ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಶುಭಮಂಗಳಂ ಪ. ಮಂಗಳಂ ಶ್ರೀ ಭೂಮಿದೇವಿಯ ರಮಣಗೆ ಮಂಗಳಂ ಸದ್ಗುಣಗಣಪೂರ್ಣಗೆ ಮಂಗಳಂ ನಿರ್ದೋಷ ನಿಗಮತತಿ ವೇದ್ಯನಿಗೆ ಮಂಗಳಂ ಶ್ರೀ ವೇಂಕಟಾಧೀಶಗೆ 1 ವಂದಾರು ಸುರವೃಂದ ರುಚಿರಮಣಿಮಯ ಮಕುಟ ಸಂದೋಹ ಸಂಘಟಿತಪದಪೀಠಗೆ ಇಂದಿರಾಕರಕಮಲರಂಜಿತ ಧ್ವಜವಜ್ರ ಸಂದಿಪ್ಪ ಪಾದಾದಿ ಶುಭರೇಖಗೆ 2 ದಿವ್ಯನಖಮಣಿರಾಗರಂಜಿತಾಂಗುಲಿ ರಮ್ಯ ಭವ್ಯ ಮಂಗಳದಾಯಿ ಭಯಹಾರಿಗೆ ನವ್ಯ ಜಲರುಹಭಾಸ ಮುನಿಜನಾರ್ಚಿತ ಪುಣ್ಯ ಸೇವ್ಯ ಗಂಗಾಜನಕ ಶ್ರೀಚರಣಗೆ 3 ವರಕನಕವನಯುತ ಉರುನಿತಂಬದ್ವಯಗೆ ಸರಸಕೇಳೀವಾಸಸಜ್ಜಘನಕೆ ಸ್ಥಿರರತ್ನ ಮೇಖಲಾ ಸುಕಲಾಪ ಭೃತ್ಕಟಿಗೆ ಹೃ- ತ್ಸರಸಿಜಾಸನಜನಿತ ಶುಭನಾಭಿಗೆ 4 ಭುವನ ಪೂರಿತ ವಳಿತ್ರಯರಾಜದುದರಗೆ ವಿವಿಧ ಕುಸುಮಾಕಲಿತ ಸುಮಮಾಲಿಗೆ ಕೌಸ್ತುಭ ಶ್ರೀವತ್ಸ ನವಹಾರಕೃತ ರಮಾಶ್ರಿತ ವಕ್ಷಕೆ 5 ದೈತ್ಯಜನತಿಮಿರಹರ ವರದೀಪ್ತಿ ಚಕ್ರಕೆ ಶತ್ರುಭೀಷಣ ಘನಧ್ವನಿ ಶಂಖಕೆ ಗೋತ್ರÀಪತಿ(ತಿಯ?) ಸಮಬಲ ಪ್ರೋದ್ಭಾಸಿ ಸದ್ಗದೆಗೆ ಶ್ರಿತಜನ ಭಯಹಾರಿ ವರಪದ್ಮಕ್ಕೆ 6 ಕಂದರ ವದನಕೆ ನಾಸಿಕ ಕಾಲ ಸನ್ಮುಖಕಮಲಕೆ ಅರುವಾರಿಜನೇತ್ರ ಶೋಭನ ಭ್ರೂಯುಗಳ ವರ ಫಾಲತಿಲಕ ಕುಂತಳರಾಯಗೆ 7 ಕಮನೀಯ ಕರ್ಣಯುಗ ರಕ್ತಕುಂಡಲ ಲಲಿತ ವಿಮಲದರ್ಪಣ ಭಾಸ ಗಂಡಯುಗಕೆ ಸುಮಮಾಲಿಕಾಸ್ಥಿತಿತ ವೃತ್ತಕೇಶ ಸಂತತಿಗೆ ರಮಣೀಯ ಗುಣರಚಿತ ವರ ಮಕುಟಕೆ 8 ಉದಯಗಿರಿನಿಕರ ವಿಸ್ಫುರಿತ ಶುಭಗಾತ್ರಕೆ ಮದನಮದಗಜಶೀಲ ಲಾವಣ್ಯಕೆ ಸದಭೀಷ್ಟÀದಯ ಪೂರ್ಣಪ್ರಜ್ಞಮುನಿಸೇವ್ಯ ಪದ ಹಯವದನ ವೆಂಕಟರಮಣಗೆ 9
--------------
ವಾದಿರಾಜ