ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿದೆನೊ ನಿನ್ನ ಅಂಬುಜನಯನ ಕೃ ಪಾಂಬುಧೆ ದೃಢದಲಿ ಪ ಸಂಭ್ರಮದಲಿ ಕಿವಿ ತುಂಬುತಿರುವ ಆ ಡಂಬರ ವಚನಕೆ ಮುಂಬರಗೊಳ್ಳುತ ಅ.ಪ ನವ ಘನ ನಿಭಕಾಯ ನಿನ್ನಯ ಕರುಣಮಯ ಸಹಾಯ ವಿಲ್ಲದೆ ಬಿಗಿಯುತಿರುವ ಮಾಯಾ ಪಾಶವ ತೊರೆಯಲಳವೆ ಜೀಯಾ ನಿನ್ನಯ ದಯವ ಪಡೆದ ಪರಿಯನರುಹುವ ಯತಿವರೇಣ್ಯ ಗುರುಮಧ್ವರಾಯರ ಪರಮ ಸಮಯ ಸಾರಗಳನು ಸಂತತ ಶ್ರವಣ ಮನನ ಧ್ಯಾನಗಳಿಂದ ಪರಿಚಯ ಪಡೆದು ದು ಷ್ಟ ವಿಷಯಗಳಲಿ ಮತಿಯನು ಮುರಿಯುವಂತೆ ಕರುಣಿಸೋ ಸುಗುಣಾಲಯ 1 ನೀರಜದಳ ನೇತ್ರ ವರ ಸುಖ ಚಿನ್ಮಯೈಕ ಗಾತ್ರ ಸುಜನ ಮಿತ್ರ ಸುರವರ ಸರಸಿಜಭವ ಪುತ್ರ ರುಚಿರರ ಮುಕುಟಾಕ್ಷಪಾತ್ರ ನಿನ್ನಯ ವಿವಿಧ ಲೀಲೆಗಳು ಚಿತ್ರವಿಚಿತ್ರವು ಅರಿತೆನೆಂದು ತಿಳಿದು ಮೆರೆಯುತಲಿರುವ ನರರ ಮದವ ಮುರಿದು ದೈನ್ಯದಿಂದಲಿ ಮರೆತೆನೆಂದು ದಿನದಿನದಲಿ ಭಜಿಪರ ಪೊರೆವ ಪರಮ ಕರುಣಾರಸಮಯನೆ 2 ದೀನಭಕುತರನ್ನು ಪೊರೆಯುವ ದಾಸಿಯೆಂದು ನಿನ್ನ ಪೊಗಳುವ ಮಾನತತಿಗಳನ್ನು ಸಂತತ ಧ್ಯಾನ ಮಾಡಿ ಎನ್ನ ಕ್ಲೇಶವ ಮೌನದಿಂದ ಇನ್ನೂ ಸಹಿಸುತ ಜಾನಕೀಶ ತವ ಪಾದಕಮಲದ ರೇಣುವನ್ನು ಶಿರದಿ ಧರಿಸುತಲಿ ಅನು ಮಾನವನ್ನು ತೊರೆದು ಮುದದಿ ಸುವಿಮಲ ಜ್ಞಾನಮೂರ್ತೆ ಜ್ಞಾನಿವರ ಪ್ರಸನ್ನನೆ ನೀನೆ ಎನ್ನ ರಕ್ಷಕನೆಂದರಿಯುತ 3
--------------
ವಿದ್ಯಾಪ್ರಸನ್ನತೀರ್ಥರು