ಬಿಡಲಾರೇ ಬಿಡಲಾರೇ ಪ
ಕಡಲೊಳು ಪವಡಿಪ ಮೃಡನುತನಾಮನ ಅ.ಪ
ಕಾಶಿಯೊಳಗೆ ವಿಶ್ವೇಶನು ಬೋಧಿಪ
ದಾಶರಥಿಯ ವರ ಸಾಸಿರ ನಾಮವ 1
ಗೌರವದಿಂದಲಿ ಗೌರಿಯು ಜಪಿಸುವ
ಗೌರನೆನಿಪದುರಿತಾರಿಯ ನಾಮವ 2
ಭಕ್ತರು ಸಕಲ ವಿರಕ್ತರು ನಿತ್ಯದಿ
ರಕ್ತಿಪಡುವ ಗುಣಯುಕ್ತನ ನಾಮನ 3
ಇಷ್ಟದಿ ನೆನೆವರ ಕಷ್ಟವಳಿದು ಮನ
ದಿಷ್ಟ ಕೊಡುವ ಪರಮೇಷ್ಟಿಯ ನಾಮವ 4
ಚರಣವ ನಂಬಿದ ಶರಣರ ಪೊರೆಯುವ
ವರದವಿಠಲ ದೊರೆ ವರದನ ನಾಮವ 5