿದಿತ್ತನರನ ಸಾರಥಿಯಾಗಿ ಕುರುನೃಪರನು ಗೆಲ್ದುಧರೆಯ ಪಟ್ಟವ ಧರ್ಮಜನಿಗಿತ್ತ ಕೃಷ್ಣನೆ 7ದುಷ್ಟ ನಿಗ್ರಹನೆಂಬ ಬಿರುದೂ ಭಕ್ತರಕ್ಷಕನೆಂದು ಮೂರ್ಲೋಕವದೆಂದೂಸೃಷ್ಟಿಯೊಳ್ ನರಜನರು ನಮಿಸಿ ಪೂಜಿಸಲೆಂದುಬಿಟ್ಟರು ದ್ವಾರಕಾಪುರವ ರಾಮಕೃಷ್ಣರು 8ಹಡಗಿನ ಮೇಲೇರಿ ಬಂದೂ ನಮ್ಮಉಡುಪಿಅನಂತೇಶನಿದಿರಾಗಿ ನಿಂದೂಕಡು ಕೃಪೆಯೊಳ್ ಭಕ್ತ ಕನಕನಿಗೊಲಿದವೊಡೆಯ ಗೊೀವಿಂದ ಗೋಪಾಲಕೃಷ್ಣನ 9
--------------
ಗೋವಿಂದದಾಸ
ನಿನ್ನ ನಂಬಿದೆ ನೀರಜನಯನಎನ್ನ ಪಾಲಿಸೊಇಂದಿರೆರಮಣಪಮುನ್ನ ಪಾಂಚಾಲಿಯ ಮೊರೆಯ ಲಾಲಿಸಿ ಕಾಯ್ದಪನ್ನಗಶಯನ ನೀಪರಮಪುರುಷನೆಂದುಅ.ಪಹರಿಸರ್ವೋತ್ತಮನಹುದೆಂಬ ಬಾಲಕನಹಿರಣ್ಯಕಶಿವು ಪಿಡಿದು ಬಾಧಿಸಲು ||ನರಹರಿ ರೂಪಿಂದಲವನ ವಕ್ಷವ ಸೀಳ್ದೆಪರಮವಿಶ್ವಾತ್ಮಕನಹುದೆಂದು ಮೊರೆ ಹೊಕ್ಕೆ1ಪಾದವ ಪಿಡಿದು ನೀರೊಳಗೆಳೆದ ನಕ್ರನಬಾಧೆಗಾರದೆ ಕರಿಮೊರೆಯಿಡಲು ||ಆದಿ ಮೂರುತಿ ಚಕ್ರದಿಂದ ನಕ್ರನ ಕೊಂದವೇದಾಂತವೇದ್ಯ ಅನಾಥ ರಕ್ಷಕನೆಂದು 2ಇಳೆಗೊಡೆಯನ ತೊಡೆ ನಿನಗೇತಕೆಂದು ಆಲಲನೆಕೈ ಪಿಡಿದೆಳೆಯಲರ್ಭಕನ ||ನಳಿನಾಕ್ಷ ನಿನ್ನನೆದೆಯೊಳಿಟ್ಟು ತಪವಿರ್ದಬಲು ಬಾಲಕಗೆ ಧ್ರುವ ಪಟ್ಟಿಗಟ್ಟಿದನೆಂದು 3ಸುದತಿಗೌತಮಸತಿ ಮುನಿಶಾಪದಿಂದಲಿಪಢದಿ ಪಾಷಾಣವಾಗಿ ಬಿದ್ದಿರಲು ||ಮುದದಿಂದಲಾಕೆಯಮುಕ್ತಮಾಡಿದಯೋಗಿಹೃದಯ ಭೂಷಣ ನಿನ್ನ ಪದ ವೈಭವವ ಕಂಡು 4ಪರಮಪಾವನೆ ಜಗದೇಕಮಾತೆಯನುದುರುಳರಾವಣ ಪಿಡಿದು ಕೊಂಡೊಯ್ಯಲು ||ಶರಣೆಂದು ವಿಭೀಷಣ ಚರಣಕೆರಗಲಾಗಿಸ್ಥಿರಪಟ್ಟವನು ಕೊಟ್ಟ ಜಗದೀಶ ನೀನೆಂದು 5ಅಂಬರೀಷನೆಂಬನೃಪತಿದ್ವಾದಶಿಯನುಸಂಭ್ರಮದಿಂದ ಸಾಧಿಸುತಿರಲು ||ಡೊಂಬೆಯಿಂದದೂರ್ವಾಸಶಪಿಸಲಾಗಿಬೆಂಬಿಡದಲೆ ಚಕ್ರದಿಂದ ಕಾಯ್ದವನೆಂದು 6ಧರೆಯೊಳು ನಿಮ್ಮ ಮಹಿಮೆಯ ಪೊಗಳ್ವಡೆಸರಸಿಜೋದ್ಭವ-ಶೇಷಗಸದಳವು ||ಸ್ಮರಣೆಮಾತ್ರದಿ ಅಜಾಮಿಳಗೆ ಮೋಕ್ಷವನಿತ್ತಪುರಂದರವಿಠಲ ಜಗದೀಶ ನೀನೆಂದು7
--------------
ಪುರಂದರದಾಸರು
ಸ್ಥಾಣುಮಹೇಶ್ವರ ತ್ರಿನಯನ ||ಶಂಕರ||ಮಾಣದೆಸಲಹೋ ರುದ್ರಾಣಿ ಮನೋಹರ ಪಪೂರ್ಣ ಕೃಪೆಯೊಳ್ ನಿನ್ನ | ಶರಣನೆಂದೆನಿಸೆನ್ನ ಅಬಾಣನಿಗೊಲಿದಾತಣ್ಗದಿರನಿಶೇಖರ |ಭೂತನಾಥನೆಭವ| ಭೀತಿವಿನಾಶನೆ |ಪಾತಕಹರಸುರ | ವ್ರಾತಾನಮಿತನೆ ಚಭೂತಳದೊಳಗೆ ಸರ್ವಾರ್ಥರಕ್ಷಕನೆಂದು |ಖ್ಯಾತಿಯ ತಳೆದ ಕಾತ್ಯಾಯನಿ ರಮಣಾ 1ರುದ್ರಚಮಕಗಳಿಂದ | ಲಭಿಷೇಕವಗೈದು |ಶ್ರದ್ಧೆಯೊಳರ್ಚಿಸಲಾರೇ | ಪತ್ರೆಯ ಕೊಯ್ದು |ರುದ್ರಾಕ್ಷಿಯು ಭಸ್ಮಲೇಪನ ಧರಿಸುತ |ಪ್ರದೋಷದ ವ್ರತವರಿಯೆನ್ನುದ್ಧರಿಸೊ 2ಸುಗುಣಶರಧಿಲಿಂಗ | ಪೂಜೆ ವಿನೋದಿತ |ಮೃಗದ ನೆವದಿ ಪಾರ್ಥಗೊಲಿದಕೈರಾತ|ಜಗದೀಶ್ವರನೆ ಗೋವಿಂದನಸಖನಿನ್ನ |ಮೊಗವ ತೋರಿಸುದಾಸಗೊಲಿದು ನೀ ದಯದಿ 3
--------------
ಗೋವಿಂದದಾಸ