ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಹಳ ನಂಬಿದೆ ಭಕ್ತಪಾಲ ಶ್ರೀ ಲಕ್ಷೀಯ ಲೋಲ ವೆಂಕಟರಾಯನ ಮೂರು ಲೋಕದೊಡೆÉಯನ ಮುಕ್ತಿಯ ಕೊಡುವನ ಪಾಲಿಸಿ ಜಗವನುದ್ಧರಿಸಿದ ದೇವನ ಪ. ಜಲದೊಳು ಪೊಕ್ಕು ವೇದವ ತಂದು ಅಜವನಿಗಿತ್ತು ಬಲುಗಿರಿ ಕುಸಿಯಲು ಬೆನ್ನಿನಿಂದಲಿ ತಳೆದು ನೆಲನ ಕದ್ದಸುರನ ಕೊಂದು ಕಂಬದಿ ನಿಂದು ಬಲಿಯ ದಾನವ ಬೇಡಿ ಜಲ ಪರುಷವ ನೀಡಿ ಮತ್ತೆ ಮಾತೆಯ ಕಡಿದು ಛಲದಿ ರಾವಣನ ಸಂಹರಿಸಿ ಸೀತೆಯ ತರಿಸಿ ಬಲುಸತಿಯರನಾಳಿ ಬವುದ್ಧ ರೂಪವ ತಾಳಿ ಅಲ್ಲದಶ್ವವೇರಿದ ಅತಿ ಚೆಲುವ ದೇವನ 1 ನಿಗಮ ಚೋರನ ಕೊಂದು ನೀರೊಳು ಮುಳುಗ್ಯಾಡಿ ನಗವ ಬೆನ್ನಲಿ ಪೊತ್ತು ಸುರರಿಗಮೃತವಿತ್ತು ಬಗೆದು ಧಾರುಣಿಯನ್ನು [ಚೀರಿ ಹರಹಿ] ಹಿರಣ್ಯಕನ ಮಿಗಿಲಾದ ಬಲಿಯ ಮೆಟ್ಟಿ ಸೊಗಸಿಂದ ಕಾಮಧೇನುವ ತಂದು ಕೌಸಲ್ಯಾ ಮಗನಾಗಿ ಹುಟ್ಟಿ ರಕ್ಕಸÀರನ್ನು ತರಿದೊಟ್ಟಿ ವಿಗಡ ಮಾವನ ಕೊಂದು ಮತ್ತೆ ತ್ರಿಪುರವ ಗೆಲಿದು ಜಗದೊಳುದ್ದಂಡ ರಾವುತನಾದ ದೇವನ 2 ಆದಿಪೊಳ[ಕು] ಕ್ಷೀರಾಂಬುಧಿ ಮಥsÀನವ ಆಡಿ ಕೂರುಮನಾಗಿ ಮತ್ತ ಹಿರಣ್ಯಕನ ದಾಡೆಯಿಂದಲಿ ಸೀಳಿ ಜೋಡು ರೂಪವ ತಾಳಿ ಬೇಡಿ ಮೂರಡಿ ನೆಲವ ತೀಡಿ ಕ್ಷತ್ರಿಯರ ಸಂಹರಿಸಿ ಕಾಡೊಳು ಚರಿಸಿ ಗಾಡಿಗಾತಿಯರ ಮನೆಯೊಳುಳ್ಯಾಡಿ ಸತಿಯರ ವ್ರತ- ಗೇಡಿ ಭಕ್ತರಿಗೆ ಅಭಯವ ನೀಡಿ ಹೆಳವನಕಟ್ಟೆ ಕಾಡುಗಲ್ಲಲ್ಲಿ ನಿಂತ ಕಲಿ ವೆಂಕಟೇಶನ 3
--------------
ಹೆಳವನಕಟ್ಟೆ ಗಿರಿಯಮ್ಮ