ಅರವಿಂದ ನೇತ್ರಾನಂದ ಗೋವಿಂದಾ
ವರನಂದ ಕಂದಾ ಪೊರೆಯೈ ಮುಕುಂದಾ ಪ
ಶ್ರೀಲಲಾಮ ರಾಮ ಬಾಲಕ ಸುಪ್ರೇಮಾ
ಕಾಲಕಾಲಭೀಮ ಲೋಲ ರಂಗಧಾಮಾ 1
ಮಾನುಷಾವತಾರ ದೀನಪಾಲ ಶೂರ
ಮಾರ ದಾನವ ಸಂಹಾರ 2
ಗಜರಾಜ ವರದ ಅಜಸುರ ವಿನೋದ
ಭಜಕ ಹೃದಯಾಹ್ಲಾದ | ವಿಜಯ ಪದ್ಮಪಾದ 3
ಮಡುವಿನೊಳಿಹೆನಯ್ಯ ಪಿಡಿಯೆನ್ನ ಕೈಯ
ಮೃಡನುತಾ ರಂಗಯ್ಯ ಪೊಡವಿಯರಸ ಜೀಯ 4
ವಾಮದೇವ ನುತ ಭೂಮಿಜಾಸೇವಿತ
ರಾಮದಾಸನುತ ಕೋಮಲಾ ದಯಾಭರಿತ 5