ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೂಮಿಜೆಯು ಸೀತೆಯು ಜನನಿ ಗರ್ಭವ ವಡೆದು ಬಂದಳು ದನುಜ ವಧಕೆಂದೇ ಪ ದುರುಳ ದನುಜರು ಪೆಸರು ರಾವಣ ಕುಂಭಕರ್ಣರು ಋಷಿ ಜನಂಗಳ ಮುಖವ ಕೆಡಿಸುತ ಮೆರೆಯುತಿರೆ ಕೇಳ್ದು 1 ಭವದ ಭಟ ಶ್ರೀರಾಮಚಂದ್ರನು ಮೂವರನು ಜರ ಕೂಡಿ ಜನಿಸಿದಾ ಭುವನ ಭಾರವ ಪರಿಹರಿಪೆನೆಂದಭಯ ತೋರುತಲೀ 2 ಸಿರಿಲಕುಮಿ ನಿಜವರನು ಜನಿಸಿದ- ನರಿತು ¥ರಮಾನಂದದಲಿ ತಾ ಭರದಿ ಮೈದೋರಿದಳು ಹರಿಗೆ ತಾನರಸಿ ಎನಿಸಿದಳು 3 ವಾನರರ ಸೇನಾಧಿಪನು ಪವ- ಸೂನು ಶ್ರೀ ಹನುಮನೆಂಬುವನು ದಾನವಾರಿ ಶ್ರೀ ರಾಮಚಂದ್ರಗೆ ಭೃತ್ಯನೆನಿಸಿದನು 4 ವಿಪಿನ ಚರವ್ಯಾಜದಲಿ ರಕ್ಕಸ- ರಪರಿಮಿತ ಕೆಡಹಿದನು ಧರಣಿಗೆ ವಿಪರೀತ ಬತ್ತದ ಶರಧಿಯನು ಹನುಮಂತನ್ಹಾರಿದನು 5 ಪ್ರತಿಭಟಿಸಿ ಶ್ರೀ ರಾಮಚಂದ್ರನು ಅತಿಮೆರೆವ ರಾವಣನ ಮಡುಹಿದಾ ಮತಿವಂತ ಹನುಮನಿಗೆ ಇತ್ತಾ ಚತುರವದನ ಪದಾ 6 ಧರಣಿ ಮಗಳಿಂಗೂಡಿ ರಾಮನು ಧರೆಯನೆಲ್ಲವನಾಳಿ ನ್ಯಾಯದಿ ಸ್ವರಗವಾಸಕೆ ತೆರಳಿದನು ನರಸಿಂಹವಿಠಲನು 7
--------------
ನರಸಿಂಹವಿಠಲರು