ದಿನವೇ ಸುದಿನವು ಧ್ಯಾನ ಮಾಳ್ಪ ಜನವೇ ಸುಜನವು ಪ
ಮಹಿಮೆಯ ಪಾಡುವ ಅ.ಪ.
ಯುಕ್ತದಿ ಕೂಡಿ ಆಯುಕ್ತವಿರಕ್ತಿಯ ಮಾಡಿ
ಭಕ್ತಿಗಾಗಲಿ ಭವಮುಕ್ತಿಗಾಗಲಿ
ಹರಿಭಕ್ತರನೊಡಗೂಡಿ ರಕ್ತಿಲಿ ಪಾಡುವ ದಿನವೇ 1
ತಾಳ ತಂಬೂರಿಯ ತಪ್ಪದೆ ತಂದು ಮೈಳೈಸಿ-ಶ್ರುತಿಯ
ಕಥೆಪೇಳವ ಕೇಳುವ 2
ಅರ್ಥಾಪೇಕ್ಷೆಯಲಿ ಕಾಲಗಳನ್ನು ವ್ಯರ್ಥಮಾಡದಲೆ
ಪ್ರಾರ್ಥನೆ ಮಾಡುವ 3
ಕಾಮಕ್ರೋಧಗಳ ಕಳೆವ ರಘುರಾಮ ನಾಮಗಳ
ಭವ ತಾಮಸ ಕಳೆಯುವ 4
ಹರಿವಾಸರವನು ಸಾಧಿಸಿ ಮುರುಹರ ನಾಮಗಳನು
ಹರಿದಾಸರೊಡಗೂಡಿ ಹರುಷದಿಂದೆಚ್ಚತ್ತು ವರದ ವಿಠಲ ನರಹರಿಯೆಂದು ಪಾಡುವ ದಿನವೇ 5