ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಣದೆ ನಿಲ್ಲಲಾರೆ, ಕಮನೀಯ ಮೂರುತಿಯಪ್ರಾಣೇಶನ ತೋರೆ ಗಿಣಿಯೆ ಪ ಮಾಣಿಕ್ಯ ಪದಕವ ಮನ್ನಿಸಿ ನಿನಗೀವೆಜಾಣೆ ಕೃಷ್ಣನ ತೋರೆ ಗಿಣಿಯೆ ಅ.ಪ. ಮಕರಕುಂಡಲಧರನ ಮಕರಧ್ವಜನ ಪಿತನಮಕುಟ ಭೂಷಣನ ತೋರೆ ಗಿಣಿಯೆಮಕರಾಕ್ಷ ಸಂಹರನ ಮಕರಾರಿ ರಕ್ಷಕನಮಕರ ಶಿಕ್ಷಕನ ತೋರೆ ಗಿಣಿಯೆ 1 ಇಂದು ರವಿಲೋಚನನಇಂದು ನೀ ಕರೆತಾರೆ ಗಿಣಿಯೆಇಂದುಶೇಖರನುತನ ಇಂದಿರೆಯರಸನತಂದು ತೋರೆ ಮುದ್ದುಗಿಣಿಯೆ2 ಒಂದು ನಿಮಿಷವೊಂದು ಯುಗವಾಗಿ ತೋರಿತೆಸೌಂದರ್ಯನ ತೋರೆ ಗಿಣಿಯೆಮಂದಮಾರುತ ಸೋಕೆ ಮರುಳುಗೊಂಡೆನೆ ಎನ್ನಮಂದಿರಕೆ ಕರೆತಾರೆ ಗಿಣಿಯೆ 3 ಕಾಯಜನ ಬಾಣದಲಿ ಕಾಯವೆಲ್ಲವು ಬಹಳಘಾಯವಾಯಿತು ನೋಡೆ ಗಿಣಿಯೆಮಾಯೆಗಳ ಮಾಡದೆ ಮಮತೆಯಿಂದಲಿ ಎನ್ನನಾಯಕನ ಕರೆತಾರೆ ಗಿಣಿಯೆ 4 ಪಂಕಜೋದ್ಭವ ಪಿತನ ಪಂಕಜನಯನನಪಂಕಜನಾಭನ ತೋರೆ ಗಿಣಿಯೆಪಂಕಜಾಕ್ಷ ಸಿರಿಕೃಷ್ಣನ ಪದಪದ್ಮಶಂಕೆಯಿಲ್ಲದೆ ತೋರೆ ಗಿಣಿಯೆ 5
--------------
ವ್ಯಾಸರಾಯರು