ಮನೆಗೆ ಬಾರೋ ರಂಗ-ಮನಸಿಜನಯ್ಯನೆ
ಕಣ್ಣಿನೊಳಗೂ ನಿನ್ನನೆನಹು ಬಿಡದುಯನ್ನ ಪ
ಮನೆಗೆ ಬಾರೋ ರಂಗ-ಮನೆಗೆ ಬಾರೋ ಕೃಷ್ಣ
ಮನೆಗೆ ಬಾರೋ ರಾಮ ಅ.ಪ
ಮನೆಗೆ ಬಂದರೆನಿನ್ನ ಮಹಿಮೆಯ ಪಾಡುತ
ಮನದಣಿವಂದದಿ ಕುಣಿದೇನೊ ರಂಗಯ್ಯ 1
ಮನೆಯು ನಿನ್ನದು ಯನ್ನ ತನುವು ನಿನ್ನುದು ಮುನ್ನ
ಧನವು ನಿನ್ನದುಯನ್ನ ಘನವು ನಿನ್ನದು ರನ್ನ 2
ದರಹಸಿತಾನನ-ಸರಸಿಜನಯನ
ವರದವಿಠಲ ಪುಲಿಗಿರಿವರಸದನ 3