ಮಂದ ಮನುಜಾ
ಮೂರ್ತಿ ಶ್ರೀ ಹೆನ್ನೆಹೋಬಲವಾಸನಾ ಪ
ಮನಶುದ್ಧಿಯಾಗಿ ನಿರ್ಮಲಜ್ಞಾನದಲಿಯನ್ನು
ವನಜಸಂಭವ ಪಿತನ ವರ್ಣಿಸುತಲಿ
ದಿನಗಳನು ಕಳೆಯುತಲಿ ದೀನರಕ್ಷಕ ದೇವನ
ಅನುಮಾನಗಳ ತೊರೆದು ಆನಂದದಿಂದಲಿ ಇನ್ನು 1
ಸಕಲಾಂತರ್ಯಾಮಿಯಾದ ಸಕಲ ದೀನರ ದೇವ
ಸಕಲ ಸಾಧು ಸಜ್ಜನರ ಸರ್ವದಲಿ
ನಿಖರವಾಗಿ ರಕ್ಷಿಸುವ ಲಕುಮಿಯರಸನ ಹೃದಯ
ಭಕುತಿಯಲಿ ಪಾಡುತಲಿ ಪರಮ ಪುರುಷನ ಇಂದು2
ಎಂದೆಂದು ಹರಿಪಾದ ಹೊಂದಿದ ಮಹಾಮಹಿಮ
ರಂ------ತಿಳಿದು ನೀಯಿಂದು ಇನ್ನು
ಸಂದೇಹವನ್ನೆ ಬಿಟ್ಟು ತಂದೆ `ಹೆನ್ನವಿಠ್ಠಲ'
ಚಂದದಿಂದಲಿ ಹೃದಯ ಮಂದಿರದಲಿನ್ನೂ 3