ಒಕ್ಕಲ ಮಾಡೆನ್ನ ಮುಕ್ಕುಂದ ತಂದೆ
ಒಕ್ಕಲ ಮಾಡೆನ್ನ ಪ
ಒಕ್ಕಲ ಮಾಡೆನ್ನ ದಕ್ಕಿಸಿ ಭವದೊಳು
ಅಕ್ಕರದಲಿ ನಿಮ್ಮ ಮಿಕ್ಕ ಪ್ರಸಾದ ನೀಡಿ ಅ.ಪ
ಆಸೆ ನೀಗಿಸೆನ್ನಭವದ
ಪಾಶ ತರಿಯೊ ಮುನ್ನ
ಪಾದ ದಾಸಾನುದಾಸರ
ವಾಸದಿರಿಸಿ ಎನ್ನ ಪೋಷಿಸು ದಯದಿಂ 1
ಸೊಕ್ಕು ಮುರಿದು ಎನ್ನ ನಿಮ್ಮಯ
ಪಕ್ಕದೆಳಕೊ ಎನ್ನ
ತಿಕ್ಕಿ ಮುಕ್ಕುವ ಘನ ಮಕ್ಕಮಾರಿ ಸತಿಯ
ರಕ್ಕರ್ಹಾರಿಸಿ ನಜರಿಕ್ಕೆ ಸಲಹುಜೀಯ 2
ಜನನ ಮರಣ ಬಿಡಿಸೊ ಎನ್ನಯ
ಮನವ ನಿನ್ನೊಳಿರಿಸೊ
ವನರುಹ ಬ್ರಹ್ಮಾಂಡ ಜನನಿ ಜನಕನಾದ
ವನಜಾಕ್ಷ ಶ್ರೀರಾಮ ಘನಮುಕ್ತಿ ಪಾಲಿಸಿ 3