ಕಂಡು ಹೇಳಿಕೊಂಡೆನೆನ್ನ ಕಷ್ಟವ | ರಂಗನನು ಪ
ಕಂಡ ಹೇಳಿಕೊಂಡೆನೆನ್ನ ಕಷ್ಟವ ಅ.ಪ.
ಭೃತ್ಯ ಜನರು
ಕುಡಿದ ನೀರು ಕದಲದಂತೆ
ಒಡಲ ಸಲಹಿಕೊಂಡು ಬರುವ
ಕಡಲಶಯನನಾದ ಹರಿಯ 1
ಜಗವ ಪೊರೆವ ದೇವ ಕುಂತಿ
ಮಗನ ರಥಕೆ ಸೂತನಾಗಿ
ಭುಜಗ ಶರವು ಅವನ
ತಗಲದಂತೆ ಮಾಡಿದವನ 2
ಭಕುತ ಜನರು ಮಾಡಿದಂಥ
ಸಕಲ ದುರಿತಗಳನು ಕಳೆದು
ಮುಕುತಿ ಮಾರ್ಗ ತೋರುತಿರುವ
ಶಕುತ ರಂಗೇಶವಿಠಲನ 3