ಲಕ್ಷ್ಮಿ ನರಹರಿ ವಿಠಲ | ರಕ್ಷಿಸೋ ಇವಳ ಪ
ತ್ರ್ಯಕ್ಷ ಬಿಂಬನೆ ಸ್ವಾಮಿ | ಪಕ್ಷಿವಹ ಕರುಣಾಕಟಾಕ್ಷ ದಿಂದೇಕ್ಷಿಸುತ | ಕಾಪಾಡೊ ಹರಿಯೇ ಅ.ಪ.
ಅಕ್ಷಿ ಮೂರುಳ್ಳ ನಿಟಿ | ಲಾಕ್ಷನೈ ರೂಪದಲಿಅಕ್ಷಿ ಗೋಚರನಾಗಿ | ಸ್ವಚ್ಛ ತೈಜನನೇದೀಕ್ಷೆ ದಾಸತ್ವದಲಿ | ಲಕ್ಷ್ಯವಿಟ್ಟಿಹಳ ಉ-ಪೇಕ್ಷಿಸದೆ ದಯತೋರ್ದೆ | ಲಕ್ಷ್ಮಿ ನರಸಿಂಹಾ 1
ಮನ್ಯು ಸೂಕ್ತದಿಂ ಬ | ಹ್ಪನ್ನ ಭೊಕ್ತøವಿನಿಂದಚೆನ್ನಾಗಿ ಸೇವಿತನೆ | ಅನ್ನಂತ ಮಹಿಮಾಬಿನ್ನವಿಪೆ ನಿನಗೆ ಕಾ | ರುಣ್ಯ ಮೂರುತಿ ಹರಿಯೆಕನ್ಯೆಗಭಯದನೆ ಆ | ಪನ್ನ ಪರಿಪಾಲಾ 2
ಲೌಕಿಕದಿ ಬಹುಪರಿಯ | ಸೌಖ್ಯಗಳ ನೀನಿತ್ತುಪ್ರಾಕ್ಕು ಕರ್ಮವ ಕಳೆದು | ಕಾಪಾಡೊ ಹರಿಯೇ |ಚೊಕ್ಕ ಭಕ್ತಿ ಜ್ಞಾನ | ಅಕ್ಕರದಿ ತವಪದದಿಉಕ್ಕುವ ಪರಿಮಾಡು | ರಕ್ಕಸಾಂತಕನೇ 3
ನೀಚೋಚ್ಚ ತರತಮವು | ಪಂಚ ಬೇದವನರುಹಿಸಂಚಿತವ ದಹಿಸೂವ | ಹಂಚಿಕೆಯನಿತ್ತೂಅಂಚೆವಹಪಿತನೆ ಹೃ | ತ್ಪಂಕಜದಿ ನಿನಕಾಂಬಸಂಚಿಂತನೆಯ ನೀಯೊ | ಪಂಚ ಪ್ರಾಣಾತ್ಮಾ 4
ಪಾವಮಾನಿಯ ಪ್ರೀಯ | ಸಾರ್ವಕಾಲದಿ ನಿನ್ನಪಾವನ ಸ್ಮøತಿಯಿತ್ತು | ಭಾವದಲಿ ತೋರೋ |ನೀವೊಲಿಯುತಿವಳಿನ್ನ | ಕಾವುದೆನೆ ಬಿನ್ನೈಪೆಗೋವಿದಾಂಪತಿಯೆ ಗುರು | ಗೋವಿಂದ ವಿಠಲಾ 5