ಭಳಿರೆ ಭಳಿರೆ ನರಸಿಂಹ ಮಹಾಸಿಂಹ |
ವೈರಿ ಉರಿಮಾರಿ ಪ
ನಗನಗಾ ನಗನಗಗಳಲ್ಲಾಡೆ ಚತುರ್ದಶ |
ಜಗಜಗ ಜಗವೆಲ್ಲ ಕಂಪಿಸಿ ಕಂಬನಾಗೆ ||
ಹಗೆ ಹಗೆ ಬಲವ ದೆಶೆಗೆಡಿಸಿ ರೋಷಗಿಡಿ |
ಉಗು ಉಗು ಉಗುಳುತ್ತ ಬಂದ ನರಸಿಂಹ 1
ಬಿಗಿ ಬಿಗಿ ಬಿಗಿದು ಹುಬ್ಬುಗಂಟನೆ ಹಾಕಿ |
ಹೊಗೆ ಹೊಗೆ ಹೊಗೆ ಸುತ್ತಿ ಸರ್ವರಂಜೆ ||
ನೆಗ ನೆಗ ನೆಗ ನೆಗದು ಕುಪ್ಪಳಿಸಿ ಅಸುರನ್ನ |
ಮಗು ಮಗು ಮಗು ಮಗು ಬೇಡಿಕೊಂಡ ನರಸಿಂಹಾ 2
ಉಗು ಉಗು ಉಗು ಉಗರಿಂದ ಕ್ರೂರನ್ನ ಹೇರೊಡಲ |
ಬಗ ಬಗ ಬಗ ಬಗದು ರಕುತವನ್ನು |
ಉಗಿ ಉಗೀ ಉಗೀ ಉಗಿದು ಚಲ್ಲಿ ಕೊರಳಿಗೆ ಕರುಳ |
ತೆಗೆ ತೆಗೆ ತೆಗೆ ತೆಗೆದು ಇಟ್ಟ ನರಸಿಂಹಾ 3
ಯುಗ ಯುಗ ಯುಗ ಯುಗದೊಳಗೆ ಪ್ರಣತಾರ್ತಿ ಹರನೆಂದು |
ಝಗ ಝಗಾ ಝಗಝಗಿಪ ಮಕುಟ ತೂಗೆ |
ಸುರರು ಗಗನದಿ ನೆರೆದು |
ಮಿಗಿ ಮಿಗಿ ಮಿಗಿ ಮಿಗಿಲೆನೆ ನರಸಿಂಹಾ 4
ಒಂದೊಂದೊಂದೊಂದು ಮುನಿಗಳಿಗೊಲಿದು |
ಅಂದಂದಂದಂದದೀಗಾಯತ ವೊಲಿದು |
ಅಂದಂದಂದವ ಕಾವ ಚೊಳಂಗಿರಿ |
ಮಂದಿರನೆ ವಿಜಯವಿಠ್ಠಲ ನರಸಿಂಹಾ 5