ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಲುವನಿವನೆಂದೆನುತೆ ಪಲತೆರದೆ ಬಣ್ಣಿಸುತೆ ನಲಿದಿತ್ತ ಹಲುಗಿರಯಗೆನ್ನ ತಾತ ಕೆಂಗಣ್ಣು ಕಿಡಿರೋಷ ಸಿಂಗದಾಮುಖಭಾವ ಭಂಗಿಯನು ಕುಡಿದವೋಲ್ ಕಂಡುಬರುವ ರುಧಿರ ಪಾನವಮಾಡಿ ಅಧರವಿದು ಕೆಂಪಾಗಿ ವಿಧವಿಧದಿ ಹೂಂಕರಿಸಿ ಬೆದರಿಸುತಿಹ ವರರತ್ನಹಾರವನು ತೊರೆದು ರಕ್ಕಸನುರವ ಹರಿದು ಕರುಳನು ಧರಿಸಿ ಮೆರೆವನಕಟ ಘೋರವದನನೆ ಎನಗೆ ನೀರನಾಗೆ ಹಾರಮಳವಡಿಸಿದೆನೆ ಕುಪಿತಗಿವಗೆ ಸಾರೆ ಫಲವೇನಿನ್ನು ನಡೆದೆಬಗೆ ಧೀರಶೇಷಗಿರೀಶನೊಡೆಯನೆನಗೆ
--------------
ನಂಜನಗೂಡು ತಿರುಮಲಾಂಬಾ
ಸಖಿಯೆ ಲಾಲಿಸು ಎನ್ನ ಸಖನ ವರ್ಣಿಪೆ ಮುನ್ನ ಸುಖದಾತ ಸುಂದರನ ಪ್ರಾಣಸಖನ ಕಡುದೈನ್ಯದಿಂದೆರೆಯಲೊಡನೆ ಬಂದು ವೇದಗಳ್ಳನು ಪೋದ ಹಾದಿಯನೆ ತಾ ಪಿಡಿದು ವಾರ್ಧಿಯೊಳ್ಮುಳುಗಿ ಸಮ್ಮೋದದಿಂದ ಕ್ರೋಧಿರಕ್ಕಸನುರವ ಛೇದಿಸುತೆ ವೇದವ ನ್ನಾದರಿಸಿ ತಂದೀಯುತ ಜಗಕೆನಲವಿಂ ನಿರ್ಮಾಣ ಕಾರ್ಯದೋಳ್ ನಿಯಮಿಸಿದನಾ ಸ್ವರ್ಣಗರ್ಭನನಂತು ಮೀನನಾಗಿ ಅರ್ಣವದಿ ನೆಲೆಯಾಗಿ ನಿಂತ ಸುಗುಣ
--------------
ನಂಜನಗೂಡು ತಿರುಮಲಾಂಬಾ
ಹರಿಯೆ ಮೂಜಗದ ದೊರೆಯೆ ನಿನಗಿದು ಸರಿಯೆ ಪ. ಹರಿಯೆ ಮೂಜಗದ ದೊರೆಯೆ ನಿನ್ನನೆ ಮರೆಯಪೊಕ್ಕವರಲ್ಲಿ ಈ ಪರಿ ಬರಿಯ ಪಂಥದಿ ಮರುಗದಿರ್ಪುದು ಸರಿಯೆ ನಿನಗದು ಸರಸವಲ್ಲದುಅ.ಪ. ಉಕ್ಕಿನ ಕಂಬದಿಂದ ಉದಿಸಿ ಬಂದು ರಕ್ಕಸನುರವ ಸೀಳಿ ಕರುಳನು ಬಗೆದು ಉಕ್ಕುವ ಕೋಪದಿಂದ ರಕುತವು ಸುರಿಯೆ ಭಕ್ತ ಪ್ರಹ್ಲಾದನಾದರದಿ ಕಾಯ್ದು ಭಕ್ತ ವತ್ಸಲನೆನಿಸಲಹುದು ಶಕ್ತಿಹೀನತೆಯಿಂದ ಮರೆಹೊಕ್ಕ ಎನ್ನನು [ಕಾಯು]ವುದು 1 ಒಪ್ಪಿಡಿಯವಲಕ್ಕಿಯ ಒಪ್ಪಿಸಿನಿಂದ ವಿಪ್ರನ ನಲವಿಂದ ನೋಡುತಲಂತು ವಿಪುಲಸಂಪದವನ್ನು ಕರುಣಿಸಿದಂಥ ಅಪ್ರತಿಮ ಸಾಹಸಿಯೆನುತೆ ನಿನ್ನೊಳು ತಪಿಸಿ ಬೇಡುವ ಎನ್ನೊಳೀಪರಿ ಒಪ್ಪದೊಪ್ಪದೆನ್ನಪ್ಪ ಕೇಳಿದು ಸರಿಯೇ ಶ್ರೀನರಹರಿಯೇ 2 ಮಾನಿತÀಧ್ರುವ ಬಾಲನಂ ಮನ್ನಿಸಿ ಪೊರೆದೆ ಮಾನಿನಿ ಪಾಂಚಾಲಿಯ ಮಾನದಿ ಕಾಯ್ದೆ ಸಾನುರಾಗದಿಂ ಗಜನಂ ಉದ್ಧರಿಸಿದೆ ಕ್ಷೋಣಿಯೊಳಗತಿ ದೀನರಾದರ ಸಾನುರಾಗದಿ ಪೊರೆವ ಶ್ರೀಧರ ದಾನವಾಂತಕ ಶೇಷಗಿರೀಶನೆ ಸೂನುವೆಂಬಭಿಮಾನ ನಿನಗಿರೆ [ಮಾಣದೆನ್ನನು ಕಾಯೊ] ಹರಿಯೇ ಶ್ರೀನರಹರಿಯೇ3
--------------
ನಂಜನಗೂಡು ತಿರುಮಲಾಂಬಾ