ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಬ್ಧಿ ಸೋಮಾ ಪ ದಶರಥನಂದನ ರಾಮಾ ಜಗದೇಕ ರಾಮಾ ರಾಮ ಜಾನಕಿ ಪ್ರೇಮ ಸುರಕ್ಷಕ ಸುಧಾಮಾ ಸಕಲಲೋಕ ಸ್ವಾಮಿ ಜಗನ್ನಾಥ ಅ.ಪ ದಂಡಿ ದಾನವರ ಕುಲತರಿದೂ ದಶಶಿರನಳಿದೂ ಭೂ ಮಂಡಲ ಮಾತೆ ಸೀತೆತಂದಾ ಅತಿ ಶರತಿನಿಂದಾ ಹಿಂಡು ವಾನರ ಬಹು ದಂಡನೆ ಕೂಡಿಸಿ ಪುಂಡ ರಕ್ಕಸರೆದೆ ಗುಂಡಿಗೆ ಮುರಿದಾ 1 ವೀರಾಧಿ ವೀರರಲಿ ಗಂಭೀರಾ ಸುಂದರಾಕಾರಾ ಧೀರಾ ವಿಜಯರಣಶೂರಾ ಪೋಷಿತಾಮರ ಸÁರ ಜಗಂಗಳೊಳು ಮೀರಿದವರ ಗರ್ವ ಕಾರಿಸಿ ಮುರಿದಾ ಹೋ ಧೀರ ಮಹಾನುಭಾವಾ 2 ಪನ್ನಗಾದ್ರಿಯ ವಾಸಾ ಈಶಾ ಭಕ್ತರ ಪೋಷಾ ಚಿನ್ಮಯ ರೂಪ ಜಗದೀಶಾ ಚಿದ್ಪಿಲಾಸಾ- ಪನ್ನ ಶರಣ್ಯ 'ಶ್ರೀ ಹೆನ್ನ ವಿಠ್ಠಲ’ ಎನ್ನ ಮರೆಯದಲೆ ಇನ್ನು ರಕ್ಷಿಸೊ 3
--------------
ಹೆನ್ನೆರಂಗದಾಸರು
ಮುಖ್ಯಪ್ರಾಣನೀತಾ | ನಮಗೆ | ಮುಖ್ಯ ಪ್ರಾಣನೀತ ನಮಗೆ ಮೂಲ ಗುರುವಿತ ಸತತಾ | ಸೌಖ್ಯವನು ಕರುಣಿಸಿ ನಮ್ಮ ಸಖ್ಯನಾಗಿ ಪೊರೆವನೀತಾ ಪ ನಿಗಮವೇದ್ಯನೀತಾ ನಂಬಿಕೆಯನೀವ ಚರಣ | ದುರಿತ ರಾಗಗಳ ಕಳೆನೀತಾ | ವಿಗಡ ವಿಷವನುಂಡನೀತಾ | ಹಗಲ ವಲ್ಲಭನಲ್ಲಿ ಸಂಮೊಗದವನಾಗಿ | ಓದಿದನೀತಾ | ಅಗಣಿತಾದವಿದ್ಯನೀತಾ 1 ಜಗವ ಪಾಲಕನೀತಾ ಚತುರ | ಯುಗದಿ ಬಲುದಿಟ್ಟನೀತಾ | ಪೆಗಲಿಲಿ ಭೂಮಿ ಮಗಳ ಪತಿಯ | ಜಗಳದಲ್ಲಿ ಪೊತ್ತನೀತಾ | ಹಗೆಯ ದುಶ್ಶಾಸನ್ನ ವಡಲ ಬಗೆದು ಮುಂದೆ ಚತುರ | ಮೊಗದವನಾಗಿ ವಾನರ ಬಲವ | ನಗವ ತಂದೆತ್ತಿದವನೀತಾ 2 ವರ ವೃಕೋದರನೀತಾ ಸಕಲ ಸುರರೊಳು ಬಲು ಪ್ರಬಲನೀತಾ | ಪರಮ ಮಂಗಳ ಪದದಿ ಭವದ | ಶರಧಿ ಬತ್ತಿಪನೀತಾ | ಒಮ್ಮೆ ಸ್ಮರಿಸಿದಾಕ್ಷಣ ಬರುವನೀತಾ | ಮರುತಾವತಾರನೀತಾ ತನ್ನ | ಶರಣ ಜನರ ಪೊರೆವನೀತಾ 3 ಅಸಮ ಸಾಹಸನೀತಾ ಭಕ್ತರ ವಶವಾಗಿ ವೊಳಗಿಪ್ಪನೀತಾ | ನೋಡಿ ಪೊರೆವನೀತಾ | ಅಸುರ ಲಿಂಗಭಂಗವ ಮಾಡಿ | ಬೆಸನೆ ಮತವ ಕಟ್ಟುವನೀತಾ | ಹಸನಾದ ಮುನಿ ಈ ರಕ್ಕಸರೆದೆಯ ಶೂಲನೀತಾ 4 ಜ್ಞಾನ ಪೂರ್ಣನೀತಾ ಶ್ರೀಮದಾನಂದತೀರಥನೀತಾ | ದಾನ ಧರ್ಮ ಪ್ರೇರಕನೀತಾ | ಪ್ರಾಣನೀತಾ ನಾಶವಿಲ್ಲದೆ ನಾನಾ ಮಹಿಮನೀತಾ | ನಮಗೇನೇನು ಕೊಡುವನೀತಾ | ಗಾನವಿಲೋಲ ವಿಜಯವಿಠ್ಠಲ ಧ್ಯಾನ ಮಾಳ್ಪನೀತಾ 5
--------------
ವಿಜಯದಾಸ
211ಶೃಂಗಾರವಾಗಿದೆ ಸಿರಿರಂಗನ ಮಂಚಅಂಗನೆಮಹಲಕುಮಿಯರಸ ಮಲಗುವ ಮಂಚಪಬಡಿಗ ಮುಟ್ಟದ ಮಂಚ | ಮಡುವಿನೊಳಿಹ ಮಂಚ |ಮೃಡನ ತೋಳಲಿ ನೆಲಸಿಹ ಮಂಚ ||ಹೆಡೆಯುಳ್ಳ ಹೊಸಮಂಚ ಪೊಡವಿ ಹೊತ್ತಿಹ ಮಂಚ |ಕಡಲ ಶಯನ ಶ್ರೀ ರಂಗನ ಮಂಚ 1ಕಣ್ಣು-ಮೂಗಿನ ಮಂಚ ಬೆನ್ನು ಬಾಗಿದ ಮಂಚ |ಹುಣ್ಣಿಮೆಯ ಚಂದ್ರಮನ ಅಡ್ಡಗಟ್ಟುವ ಮಂಚ ||ಬಣ್ಣ ಬಿಳುಪಿನ ಮಂಚ ಹೊನ್ನು ಕಾದಿಹ ಮಂಚ |ಚೆನ್ನಿಗ ಪರೀಕ್ಷೀತನ ಪ್ರಾಣವಕೊಂಡಮಂಚ2ಕಾಲಿಲ್ಲದೋಡುವ ಮಂಚ | ಗಾಳಿ ನುಂಗುವ ಮಂಚ |ನಾಲಗೆಯೆರಡುಳ್ಳ ವಿಷದ ಮಂಚ ||ಏಳು ಹೆಡೆಯ ಮಂಚ | ಮೂಲೋಕದೊಡೆಯನ ಮಂಚ |ಕಾಳಗದಲಿ ಕಿರೀಟಿಯ ಮುಕುಟಕೊಂಡಮಂಚ3ಹಕ್ಕಿಗೆ ಹಗೆಯಾದ ಮಂಚ | ರೊಕ್ಕ ಮುಟ್ಟದ ಮಂಚ |ರಕ್ಕಸರೆದೆದಲ್ಲಣನ ಮಂಚ ||ಸೊಕ್ಕು ಪಿಡಿದ ಮಂಚ | ಘಕ್ಕನೆ ಪೋಗುವ ಮಂಚ |ಲಕ್ಕುಮಿ ರಮಣ ಶ್ರೀ ಹರಿಯ ಮಂಚ 4ಅಂಕುಡೊಂಕಿನ ಮಂಚ | ಅಕಲಂಕ ಮಹಿಮ ಮಂಚ |ಸಂಕರುಕ್ಷಣನೆಂಬ ಸುಖದ ಮಂಚ |ಶಂಕರನ ಕೊರಳಿಗೆ ಪದಕವಾಗಿಹ ಮಂಚ |ವೆಂಕಟಪುರಂದರವಿಠಲ ರಾಯನ ಮಂಚ5
--------------
ಪುರಂದರದಾಸರು
ಜಯ ಜಯ ಸದಮಲ ಗುಣಭರಿತಜಯ ಜಯ ಹನುಮಂತ ಭಾರತೀಕಾಂತ ಪ.ಮುನ್ನೆ ದಾಶರಥಿಯ ಚರಣವಿಡಿದೆ ನೀಉನ್ನತವಾದ ವರಕೃಪೆಯ ಪಡೆದೆಉನ್ಮತ್ತರಕ್ಕಸರೆದೆ ತಲೆಗಡಿದೆ ನೀಚೆನ್ನಾಗಿ ಪ್ಲವಗರ ಪ್ರಾಣವ ಪಡೆದೆ 1ದ್ವಾಪರದೊಳಗೆ ಬಲಭೀಮನಾದೆಸಿರಿಗೋಪಾಲರಾಯನ ನಿಜದಾಸನಾದೆಕಾಪುರುಷ ಕೀಚಕನ ಸದೆದೆ ಬಲುಪಾಪಿ ಕೌರವಾನುಜನೊಡಲ ಬಗೆದೆ 2ಹರಿಸರ್ವೋತ್ತಮ ಜೀವರೊಳು ಭೇದವೆಂದರಿವವರೊಳು ನೀ ಪೂರಣಬೋಧಸಿರಿಪ್ರಸನ್ನವೆಂಕಟೇಶನಪಾದನೀಸ್ಮರಣೆ ಕೊಡೆಲೆ ವೈಷ್ಣವವರದ 3
--------------
ಪ್ರಸನ್ನವೆಂಕಟದಾಸರು
ಜೋ ಜೋ ಯಶೋದೆಯ ನಂದ ಮುಕುಂದನೆಜೋ ಜೋ ಕಂಸಕುಠಾರಿ ಪ.ಜೋ ಜೋ ಮುನಿಗಳ ಹೃದಯಾನಂದನೆಜೋ ಜೋ ಲಕುಮಿಯ ರಮಣ ಅಪಹೊಕ್ಕುಳ ಹೂವಿನ ತಾವರೆಗಣ್ಣಿನಇಕ್ಕಿದಮಕರ ಕುಂಡಲದಜಕ್ಕುಳಿಸುವ ಕದಪಿನ ಸುಳಿಗುರುಳಿನಚಿಕ್ಕ ಬಾಯ ಮುದ್ದು ಮೊಗದ ||ಸೊಕ್ಕಿದ ಮದಕರಿಯಂದದಿ ನೊಸಲೊಳಗಿಕ್ಕಿದ ಕಸ್ತೂರಿ ತಿಲಕ |ರಕ್ಕಸರೆದೆದಲ್ಲಣ ಮುರವೈರಿಯೆಮಕ್ಕಳ ಮಾಣಿಕ್ಯ ಜೋ ಜೋ 1ಕಣ್ಣ ಬೆಳಗು ಪಸರಿಸುತಿರೆಗೋಪಿಅರೆಗಣ್ಣ ಮುಚ್ಚಿ ನೋಡಿ ನಗುತ |ಸಣ್ಣ ಬೆರಳುಗಳ ಬಾಯೊಳಗಳವಡಿಸಿಪನ್ನಗಶಯನ ತೊಟ್ಟಿಲಲಿ ||ನಿನ್ನ ಮಗನ ಮುದ್ದನೋಡು ಎಂದೆನುತಲಿತನ್ನ ಪತಿಗೆ ತೋರಿದಳು |ಹೊನ್ನ ಬಣ್ಣದ ಸೊಬಗಿನ ಖಣಿಯೆ ಹೊಸರನ್ನದ ಬೊಂಬೆಯೆ ಜೋ ಜೋ 2ನಿಡು ತೋಳ್ಗಳ ಪಸರಿಸುತಿರೆ ಗೋಪಿಯತೊಡೆಯ ಮೇಲ್ಮಲಗಿ ಬಾಯ್ದೆರೆಯೆ |ಒಡಲೊಳಗೀರೇಳು ಭುವನವಿರಲು ಕಂಡುನಡುಗಿ ಕಂಗಳನು ಮುಚ್ಚಿದಳು ||ಸಡಗರಿಸುತ ತಾನರಿಯದಂತೆಯೆಹೊಡೆ ಮರುಳಿ ಮೊಗವ ನೋಡುತಲಿಕಡಲಶಯನ ಮೊಗವ ನೋಡುತಲಿಕಡಲಶಯನ ಶ್ರೀ ಪುರಂದರವಿಠಲನುಬಿಡದೆ ನಮ್ಮೆಲ್ಲರ ರಕ್ಷಿಸುವ 3
--------------
ಪುರಂದರದಾಸರು