ಒಟ್ಟು 14 ಕಡೆಗಳಲ್ಲಿ , 6 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರೆದರೆ ಓ ಓ ಎನಬಾರದೆ ಮರೆತರು ಕೂಗಿನ ದನಿಕೇಳದೆ ರಂಗ ಪ ಶರಣಜನರು ಸಾಸಿರವಿದ್ದರೇನೋ ಮೊರೆಯಿಡುವವ ಕಂಡರರಿವಾಗದೇನೋ ಅ.ಪ ಲಕ್ಷಜೀವಿಗಳನ್ನು ರಕ್ಷಿಸುವವನೆಂದು ವಕ್ಷದೊಳಿರುವ ಶ್ರೀಲಕ್ಷ್ಮಿ ಹೇಳುವಳು ಪಕ್ಷಿರಾಜನ ಫಣಿಯಕ್ಷನಂಗನೆಯರು ಅಕ್ಷರ ಲೋಕಾಧ್ಯಕ್ಷನೆನುವರು 1 ಯೋಗವನರಿಯೆನು ಯಾಗವನರಿಯೆನು ತ್ಯಾಗ ಮಾಡುವ ಬುದ್ಧಿ ಎಳ್ಳನಿತಿಲ್ಲ ರಾಗ ರಚನೆಗಳ ಅರಿವೆನಗಿಲ್ಲ ನಾಗಶಯನ ಕಾಯೋ ಮಾಂಗಿರಿರಂಗ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗಿರಿಯೆಡೆಗೆ ಬರಲಾರೆನೇ [ಮಾಂಗಿರಿ ರಂಗನ] ಪ ಗಿರಿಯೆಡೆಗೆ ಬರಲಾರೆ ಬರುವದೃಢವಿಡಲಾರೆ ಬರಲಾರೆನೆನಲಾರೆ ಹೊರಡಲಾರೆನೊ ರಂಗ ಅ.ಪ ನೂರುಯೋಜನ ಪೋಪೆನೇ ಅಲ್ಲಿಂದಿತ್ತ ಮೂರು ಹೊನ್ನನು ಹಿಡಿದಾ ಮೂರು ಹರಿದಾರಿಯ1 ಪರಿಕಿಸುತಿಹೆ ನೀನೆನ್ನಾ ಮಾಮನದ ರನ್ನ ಬರುವೆ ನಿನ್ನನು ನೋಡಿ ಶಿರಬಾಗಿ ಬಹೆನೆಂಬ ಭರವಸೆ ಬಿಡಲಿಲ್ಲ ಹೊರಡಲಿಲ್ಲವೋ ರಂಗ2 ನೀನರಿಯದುದಾವುದೋ ಸೂನು ಧೃವರಾಯನೆಡೆಗೆ ನೀನೋಡಿ ಬರಲಿಲ್ಲವೇ ನಾನು ಮೊರೆಯಿಡೆ ನಿನ್ನ ಮಾನಸ ಕರಗದಲ್ಲ 3 ತಾಮರಸಾಕ್ಷಾ ನಿನ್ನ ನಾಮದ ಭಜನೆ ರಾಮದಾಸಾರ್ಚಿತ ಕೋಮಲಾಂಗ ರಂಗ4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿನ್ನ ಕಾಣದೆ ಬನ್ನಗೊಂಡೆನೊ ಪನ್ನಗಾರಿ ವಾಹನಾ ಪ ಯೆನ್ನ ಪಾಲಿಸೋ ಗೋಪಿನಂದನಾ ಅ.ಪ ಕರಿಯ ಪೊರೆದು ತರಳ ಧೃವಗೆ ವರವನಿತ್ತುದ ಬಲ್ಲೆನು 1 ತರಳೆದ್ರೌಪದಿ ಕರವಮುಗಿದು ಕರೆಯಲಾಗ ಬಂದೆರಂಗ ಬರಿಯಮಾಯೆಯ ತೋರದೆನ್ನ ಪೊರೆಯೋ ಮಾಂಗಿರಿವಾಸರಂಗ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪರಮಾತ್ಮನೆ ಪರಿಪೂರ್ಣನೆ ವರವೇಂಕಟರಮಣನೆ ರಾಮ ಪ ಪೊರೆಯೋ ಸದಾ ಭಕ್ತ ಸುಪ್ರೇಮ ಅ.ಪ ನಿತ್ಯತೃಪ್ತ ನಿರ್ಮಲಾತ್ಮ ಸತ್ಯಮೂರ್ತಿ ಷಡ್ಗುಣಭರಿತ ಭೃತ್ಯವರ್ಗ ಸಂರಕ್ಷಣ ಶಕ್ತ ಪ್ರತ್ಯಕ್ಷ ಪಾವನ ಚರಿತ 1 ನಿನ್ನ ಮಹಿಮೆಯನ್ನು ಪೊಗಳೆ ಪನ್ನಗೇಶನಿಂದಲಸದಳ ಇನ್ನು ನಾನು ಪೊಗಳಲಪ್ಪನೆ ಸನ್ನುತಾಂಗ ಸದಯರಂಗ2 ಮುನಿಗಳಿಂದ ಪೂಜೆಗೊಂಬ ಘನಗುಣಾತ್ಮ ನಿನ್ನ ಯಾಜಿಪೆ ಅಣುಗನಿಂದಲಾಗಲಹುದೆ ತನುಮನ ಪೊರೆ ಆನಂದ3 ಉಣ್ಣಲಿಡಲಿದೆಲ್ಲ ನಿನ್ನದೊ ಇನ್ನದೇನ ತಂದು ಕೊಡಲೊ ಮನ್ನಿಸುವುದೊ ಹೆಜ್ಜಾಜಿಯ ಚನ್ನಕೇಶವ 4
--------------
ಶಾಮಶರ್ಮರು
ಬಡವನಾಗಿರುವನಕ ಭಯವಿಲ್ಲವಯ್ಯ ಪ ಕೆಡುಕ ವಂಚಕ ಕಳ್ಳ ಬಳಿಬಾರನಯ್ಯ ಅ.ಪ ಬಡವತಾನಡಿಗಡಿಗೆ ಕಡುದೈನ್ಯಭಾವದಲಿ ದೃಢ ಭಕ್ತಿಯೊಳು ಹರಿಗೆ ಪೊಡಮಡುವನು ಕಡವರವನಾಂತವನು ಕಡುನುಡಿಗಳನು ಕಲಿತು ಪೊಡವಿಚನೆಂದೆನಿಸಿ ಕಡುಲೋಭಿಯಹನು 1 ಗುಣ ಶಾಂತಿ ನಯ ವಿನಯ ಹಣವಂತಗಿರದಯ್ಯ ಹಣವು ಕಪಿಯಂತವನ ಕುಣಿಸದಿರದು ಉಣಿಸು ನಿದ್ರಾದಿಗಳು ಕ್ಷಣಮಾತ್ರವಿಲ್ಲವಗೆ ಹಣದಾಸೆ ಎಳ್ಳಷ್ಟು ಬೇಡ ಮಾಂಗಿರಿರಂಗ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೇಡಿಕೆಗೆ ಮಿತಿಯಿಲ್ಲ ಬೇಡಿಕೆಗೆ ಕೊನೆಯಿಲ್ಲ ಬೇಡಿ ಬದುಕುವುದೊಂದು ರೋಗವಯ್ಯ ಪ ರೂಢಿಗೊಡೆಯನ ದಿವ್ಯನಾಮಗಳ ಕೊಂಡಾಡಿ ಹಾಡುವವಗೆ ರೋಗಭಯವಿಲ್ಲವಯ್ಯಾ ಅ.ಪ ಬೇಡುವವ ಮನೆಮನೆಗೆ ಓಡೋಡಿ ನಿಲಬೇಕು ನಾಡಿಗರ ನೋಡಿ ಕೈ ನೀಡಬೇಕು ನೋಡಿದರೆ ಕಟ್ಟಾಳು ಬೇಡುವೆ ಹೋಗತ್ತ ದುಡಿ ಗೇಡಿ ಎಂದಾಗ ಗೋಳಾಡಲೇಕಯ್ಯ 1 ಕಂಡ ಕಂಡವರಿಗೆಲ್ಲ ಕೈಮುಗಿದು ಮಂಡೆಯ ಬಾಗಿ ಭಂಡನೆಂದೆನಿಸುವುದು ಮಾನಭಂಗ ಪುಂಡರೀಕಾಕ್ಷ ಗೋವಿಂದ ನಾಮವ ಹಾಡಿ ಕೊಂಡಾಡಲೊದಗುವನು ಮಾಂಗಿರಿಯರಂಗ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀಹರಿಸ್ತುತಿ ಜೈ ಹರಿ ವಿಠ್ಠಲ ಪಾಂಡುರಂಗ 1 ರಕುಮÁಯೀಧವ ಪಾಂಡುರಂಗ 2 ಸಾಧುಜನಾರ್ಚಿತ ಪಾಂಡುರಂಗ 3 ಕಾಲಾಂತಕಪ್ರಿಯ ಪಾಂಡುರಂಗ 4 ಕರಿರಾಜವರದ ಪಾಂಡುರಂಗ 5 ವನಜಾಸನನುತ ಪಾಂಡುರಂಗ 6 ಕುಟಿಲಾಂತಕಹರೆ ಪಾಂಡುರಂಗ 7 ಭಾವಜಪಿತಹರೆ ಪಾಂಡುರಂಗ 8 ಫಣಿಪತಿಶಯನ ಪಾಂಡುರಂಗ9 ದುರಿತವಿದೂರ ಪಾಂಡುರಂಗ 10 ವನಜನಾಭಹರೆ ಪಾಂಡುರಂಗ 11 ವಾತಾತ್ಮಜನುತ ಪಾಂಡುರಂಗ 12 ಜಗದೋದ್ಧಾರ ಪಾಂಡುರಂಗ 13 ಪುಂಡರೀಕವರದ ಪಾಂಡುರಂಗ 14 ದೀನಮಂದಾರ ಪಾಂಡುರಂಗ 15 ಸಿಂಧುಶಯನಹರೆ ಪಾಂಡುರಂಗ 16 ಶ್ರೀಕರಸೇವಿತ ಪಾಂಡುರಂಗ 17 ನರಕಾಂತಕಹರೆ ಪಾಂಡುರಂಗ 18 ಸಾಮಗಾನಪ್ರಿಯ ಪಾಂಡುರಂಗ 19 ಕ್ಷಾತ್ರಕುಲಾಂತಕ ಪಾಂಡುರಂಗ | ಧಾತ್ರೀರಮಣ ಪಾಂಡುರಂಗ 20 ಕಾಮಿತಫಲದ ಪಾಂಡುರಂಗ 21 ಪಾವನಚರಿತ ಪಾಂಡುರಂಗ 22 ಉತ್ತಮದೇವನೆ ಪಾಂಡುರಂಗ 23 ಸೋಜಿಗಪುರುಷನೆ ಪಾಂಡುರಂಗ24 ಭಾನುಪ್ರಕಾಶ ಪಾಂಡುರಂಗ 25 ಸುರಭಿನಿವಾಸ ಪಾಂಡುರಂಗ 26 ಭಕುತಪೋಷಕ ಪಾಂಡುರಂಗ27 ತ್ರಿಗುಣಾತೀತಾ ಪಾಂಡುರಂಗ 28 ಚಂದ್ರಮೌಳಿಹಿತ ಪಾಂಡುರಂಗ26 ಸುರಮುನಿಸನ್ನುತ ಪಾಂಡುರಂಗ30 ದಾನವಾಂತಕ ಪಾಂಡುರಂಗ 31 ಭೂಸುರವಂದಿತ ಪಾಂಡುರಂಗ32 ಸೃಷ್ಟಿಗೊಡೆಯ ಶ್ರೀ ಪಾಂಡುರಂಗ 33 ಉರ್ವಿರಮಣ ಪಾಂಡುರಂಗ 34 ಶೃತಿತತಿವಿನುತ ಪಾಂಡುರಂಗ 35 ಜೀವೋತ್ತಮನುತ ಪಾಂಡುರಂಗ36 ನಾಕಾಧಿಪನುತ ಪಾಂಡುರಂಗ 37 ಮೋದದಾಯಕ ಪಾಂಡುರಂಗ38 ಭಾಗವತಪ್ರಿಯ ಪಾಂಡುರಂಗ39 ಕರುಣಿಗಳರಸನೆ ಪಾಂಡುರಂಗ40 ತಾಪತ್ರಯಹರೆ ಪಾಂಡುರಂಗ41 ಕರ್ಮಾಧಿಪತೆ ಪಾಂಡುರಂಗ42 ಕಪಟನಾಟಕ ಪಾಂಡುರಂಗ43 ಬಾದರಾಯಣ ಪಾಂಡುರಂಗ44 ಮುಂದೆ ದಾರಿಯೇನೋ ಪಾಂಡುರಂಗ 45 ಪಾಶಪರಿಹರಿಸೊ ಪಾಂಡುರಂಗ 46 ಎಷ್ಟು ಪೊಗಳಲೋ ಪಾಂಡುರಂಗ 47 ಇಷ್ಟದಾಯಕ ಪಾಂಡುರಂಗ 48 ಜನುಮ ನೀಗಿಸೊ ಪಾಂಡುರಂಗ 49 ಘನ್ನಮಹಿಮನೆ ಪಾಂಡುರಂಗ 50 ದೀನವತ್ಸಲನೆ ಪಾಂಡುರಂಗ 51 ಪಾದ ಪಾಂಡುರಂಗ52 ಶುಭಮಂಗಳಹರೆ ಪಾಂಡುರಂಗ 53 ಶ್ರೀಶಕೇಶವ ಪಾಂಡುರಂಗ 54
--------------
ಶ್ರೀಶ ಕೇಶವದಾಸರು
ಸಾಕು ಸಾಕು ಮನುಜಸೇವೆಯು, ರಂಗಯ್ಯ ಇನ್ನು ಪ ಸಾಕು ಸಾಕು ಮನುಜಸೇವೆ ಮಾಡಿ ದಣಿದು ನೊಂದೆ ನಾನುಬೇಕು ನಿನ್ನ ಪಾದಭಜನೆ ಕೊಟ್ಟು ಸಲಹೊ ರಂಗಯ್ಯ ಅ ಹೊತ್ತರೆದ್ದು ಹೋಗಿ ಪರರ ಚಿತ್ತವೃತ್ತಿಯನ್ನು ತಿಳಿದುಹತ್ತರಿದ್ದು ಹಲವು ಕೆಲಸ ಭೃತ್ಯನಂತೆ ಮಾಡಿ - ರಿಕ್ತಹಸ್ತದಿಂದ ಮನೆಯ ಸೇರುವೆ - ಆಸೆಗಾಗಿಮತ್ತೆ ಕಂಡ ಕಡೆಗೆ ತೊಲಗುವೆ - ಬಂದು ಅಪರರಾತ್ರಿಯಲ್ಲಿ ತಿಂದು ಒರಗುವೆ ರಂಗಯ್ಯ ರಂಗ 1 ಸ್ನಾನ ಸಂಧ್ಯಾನುಷ್ಠಾನ ನೇಮವೆಲ್ಲ ತೊರೆದುಬಿಟ್ಟುಹೀನನಾಗಿ ಕೆಟ್ಟ ಜನರ ಮನೆಗಳನ್ನು ತಿರುಗಿ ತಿರುಗಿಶ್ವಾನನಂತೆ ದಿನವ ಕಳೆವೆನೊ - ದುರಾಸೆಯನ್ನುಮನಸಿನಲ್ಲಿ ಮಡಗಿಕೊಂಡು ಕುದಿವೆನೊಕೊನೆಗೂ ಎಳ್ಳುಕಾಳಿನಷ್ಟು ಸುಖವ ಕಾಣೆನೊ ರಂಗಯ್ಯ ರಂಗ2 ಮಾಧವ - ರಂಗಯ್ಯ ರಂಗ3
--------------
ಕನಕದಾಸ
ಏಕೆ ಕಡೆಗಣ್ಣಿಂದ ನೋಡುವೆ - ಕೃಷ್ಣ |ನೀ ಕರುಣಾಕರನಲ್ಲವೆ ? ಪಭಕ್ತ ವತ್ಸಲ ನೀನಲ್ಲವೆ -ಕೃಷ್ಣ |ಚಿತ್ಸುಖದಾತ ನೀನಲ್ಲವೆ ? ||ಅತ್ಯಂತ ಅಪರಾಧಿ ನಾನಾದಡೇನಯ್ಯ|ಇತ್ತಿತ್ತ ಬಾ ಎನ್ನಬಾರದೆ ರಂಗ 1ಇಂದಿರೆಯರಸ ನೀನಲ್ಲವೆ - ಬಹುಸೌಂದರ್ಯನಿಧಿ ನೀನಲ್ಲವೆ ? ||ಮಂದಮತಿ ನಾನಾದಡೇನು ಕೃಪಾ-ಸಿಂಧುನೀ ರಕ್ಷಿಸಬಾರದೆ ರಂಗ2ದೋಷಿಯು ನಾನಾದಡೇನಯ್ಯ - ಸರ್ವ -ದೋಷರಹಿತ ನೀನಲ್ಲವೆ ? ||ಗಾಸಿಯೇತಕೆ ನಿನ್ನ ನಂಬಿದೆ ಸಲಹಯ್ಯ |ಶೇಷಶಾಯಿ ಶ್ರೀಪುರಂದರವಿಠಲ3
--------------
ಪುರಂದರದಾಸರು
ಏನು ಕರುಣಾನಿಧಿ ರಂಗ ನನ್ನನ್ಯೂನತೆ ನೋಡುವರೆ ರಂಗನಾನೇನು ಅರಿಯೆನೊ ರಂಗ ನೀದಾನಿ ನೀನೆಗತಿರಂಗಪ.ಭಕ್ತಿಯುಂಟೆಂಬೆಯ ರಂಗ ಮಿಶ್ರಭಕ್ತಿಯೆ ತುಂಬಿದೆ ರಂಗಶಕ್ತಿಯ ನೋಡುವೆ ರಂಗ ವಿಷಯಾಸಕ್ತಿಯೆ ಶಕ್ತಿಯು ರಂಗ 1ಜ್ಞಾನ ಪರೀಕ್ಷಿಪೆ ರಂಗ ಅಜ್ಞಾನದಖಣಿಕಾಣೊ ರಂಗಏನಾರು ವಿರತ್ಯುಂಟೆ ರಂಗ ಜಠರಾನುಕೂಲವಿರತಿರಂಗ2ಪೂಜಿಸು ಇನ್ನೆಂಬೆ ರಂಗ ಹೊಲೆಭಾಜನಮನವಾಯ್ತು ರಂಗನಾ ಜಪವರಿಯೆನೊ ರಂಗ ಕಲ್ಪಭೂಜಪ್ರಸನ್ವೆಂಕಟ ರಂಗ3
--------------
ಪ್ರಸನ್ನವೆಂಕಟದಾಸರು
ಯಾಕೆ ಕಡೆಗಣ್ಣಿಂದ ನೋಡುವೆ-ಕೃಷ್ಣನೀ ಕರುಣಾಕರನಲ್ಲವೆ? ಪಭಕ್ತವತ್ಸಲ ನೀನಲ್ಲವೆ-ಕೃಷ್ಣ ಚಿತ್ತಸುಖದಾತ ನೀನಲ್ಲವೆ?ಅತ್ಯಂತ ಅಪರಾಧಿ ನಾನಾದಡೇನಯ್ಯಇತ್ತಿತ್ತ ಬಾ ಎನ್ನಬಾರದೆ ರಂಗ 1ಇಂದಿರೆಯರಸ ನೀನಲ್ಲವೆ ಬಹು ಸೌಂದರ್ಯನಿಧಿ ನೀನಲ್ಲವೆ?ಮಂದಮತಿ ನಾನಾದಡೇನು ಕೃಪಾಸಿಂಧುನೀ ರಕ್ಷಿಸಬಾರದೆ ರಂಗ2ದೋಷಿಯು ನಾನಾದಡೇನಯ್ಯ-ಸರ್ವ ದೋಷರಹಿತ ನೀನಲ್ಲವೆ?ಗಾಸಿಯೇತಕೆ ನಿನ್ನ ನಂಬಿದೆ ಸಲಹಯ್ಯಶೇಷಶಾಯಿ ಶ್ರೀಪುರಂದರವಿಠಲ3
--------------
ಪುರಂದರದಾಸರು
ರಂಗ ನೀ ಎನ್ನೊಡೆಯನಾಗಿ ಅಮಂಗಳಾತ್ಮರ ಮನೆಗೆ ಹೋಗ್ಯೆನ್ನಿಂಗಿತವನುಸುರಿದರೆ ಕುಂದಿನ್ನಾರಿಗೆಲೆ ತಂದೆ ಪ.ಹಂಚಿನೆದುರಲಿ ಹಲ್ಲು ತೆರೆದರೆಮಿಂಚುಕನ್ನಡಿಯಾಗಬಲ್ಲದೆವಂಚಕರ ಅನುಸರಿಸಿ ಒಡಲಾಸೆಯಲಿ ಬಳಲಿದರೆಕಿಂಚಿದಭಿಮಾನಿಲ್ಲೆ ನಿನಗೆ ಪ್ರಪಂಚ ಸೂತ್ರಿ ಮುರಾರಿ ಎನ್ನಯಸಂಚಿತಾರಬ್ಧಾಗಮವ ನೂಕುವರು ದಾರುಂಟೈ 1ಅರಸು ಮುಟ್ಟಿದ ನಾರಿ ಮಾನ್ಯಳುಪರಸುಹೊಂದಿದ ಲೋಹ ಪ್ರಿಯಪರಮಪುರುಷ ನಿನ್ನವನೆನಿಸಿ ಕ್ಷುದ್ರರ ವಶವ ಮಾಡುವರೆಅರಿದುದಾವುದಘಟಿತಘಟಕನೆಶಿರಿವಿರಿಂಚಿ ಶಿವೇಂದ್ರರೊಡೆಯನೆಪರಮಪಾತಕಿಯಾದರೇನ್ಮ್ಮುದ್ರಾಂಕಿತನು ಕಾಣೈ ರಂಗ2ಮಧ್ವರಗಣನೆ ನಿನ್ನ ಶರಣರುಒದ್ದು ಭವಸಾಗರವ ದಾಟಿದರುದ್ಧಟರು ನಾಕೇಳಿಕಕುಲತೆಯಿಂದ ಮೊರೆ ಹೋಗುವೆಅದ್ದು ವಿಷದೊಳಗೆ ಸುಧೆಯೊಳುಅದ್ದು ನಿನ್ನ ನಂಬಿದವನು ನಾಶುದ್ಧ ಭಟಜನಪಾಲ ಪ್ರಸನ್ವೆಂಕಟಾದ್ರೀಶ 3
--------------
ಪ್ರಸನ್ನವೆಂಕಟದಾಸರು