ಒಟ್ಟು 10 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎತ್ತುವೆನಾರತಿಯ ರಂಗಧಾಮನಿಗೆತ್ತುವೆನಾರತಿಯ ಪ. ಗೋಕುಲದೊಳು ಬೆಳೆದು ಆಕಳನೆಲ್ಲ ಕಾಯ್ದು ಪಾಕಶಾಸನನಿಗೆ ಪರಾಕ್ರಮ ತೋರಿದ ನೀರಗೆ 1 ಮಥುರೆಗೆ ನಡೆತಂದು ಮಾವ ಕಂಸನ ಕೊಂದು ಮಾತೆಗೆ ಮುದವಿತ್ತ ಮಧುಸೂದನ ಕೃಷ್ಣಗೆ 2 ಶೇಷಗಿರಿಯಲ್ಲಿ ವಾಸವಾಗಿರುತಿರ್ಪ ಶೇಷಭೂಷಣನುತ ವೃಷ್ಣಿವಂಶೋತ್ತಮಗೆ 3
--------------
ನಂಜನಗೂಡು ತಿರುಮಲಾಂಬಾ
ಎಂಥ ಕೆಲಸಮಾಡಿ ಬಂದನೇ ಗೋಪ್ಯಮ್ಮ ನಿನ ಮಗ|| ಎಂಥ ಕೆಲಸ ಮಾಡಿ ಬಂದ ಕಾಂತ ಮಯೊಳಿಲ್ಲದಾಗ ಚಿಂತೆಲೇಶವಿಲ್ಲದೆ ಬಂದು ಚಿದುಗ ಬುದ್ಧಿತೋರಿ ಆಗ ಪ ಮಲಗಿ ಇರಲು | ಹೊಡಕೊಂಡು ಯಾರು ಹೋದರಂದನೆ ಈ ಮಾತು ಕೇಳಿ ಗಂಡ ಆಕಳ ಹುಡುಕ ಹೋದನೆ ಸುತ್ತಿ ಗಂಡನೆಂದು ಕೂಡೆಂದೆನ್ನ 1 ಬಟ್ಟೆ ಬಿಡಿಸಿ ಭಯವಿಲ್ಲವೆಂದನಮ್ಮ ಮಾನವುಳ್ಳ ಸ್ತ್ರೀಯರ ಸಂಗ ಸ್ನಾನಕ್ಕಾಗಿ ನದಿಗೆ ಹೋಗಿ ಸ್ನಾನಮಾಡೊ ನೀರೊಳು ನಿಂತೆನೆ ಆವೇಳೇ ಬಂದು ಕಾಣದ್ಹಾಗೆ ಶೀರಿ ತೆಗೆದನೆ ನಾನು ಕಾಣದೆ ಉಡಲು ಹೋದೆ ಕಾನನದೊಳು ಕೈಯ್ಯ ಪಿಡಿದು ಏನು ಮಾನ ಕಳದನಮ್ಮಾ 2 ಹೆಂಗಳೆರು ಎಲ್ಲ ಕೂಡಿ ಗಂಗಾಕ್ರೀಡೆನಾಡೋ ವೇಳೆ ಅಂಗವಸ್ತ್ರÀವನೆಲ್ಲ ತೆಗೆದನೆ ತೆಗೆದು ಮರದ ಟೊಂಗೆನೇರಿ ಕಾಡುತಿಹನೆ ಭಂಗ ಅಂಗವ್ರತವೆಲ್ಲ ಕೆಡಿಸಿರಂಗ ' ಹೆನ್ನೆ ವಿಠಲ’ ಶ್ರೀರಂಗಧಾಮನೆನೆಯಿರೆ 3
--------------
ಹೆನ್ನೆರಂಗದಾಸರು
ಗೌತಮ ಗೊಲಿದನೆ ರಂಗನಾಥದಾತನೆ ನಮಿಸುವೆ ರಂಗನಾಥ ಪ ಕಾವೇರಿ ತೀರಗ ರಂಗನಾಥ ಮಾವಾರಿ ಸಲಹೆನ್ನ ರಂಗನಾಥ 1 ಭಕುತಾಭೀಷ್ಟ ಪ್ರದ ರಂಗನಾಥಮುಕುತರೊಡೆಯ ಶ್ರೀರಂಗನಾಥ 2 ವಕ್ಷದಿ ಲಕ್ಷ್ಮಿಯು ರಂಗನಾಥಕುಕ್ಷಿಯೊಳ್ಬ್ರಹ್ಮಾಂಡ ರಂಗನಾಥ 3 ರಂಗಧಾಮನೆ ಶಿರಿ ರಂಗನಾಥಮಂಗಳ ಮಹಿಮಾನೆ ರಂಗನಾಥ 4 ಅಜಭವ ಸುರವಂದ್ಯ ರಂಗನಾಥನಿಜ ಗುರು ಗೋವಿಂದ ರಂಗನಾಥ 5
--------------
ಗುರುಗೋವಿಂದವಿಠಲರು
ತಾರಮ್ಮ ಶ್ರೀ ರಂಗಧಾಮನ ತಂದು ತೋರಮ್ಮ ಎನ್ನಯ ಪ್ರೇಮನ ವಾರಿಜಸಖಶತಕೋಟಿತೇಜನ ಹೊಂತ- ಕಾರಿಯ ನೀ ಕರತಾರೆ ಸೈರಿಸಲಾರೆ ಪ. ವೃಂದಾವನದೊಳಗಾಡುವ ಶ್ರೀ- ಗಂಧವ ಮೈಯೊಳು ತೀಡುವ ಚಂದದಿ ಕೊಳಲೂದಿ ಪಾಡುವ ನಮ್ಮ ಕಂದರ್ಪ ಜಲಕ್ರೀಡೆಯಾಡುವ ನಂದ ನಂದನ ಗೋವಿಂದನ ಕಾಣದೆ ಒಂದು ನಿಮಿಷ ಯುಗವಾಗಿ ತೋರುತಲಿದೆ 1 ಉಡುವ ಸೀರೆಯ ಸೆಳೆದೋಡುವ ದೊಡ್ಡ ಕಡಹದ ಮರವೇರಿ ನೋಡುವ ಕೊಡಲೊಲ್ಲದೆ ಬಹುಕಾಡುವ ಲಜ್ಜೆ- ಗೆಡಿಸಿ ಮಾನಿನಿಯರ ಕೂಡುವ ತಡವ್ಯಾತಕ್ಕೆ ಸಖಿ ತವಕದಿಂದಲಿ ಪೋಗಿ ಎ- ನ್ನೊಡೆಯನ ಕರತಾರೆ ಅಡಿಗೆರಗುವೆ ನಾ 2 ನೀಲವರ್ಣನ ನಿಜರೂಪನ ಶ್ರೀ- ಲೋಲ ಹೆಳವನಕಟ್ಟೆವಾಸನ ಜಾಲಿ ಹಾಳ ವೆಂಕಟೇಶನ ಭಕ್ತ- ಪಾಲಕ ಪರಮವಿಪೋಷನ ಆಲಸ್ಯವ್ಯಾಕೆನ್ನ ಇನಿಯನ ಕರೆತಾರೆ ಬಾಲೆ ನಿನಗೆ ಕಂಠಮಾಲೆಯ ಕೊಡುವೆ. 3
--------------
ಹೆಳವನಕಟ್ಟೆ ಗಿರಿಯಮ್ಮ
ತಿಳಿದು ಕೊಳ್ಳಿರಿ ಜಾಣರೆಲ್ಲಾ ಅಹಂ ಅಳಿದು ನಿಂತಿರುವಂತ ಸತ್ಯಾತ್ಮ ಬಲ್ಲಾ ಪ ಆದ್ಯಂತ ವಿಸ್ತಾರಮೆಲ್ಲಾ ಇದನು ಕೇ ಳೀದರ್ಜುನÀಗೇಳಿದ ಕಳ್ಳಗೊಲ್ಲ ಅ.ಪ ಎಂಟಾರುಗಳ ನೀನು ಕಂಡೂ ಅಲ್ಲಿ ಟಂಟಣಿಸುವದೇನನುಭವದಿ ನೀನುಂಡೂ ತುಂಟರೈವರಕಡೆಗೊಂಡು ಜ್ಞಾನ ಮಂಟಪದೊಳಗೆ ಆಡುವ ಬಾರೊ ಚೆಂಡೂ 1 ನಾರದಾದಿಗಳೆಲ್ಲ ಬಂದೂ ಆಹ ಮೀರಿದ ಶ್ರೀರಂಗಧಾಮನೊಳು ನಿಂದೂ ಸಾರಿದರು ನಿಜನಾಮವೆಂದೂ ಇದನು ಯಾರಾದರು ಭಜಿಸಿ ಗೋಪ್ಯದೊಳಗೆಂದು 2 ಪರದೊಳಗೆ ನೀ ಬೆರೆದಾಡೊ ಸತ್ಯ ಶರಣರಿಗೊಲಿವ ಹರಿಯಹುದಿದು ನೋಡೋ ನರಹರಿ ಭಜನೆಯ ಮಾಡು ನನ್ನ ಗುರುವೆ ತುಲಸಿ ನಿನ್ನೊಳಿಹುದೈನೆ ನೋಡೋ 3
--------------
ಚನ್ನಪಟ್ಟಣದ ಅಹೋಬಲದಾಸರು
ಬ್ರಹ್ಮಾದಿದೇವಗಣ ನಮಿತ ಪಾದಯುಗಳನೆ ನಿನಗೆ ರಂಗಧಾಮನೆ ಪ ಸುಮನಸರೊಡೆಯನೆ ಕಮಲಾಪತಿಯೆ ಅ.ಪ. ಗೋಪಾಲ ಬಾಲಕಿಯರ ಮನಕುಮುದ ಚಂದ್ರನೆ ನಿನಗೆ ರಂಗಧಾಮನೆ ಕಪಟ ರಕ್ಕಸರನು ಮಡುಹಿದನೆ 1 ಕಾವೇರಿ ತೀರದಲ್ಲಿ ನಿಂದ ಪಾವನರೂಪನೆ ಹಾವಿನಹÉಡೆಯೊಳ್ಕುಣಿದವನೆ ಸನ್ಮಂಗಳಂ ನಿನಗೆ ರಂಗಧಾಮನೆ ನಮ ತೋಹನಾಂಗೀಯ ರಾಮನಾಪಹಾರಿಯೆ 2 ಮಾನಿನಿ ದ್ರೌಪದಿಯ ಮಾನವನ್ನು ಕಾಯ್ದನೆ ನಿನಗೆ ರಂಗಧಾಮನೆ ದಿನಕರ ಕೋಟಿತೇಜನೆ ರಂಗೇಶವಿಠಲನೆ 3
--------------
ರಂಗೇಶವಿಠಲದಾಸರು
ಮದನ ಗೋಪಾಲಗೊ ಸುದತಿ ಯಶೋದೆ ನಂದ ಕಂದನಿಗೊ ಪ ಶ್ರೀಶ ಶ್ರೀ ಕೇಶವ ನಾರಾಯಣನಿಗೊ ಮಾಧವ ಗೋವಿಂದ ಹರಿಗೊ ಸಾಸಿರ ನಾಮದ ವಿಷ್ಣು ಮಧುಸೂದನಗೊ ಭೂಸುರ ಪಾಲ ತ್ರಿವಿಕ್ರಮ ವಾಮ£ಗೊ 1 ಮುದ್ದು ಮೂರುತಿ ಶ್ರೀಧರ ಹೃಷಿಕೇಶಗೊ ಪದ್ಮನಾಭ ದಾಮೋದರಗೊ ಶುದ್ಧಮನದಿ ಸಂಕರ್ಷಣ ವಾಸುದೇವಗೊ ಅನಿರುದ್ಧ ಮೂರುತಿಗೊ 2 ಹರುಷದಿ ನಾರಸಿಂಹ ಅಚ್ಚುತಗೊ ಸರಸಿಜನಯನ ಜನಾರ್ದನುಪೇಂದ್ರಗೊ ಸಿರಿ ಹರಿ ಕೃಷ್ಣಗೊ 3 ಶಂಖು ಚಕ್ರ ಗದಾ ಪದ್ಮವು ಧರಿಸಿದ ವೆಂಕಟರಮಣಗೊ ಶ್ರೀಹರಿಗೊ ಪಂಕಜನಯನ ಶ್ರೀರಂಗನಾಥನಿಗೊ ಬಿಂಕದಿ ಪಾಂಡುರಂಗ ವಿಠ್ಠಲಗೊ 4 ಘನಮಹಿಮ ಮನು ಕಂಚಿ ವರದರಾಜನಿಗೊ ಇನಕುಲ ತಿಲಕ ಶ್ರೀರಾಮಚಂದ್ರನಿಗೊ ವನಿತೆಯರೊಡಗೂಡಿ ಮೆರೆವ ಕೃಷ್ಣನಿಗೊ ವನಜಾಕ್ಷ ಪಶ್ಚಿಮ ರಂಗಧಾಮನಿಗೊ 5 ಬಗೆ ಬಗೆ ನಾಮಗಳಿಂದ ಪೂಜೆಯಗೊಂಬ ಅಗಣಿತ ಮಹಿಮಗೊ ಆಶ್ಚರ್ಯಗೊ ಖಗವಾಹನ ಕರಿರಾಜ ವರದಗೊ ನಿತ್ಯ ತೃಪ್ತನಿಗೊ 6 ಶ್ರದ್ಧೆಯಿಂದಲಿ ತನ್ನ ಭಜಿಪ ಭಕ್ತರ ಕಾಯ್ವ ರೌದ್ರಿನಾಮ ಸಂವತ್ಸರದಿ ಮುದ್ದು ಮೂರುತಿ ಕಮಲನಾಭ ವಿಠ್ಠಲನಿಗೆಪದ್ಮಾಕ್ಷಿ ವನಮಾಲೆ ಹಾಕಿದೆಯಾ 7
--------------
ನಿಡಗುರುಕಿ ಜೀವೂಬಾಯಿ