ಒಟ್ಟು 9 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಹೊ ಎನ ಜೀವ ಮೈಯೆಲ್ಲ ನವಗಾಯ ಪ ಗಾಯ ಕಟ್ಟುವರಿಲ್ಲ ಗಾಳಿ ಹಾಕುವರಿಲ್ಲ ಅ ಮಾಡಿಲ್ಲ ಮಳೆಯಿಲ್ಲ ಮರದ ಮ್ಯಾಲೆ ನೀರ ಕಂಡೆಕಾಡು ಸುಡುವುದ ಕಂಡೆ ಬೂದಿಯ ಕಾಣಲಿಲ್ಲ 1 ಬಿತ್ತಲಿಲ್ಲ ಬೆಳೆಯಲಿಲ್ಲ ನೆಟ್ಟು ನೀರ ತೋರಲಿಲ್ಲಹೊತ್ತುಕೊಂಡು ತಿರುಗಿದೆ ರೊಕ್ಕದಾ ಪ್ರಾಣಿಯನ್ನು 2 ಅಡಿಕೆಯಷ್ಟು ಆಕಳಣ್ಣ ಹಿಡಿಕೆಯಷ್ಟು ಕೆಚ್ಚಲಣ್ಣಒಡನೆ ಕರೆದಾರ ಕರಿತೈತಿ ರಂಜಣಿಗಿ ಹಾಲಣ್ಣ 3 ಮೂರು ಮೊಳದಾ ಬಳ್ಳಿಗೆ ಆರು ಮೊಳದ ಕಾಯಣ್ಣಆರು ಹತ್ತರ ಮೊಳದ, ಕಾಯಿ ಕೊಯ್ಯುವ ಕುಡುಗೋಲಣ್ಣ 4 ಊರ ಮುಂದೆ ಹಿರಣ್ಯಕನ ಕೊರಳ ಕೊಯ್ವುದ ಕಂಡೆಕೊರಳ ಕೊಯ್ವುದ ಕಂಡೆ ರಕುತವ ಕಾಣಲಿಲ್ಲ 5 ಕಾಗಿನೆಲೆಯ ಕನಕದಾಸ ಹೇಳಿದಂಥ ಮುಂಡಿಗೆಯಮಿಗೆ ಒಳ ಹೊರಗೆಲ್ಲ ಬಲ್ಲ ಬಾಡದಾದಿ ಕೇಶವರಾಯ 6
--------------
ಕನಕದಾಸ
ಭಳಿರೆ ಭಳಿರೆ ನರಸಿಂಹ ಮಹಾಸಿಂಹ | ವೈರಿ ಉರಿಮಾರಿ ಪ ನಗನಗಾ ನಗನಗಗಳಲ್ಲಾಡೆ ಚತುರ್ದಶ | ಜಗಜಗ ಜಗವೆಲ್ಲ ಕಂಪಿಸಿ ಕಂಬನಾಗೆ || ಹಗೆ ಹಗೆ ಬಲವ ದೆಶೆಗೆಡಿಸಿ ರೋಷಗಿಡಿ | ಉಗು ಉಗು ಉಗುಳುತ್ತ ಬಂದ ನರಸಿಂಹ 1 ಬಿಗಿ ಬಿಗಿ ಬಿಗಿದು ಹುಬ್ಬುಗಂಟನೆ ಹಾಕಿ | ಹೊಗೆ ಹೊಗೆ ಹೊಗೆ ಸುತ್ತಿ ಸರ್ವರಂಜೆ || ನೆಗ ನೆಗ ನೆಗ ನೆಗದು ಕುಪ್ಪಳಿಸಿ ಅಸುರನ್ನ | ಮಗು ಮಗು ಮಗು ಮಗು ಬೇಡಿಕೊಂಡ ನರಸಿಂಹಾ 2 ಉಗು ಉಗು ಉಗು ಉಗರಿಂದ ಕ್ರೂರನ್ನ ಹೇರೊಡಲ | ಬಗ ಬಗ ಬಗ ಬಗದು ರಕುತವನ್ನು | ಉಗಿ ಉಗೀ ಉಗೀ ಉಗಿದು ಚಲ್ಲಿ ಕೊರಳಿಗೆ ಕರುಳ | ತೆಗೆ ತೆಗೆ ತೆಗೆ ತೆಗೆದು ಇಟ್ಟ ನರಸಿಂಹಾ 3 ಯುಗ ಯುಗ ಯುಗ ಯುಗದೊಳಗೆ ಪ್ರಣತಾರ್ತಿ ಹರನೆಂದು | ಝಗ ಝಗಾ ಝಗಝಗಿಪ ಮಕುಟ ತೂಗೆ | ಸುರರು ಗಗನದಿ ನೆರೆದು | ಮಿಗಿ ಮಿಗಿ ಮಿಗಿ ಮಿಗಿಲೆನೆ ನರಸಿಂಹಾ 4 ಒಂದೊಂದೊಂದೊಂದು ಮುನಿಗಳಿಗೊಲಿದು | ಅಂದಂದಂದಂದದೀಗಾಯತ ವೊಲಿದು | ಅಂದಂದಂದವ ಕಾವ ಚೊಳಂಗಿರಿ | ಮಂದಿರನೆ ವಿಜಯವಿಠ್ಠಲ ನರಸಿಂಹಾ 5
--------------
ವಿಜಯದಾಸ
ಯದುರ್ಯಾರು ನಿಲ್ಲುವರೋ ಹನುಮರಾಯಾ ನಿನಗೆದುರ್ಯಾರು ನಿಲ್ಲುವರಯ್ಯಾ ಈ ಜಗತ್ರಯದಿ ಪ ಮದನ ಶರಾರ್ಬತ [?] ಕದನ ಕರ್ಕಶ ಧೀರಮಣಿಯೇ ಅ.ಪ. ಜನನಿಯ ಜಠರದಿ ಜನಿಸಿದಾಗಲೆ ದಿವಮಂಡಲಕೆ ಹಾರಿದೆ ಮಾಡಿ ದುರಂಧರನೆನಿಸಿದೆ 1 ದುರುಳ ದುಶ್ಶಾಸನನ ರಕುತವ ಹೀರಿ ಕರುಳು ಬಗೆವಾಗ ಮಾರಿ ತಗ್ಗಿಸಿ ಕೆಲಸಾರಿದರಲ್ಲದೆ 2 ಅದ್ವೈತ ಮತವ ಗೆದ್ದು ಮದ್ಗುರು ಮುನಿಮೌನಿರಾಮಾ 3
--------------
ಮಹಾನಿಥಿವಿಠಲ
ಸೋಹಮೆಂದು ಸುಖಿಸು ವಿಗತ ಮೋಹದಿಂದ ಸಂತತಂದೇಹ ದೇಹದೊಳಗೆ ತೋರ್ಪನೀ ಹಿತಾತ್ಮನೀತ ಪರಮ ಪಘನದ ರತುನಮಂಟಪವನು ಶುನಕವೇರಿ ತನ್ನ ನೆಳಲಕನಲಿ ನೋಡಿ ಗಳಹಿ ತಾನಿದೆಂಬುದರಿಯದೆಮನದೊಳನ್ನವೆಂದು ಭ್ರಮಿಸಿ ಮತ್ತೆ ಕಡಿಯಲದರೊಳೊಡದು*ನೆನೆವ ತನ್ನ ರಕುತವನ್ನು ಸವಿವ ರೀತಿಯಲಿವಿನುತ ಜೀವ ತನ್ನ ಛಾಯೆಯನು ಸಮಸ್ತರೊಳಗೆ ನೋಡಿನೆನೆದಿದನ್ಯವೆನುತ ಭ್ರಾಂತನಾಗಿ ಮಾಯೆುಂದನುಭವಿಸುವೆನಿದನಿದೊಲ್ಲೆನೆನುತ ಭೇದ ಬುದ್ಧಿುಂದಮನುಮಥಾಗ್ನಿುಂದ ಬೆಂದು ಮನದಲಿದ್ದ ಕಾರಣಂ 1ನರರು ಗಜವ ಪಿಡಿಯೆ ಕಪ್ಪ ಕೊರವುತದರ ನಡುವೆ ತಿಟ್ಟನಿರಿಸಿ ಕಣ್ಣಿಯಲ್ಲಿ ಕಟ್ಟಿಯದರ ಸುತ್ತಲೂನೆರಹಿ ಕಾಷ್ಠ ಮೃತ್ತುಗಳನು ನಿಜದಪ್ಪಿರಮಾಡೆ ಭ್ರಮಿಸಿಕರಿಣಿಗಾಗಿ ಬಂದು ಗಜವು ಮರೆದು ಬಿದ್ದ ರೀತಿುಂದುರೆ ವಿರಿಂಚಿ ಕೂಪ ಸಾಮ್ಯವಾದ ನರಶರೀರಮಂಮರೆಸಲದರ ಮೇಲೆ ಚರ್ಮವೆನಿಪ ಮಾಯೆುಂದ ನರರುಮರೆತು ತಾವಿದೆನ್ನುತದರಲಿದ್ದ ಕಾರಣಂ 2ಮರೆದು ತನ್ನ ತಾಣವನ್ನು ಮೆರೆದುಲಂಘಿಸುತಲಿ ಭೇಕವಿರಲು ಹೊಂಚಿ ಪಿಡಿದು ಪಾವು ಪಿರಿದು ದೇಹಮಂನೆರೆದು ನುಂಗಲಾರದಿರುತಲಿರಲು ಭೇಕ ತನ್ನ ಹಸಿವಿಗಿರದೆ ಬಾಯ ತೆಗೆದು ನೊಣನನರಸಿ ಪಿಡಿವ ರೀತಿುಂನರರು ತಮ್ಮ ಕಾಲಸರ್ಪ ಉರುಬಲದನು ಮರೆತು ಭೋಗಪರತೆುಂದ ಕಾಮರೋಷ ವಿರಸರಾಗುತಿರಲು ನೀನರಿದನಿತ್ಯವೆಲ್ಲವೆಂದು ಮೆರೆದು ಗೋಪಾಲಾರ್ಯ ಪದವನೆರೆದು* ಭಕತಿುಂದ ನೋಡಿ ಪಾಡಿ ಹರುಷದಿಂದ ನೀ 3
--------------
ಗೋಪಾಲಾರ್ಯರು
ಹರಿಯೆ ಮೂಜಗದ ದೊರೆಯೆ ನಿನಗಿದು ಸರಿಯೆ ಪ. ಹರಿಯೆ ಮೂಜಗದ ದೊರೆಯೆ ನಿನ್ನನೆ ಮರೆಯಪೊಕ್ಕವರಲ್ಲಿ ಈ ಪರಿ ಬರಿಯ ಪಂಥದಿ ಮರುಗದಿರ್ಪುದು ಸರಿಯೆ ನಿನಗದು ಸರಸವಲ್ಲದುಅ.ಪ. ಉಕ್ಕಿನ ಕಂಬದಿಂದ ಉದಿಸಿ ಬಂದು ರಕ್ಕಸನುರವ ಸೀಳಿ ಕರುಳನು ಬಗೆದು ಉಕ್ಕುವ ಕೋಪದಿಂದ ರಕುತವು ಸುರಿಯೆ ಭಕ್ತ ಪ್ರಹ್ಲಾದನಾದರದಿ ಕಾಯ್ದು ಭಕ್ತ ವತ್ಸಲನೆನಿಸಲಹುದು ಶಕ್ತಿಹೀನತೆಯಿಂದ ಮರೆಹೊಕ್ಕ ಎನ್ನನು [ಕಾಯು]ವುದು 1 ಒಪ್ಪಿಡಿಯವಲಕ್ಕಿಯ ಒಪ್ಪಿಸಿನಿಂದ ವಿಪ್ರನ ನಲವಿಂದ ನೋಡುತಲಂತು ವಿಪುಲಸಂಪದವನ್ನು ಕರುಣಿಸಿದಂಥ ಅಪ್ರತಿಮ ಸಾಹಸಿಯೆನುತೆ ನಿನ್ನೊಳು ತಪಿಸಿ ಬೇಡುವ ಎನ್ನೊಳೀಪರಿ ಒಪ್ಪದೊಪ್ಪದೆನ್ನಪ್ಪ ಕೇಳಿದು ಸರಿಯೇ ಶ್ರೀನರಹರಿಯೇ 2 ಮಾನಿತÀಧ್ರುವ ಬಾಲನಂ ಮನ್ನಿಸಿ ಪೊರೆದೆ ಮಾನಿನಿ ಪಾಂಚಾಲಿಯ ಮಾನದಿ ಕಾಯ್ದೆ ಸಾನುರಾಗದಿಂ ಗಜನಂ ಉದ್ಧರಿಸಿದೆ ಕ್ಷೋಣಿಯೊಳಗತಿ ದೀನರಾದರ ಸಾನುರಾಗದಿ ಪೊರೆವ ಶ್ರೀಧರ ದಾನವಾಂತಕ ಶೇಷಗಿರೀಶನೆ ಸೂನುವೆಂಬಭಿಮಾನ ನಿನಗಿರೆ [ಮಾಣದೆನ್ನನು ಕಾಯೊ] ಹರಿಯೇ ಶ್ರೀನರಹರಿಯೇ3
--------------
ನಂಜನಗೂಡು ತಿರುಮಲಾಂಬಾ
ಏನು ಮರುಳಾದೆವ್ವ ಎಲೆ ಭಾರತೀ |ನೀನರಿಯೆ ಪವನನಿಂಥವನೆಂಬುದು ಪಕಲ್ಲು ಹೊರುವನು ಮತ್ತೆ ಯಾರಿಂದಲಾಗದವು |ಎಲ್ಲರಂತಲ್ಲ ಕಪಿರೂಪನೋಡು||ಖುಲ್ಲಫಲಪುಷ್ಪಯುಕ್ತ ವನವನು ಕೆಡಿಸಿದನು |ಎಲ್ಲಿಂದ ಒದಗಿದನೊ ಈ ಪತಿಯೊ ನಿನಗೆ1ರಕುತವಂ ಪಾನ ಮಾಡಿದನಂತೆ ಕೇಳಿದೆಯಾ |ರಕ್ಕಸೊಬ್ಬಳು ನಿನಗೆ ಸವತಿ ಇಹಳೂ ||ಮಕ್ಕಮಾರಿಮಗನುಂಟು ಗಂಡನು ಬದ |ನಕ್ಕೆ ಗತಿಯಿಲ್ಲದೆಲೆಭಿಕ್ಷೆಬೇಡುವನು 2ಹುಟ್ಟು ಬಡವವ ತಾನಾದರೇನಾಗಲಿ ನಿನ್ನ |ಬಿಟ್ಟು ತುರ್ಯಾಶ್ರಮವ ಧರಿಸಿಕೊಂಡು ||ದೃಷ್ಟಿಗೋಚರನಾಗದೇ ನರರಿಗೆ ಪ್ರಾಣೇಶವಿಠಲನ ಬಳಿಯಲ್ಲಿ ಬದರಿಯೊಳು ಸೇರಿಹನು 3
--------------
ಪ್ರಾಣೇಶದಾಸರು
ಗುರುರಾಯರ ನಂಬಿರೋ-ಮಾರುತಿಯೆಂಬ ಪಗುರುರಾಯರ ನಂಬಿ ಬಿಡದೆ ಯಾವಾಗಲು |ದುರಿತವ ಕಳೆದು ಸದ್ಗತಿಯ ಪಡೆವರೆಲ್ಲ ಅ.ಪವನಧಿಯ ಮನೋವೇಗದಿಂದ ಲಂಘಿಸಿ ಮಹಿ-ತನುಜೆಯ ಶೋಕತಾಪವ ಕಳೆದು ||ವನವ ಬೇರೊಡನೆ ಕಿತ್ತೀಡಾಡಿ ಎದುರಾದದನುಜರ ಸದೆದು ಲಂಕೆಯ ತನ್ನ ಸಖಗಿತ್ತ 1ಕೌರವ ಬಕ ಹಿಡಿಂಬಕ ಕೀಚಕರೆಂಬ |ಕ್ರೊರಸಂತತಿಯೆಲ್ಲ ನುಗ್ಗಲೊತ್ತಿ ||ಘೋರಪಾತಕಿದುಶ್ಯಾಸನ ರಕುತವಹೀರಿ ಮುದದಿ ಮುರವೈರಿಯ ಭಜಿಸಿದ 2ಜೀವೇಶರೊಂದೆಂಬ ದುರ್ವಾದಿಗಳ ಕು-ಭಾವಶಾಸ್ರ್ತಗಳೆಲ್ಲ ತರಿದೋಡಿಸಿ ||ಕೋವಿದರಿಗೆ ಸದ್ಛಾಷ್ಯ ಸುಧೆಯನಿತ್ತುದೇವ ಪುರಂದರವಿಠಲ ಸೇವಕನಾದ 3
--------------
ಪುರಂದರದಾಸರು
ದೂರ ನೋಡುವುದುಚಿತವಲ್ಲವೋವಾರವಾರಕೆ ಬಿಡದೆ ತುತಿಪೆ |ಮೀರಿದವನೆ ನಾ ನಿನಗೆ ಪವನ ಪರಾಮಚಂದ್ರನ ಸೇವೆಯ ನಿ-ಷ್ಕಾಮದಿಂದ ಮಾಡಿ ಬಹಳ |ತಾಮಸಜನಂಗಳ ತಂದೆನೀಂ ಮಹಾ ಸಮರ್ಥನೆಂದೇ ||ನೀ ಮನೆಯಿಲ್ಲದವನು ಎಂದೆನೆ | ಕೋತಿರೂಪಈ ಮುಖವು ಹೀಗೆ ಅಂದೆನೆ | ನಗವ ಪೊತ್ತಿಭೂಮಿಯೊಳಗೆ ಕಠಿಣನೆಂದೆನೆ | ಹನುಮನೆ 1ಪೊಕ್ಕು ರಣಕೆ ಹೆಜ್ಜೆಯ ಹಿಂದಕೆಯಿಕ್ಕದೆ ಭುಜವ ಚಪ್ಪರಿಸಲಾಗ |ನಕ್ಕವರ ಬಲ ಹುರಿದು ಹೋಯಿತು |ಅಕ್ಕಟಕ್ಕಟಾ ನೀ ವೀರನೆಂದೇ ||ರಕುತವ ಕುಡಿದ ನೀಚನೆಂದೆನೇ | ತಿಂದು ತಿಂದಿರಕ್ಕಸಿಯನು ಕೂಡಿದನೆಂದೆನೇ | ಒಡಲ ಬಾಕಸೊಕ್ಕು ನಿನಗೆ ಬಹಳವೆಂದೆನೇ | ಭೀಮನೇ 2ತಿಳಿದು ಪ್ರಾಣೇಶ ವಿಠಲನಿಚ್ಛೆ |ಇಳೆಯೊಳುದಿಸಿ ಹಲವು ಮತವ ||ನೆಲಕೆವೊರಿಸಿ ಮರುತ ಮತವ |ನಿಲ ಹಾಕಿದ ಗುರುಗಳೆಂದೇ ||ತುಳುವರಲ್ಲಿ ಪುಟ್ಟಿದೆಯೆಂದೆನೇ | ಬಹಳ ಗುಗ್ಗರಿಮೆಲಿದ ಭೂತ ಮಗುವು ಎಂದೆನೇ |ಭಾರತೀಶಸಲಹೋ ಬಿಡದತಿಮ್ಮನೆಂದರೆ | ಮಧ್ವನೇ 3
--------------
ಪ್ರಾಣೇಶದಾಸರು
ಶರಣು ಶರಣು ಶರಣ್ಯವಂದಿತ ಶಂಖಚಕ್ರಗದಾಧರ |ಶರಣು ಸರ್ವೇಶ್ವರ ಅಹೋಬಲ ಶರಣ ಸಲಹೋ ನರಹರಿ ಪ.ಶೀಲದಲಿ ಶಿಶು ನಿನ್ನ ನೆನೆಯಲುಕಾಲಲೋತ್ತುತ ಖಳರನು |ಲೀಲೆಯಿಂದಲಿ ಚಿಟಿಲು ಭುಗಿಭುಗಿ -ಲೆನುತ ಉಕ್ಕಿನ ಕಂಬದಿ ||ಖೂಳದೈತ್ಯನ ತೋಳಿನಿಂದಲಿ ಸೀಳಿಹೊಟ್ಟೆಯ ಕರುಳನು ||ಮಾಲೆಯನು ಕೊರಳೊಳಗೆ ಧರಿಸಿದಜ್ವಾಲನರಸಿಂಹಮೂರ್ತಿಗೆ 1ಖಳಖಳಾ ಖಳನೆಂದು ಕೂಗಲು ಕೋಟಿ ಸಿಡಿಲಿನ ರಭಸದಿ ||ಜಲಧಿ ಗುಳಗುಳನೆದ್ದು ಉಕ್ಕಲು ಜ್ವಲಿತ ಕುಲಗಿರಿ ಉರುಳಲು ||ನೆಲನು ಬಳಬಳನೆಂದು ಬಿರಿಯಲು ಕೆಳಗೆ ದಿಗ್ಗಜ ನಡುಗಲು ||ಥಳ ಥಳಾ ಥಳ ಹೊಳೆವ ಮಿಂಚಿನೊಲ್ಹೊಳೆವ ನರಸಿಂಹ ಮೂರ್ತಿಗೆ 2ಕೋರೆ ಕೆಂಜೆಡೆ ಕಣ್ಣು ಕಿವಿ ತೆರೆ -ಬಾಯಿ ಮೂಗಿನ ಶ್ವಾಸದಿ||ಮೇರುಗಿರಿ ಮಿಗಿಮಿಗಿಲು ಮಿಕ್ಕುವ ತೋರ ಕಿಡಿಗಳ ಸೂಸುತ ||ಸಾರಿಸಾರಿಗೆ ಹೃದಯರಕುತವ ಸೂರೆ ಸುರಿಸುರಿದೆರಗುತಘೋರರೂಪಗಳಿಂದ ಮೆರೆಯುವ ಧೀರ ನರಹರಿಮೂರ್ತಿಗೆ3ಹರನು ವಾರಿಜಭವನು ಕರಗಳ ಮುಗಿದು ಜಯಜಯವೆನುತಿರೆ ||ತರಳ ಪ್ರಹ್ಲಾದನಿಗೆ ತಮ್ಮಯ ಶರಿರಬಾಧೆಯ ಪೇಳಲು ||ಕರುಣಿ ಎನ್ನನು ಕರುಣಿಸೆನ್ನಲು ತ್ವರದಲಭಯವನೀಡುತ ||ಸಿರಿಬರಲು ತೊಡೆಯಲ್ಲಿ ಧರಿಸಿದ ಶಾಂತ ನರಹರಿಮೂರ್ತಿಗೆ4ವರವ ಬೇಡಿ ದನಿರುವ ತಂದೆಯ ಪರಿಯನೆಲ್ಲವ ಬಣ್ಣಿಸಿ ||ನಿರುತದಲಿ ನಿನ್ನೆರಡು ತೊಡೆಯಲಿ ಶರೀರವಿರಲೆಂದೆನುತಲಿ ||ಸುರರು ಪುಷ್ಪದ ವೃಷ್ಟಿಗರೆಯಲು ಸರಸಿಜಾಕ್ಷನು ಶಾಂತದಿ ||ಸಿರಿಯ ಸುಖವನು ಮರೆದಹೋಬಲವರದ ಪುರಂದರವಿಠಲಗೆ 5
--------------
ಪುರಂದರದಾಸರು