ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಸತ್ಯವಂತನೊ ನೀನು ಸರಸಿಜಾಕ್ಷ ಸಿರಿ ನಿತ್ಯಾವಿಯೋಗ ಪ. ಶ್ರೀನಿವಾಸನೆ ಕೃಷ್ಣ ಭಾನು ಪ್ರಕಾಶ ಹರಿ ಏನೆಂಬೆ ನಿನ್ನ ಪ್ರಭಾವವನ್ನು ನಾನಾ ವಿಧದಿಂದ ಭಕ್ತರ ಕಾಯ್ವ ನರಹರಿಯೆ ಮಾನವಂತರ ಕಾಯ್ವ ದಾನವಾಂತಕನೆ 1 ಕೃಷ್ಣಮೂರುತಿ ನಿನ್ನ ದರುಶನದ ಕಾರಣದಿ ಕ್ಲೇಶ ತಂದೊಡ್ಡಿ ಇಷ್ಟು ಪರಿಯಲಿ ಎನ್ನ ಮನವ ಶೋಧಿಸಿ ನೋಡಿ ಕಷ್ಟ ಕಳೆದೆಯೊ ಈಗ ಕರುಣಾಳು ದೇವ 2 ಗುರುಗಳಿಗೆ ಬಂದಂಥ ರೋಗವನೆ ಪರಿಹರಿಸಿ ಕರುಣಿಸಿದೆ ಮನಕೆ ಬಹು ಆನಂದವನ್ನು ಪರತರನೆ ಇದರಂತೆ ಭವರೋಗವನೆ ಹರಿಸಿ ನಿರುತ ನಿನ್ನಯ ಪಾದಸ್ಥಾನ ನೀಡೆನಗೆ 3 ಸುರಪನಿಗೆ ಬಂದಂಥ ಪರಿಪರಿಯ ಕಷ್ಟದಿಂ ಹರಿಯೆ ನಿನ್ನಾಜ್ಞೆಯಿಂದೆಲ್ಲರೂ ಕೂಡಿ ಶರಧಿ ಮಥಿಸುತಲಿರಲು ಕರುಣೆಯಿಂದಲಿ ಸುಧೆಯ ಕಲಶ ತಂದವನೆ4 ವಂಚನೆಯ ಪೆಣ್ಣಾಗಿ ವಂಚಿಸಿ ದೈತ್ಯರನು ಅಮೃತ ಸುರರಿಗುಣಿಸಿ ಪಂಚಬಾಣನ ಪಿತನೆ ಸುರರ ರಕ್ಷಕನಾದೆ ವಂಚಿಸದೆ ಎಮ್ಮಗಳ ನೀನೀಗ ಕಾಯೊ 5 ಅಮೃತಹಸ್ತನೆ ಕೃಷ್ಣ ಅಮೃತವಿತ್ತು ಕಾಯೊ ಅಮೃತರಲ್ಲವೆ ನಿನ್ನ ಪಟ್ಟಣದ ಜನರು ಅಮೃತ ಕಿರಣಾಂತರ್ಯಾಮಿಯೆ ಶಾಂತ ಧನ್ವಂತ್ರಿ ಅಮೃತರಾಗುವರೈಯ್ಯ ನಿನ್ನ ನಂಬಿದರೆ 6 ಸಚ್ಚಿದಾನಂದ ಸರ್ವೋತ್ತಮನೆ ಶ್ರೀ ಕೃಷ್ಣ ಬಿಚ್ಚಿ ಸಲಹಯ್ಯ ಎನ್ನಜ್ಞಾನ ಬಂಧ ಅಚ್ಚುತಾನಂತ ಶ್ರೀ ಗುರುಗಳಂತರ್ಯಾಮಿ ಅಚ್ಚವೈಷ್ಣಣವ ಪ್ರಿಯ ಗೋಪಾಲಕೃಷ್ಣವಿಠ್ಠಲ 7
--------------
ಅಂಬಾಬಾಯಿ