ಕಂಜನಯನನ ಕಂಡೆ ಕಾಮನಯ್ಯನ ಪ.
ಮಂಜುಗುಣಿಯೊಳಿಪ್ಪನ ತಿಮ್ಮಪ್ಪನಅ.ಪ
ಪುಟ್ಟ ಪಾವುಗೆಯೊಳ್ಮೆಟ್ಟಿ ತೊಟ್ಟಂಬುಚಕ್ರವಕಟ್ಟಿದ ಕಠಾರಿಯಿಂದ ದುಷ್ಟರ ಹುಡಿಗುಟ್ಟುವ 1
ಚಕ್ರ ಶಂಖಧರನಾಗಿ ಕಕ್ಕಸರ ರಕ್ಕಸರಶಿಕ್ಷಿಸಿ ಶಕ್ರಮುಖ್ಯರ ಅಕ್ಕರಿಂದ ರಕ್ಷಿಸುವ 2
ಆಗಮವೈರಿಯನು ಕೊಂದಾಗ ಹಯವದನನ್ನಈಗ ಮಾನಿಸರಿಗೆ ಸೌಭಾಗ್ಯವೀವ ದೇವನ3