ಮಾನವನೇನಣ್ಣಾ | ಅವನೀಗ |
ತಾನುದ್ಧರಿಸಲುದೆರಿಯನು ಕಣ್ಣಾ ಪ
ಭಕುತಿಗೆ ಕಾಯವ ಕದ್ದಾ | ವಿ |
ರಕುತಿಗೆ ಮನವನುತಿದ್ದಾ |
ಸಕುತಲಿ ವಿಷಯ ಮೆದ್ದಾ |
ಮುಕುತಿ ಪಥದಿಂ ಜಾರಿ ಬಿದ್ದಾ 1
ಸಿಂತರ ಗುಣಗಳ ಕಡಿಯಾ | ಈ |
ಭ್ರಾಂತರ ಸಂಗದಿ ಸಿಡಿಯಾ |
ಸಂತರ ಕೇಳದೇ ನುಡಿಯಾ |
ಅಂತರಂಗದ ಸುಖವನು ಪಡಿಯಾ 2
ಅರ |
ವಿಂದನ ಭಜನೆಯ ಸ್ವಾದಾ |
ಮಂದನು ತಿಳಿಯದೆ ಮರೆದಾ |
ತಂದೆ ಮಹೀಪತಿ ನಂದನ ಸಾರಿದಾ 3