ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ಮೂರು ಜನ್ಮನಾಕಾಶನಂದಾ ವಸುಧಾನಾಗ್ರಜಾ ನಿಜಾನ್ ಪದ್ಮಾವತೀ ಪದ್ಮಭವಾ ವನಕ್ರೀಡಾರತ್ಯಾವತಾತ್ ವಚನ ಸಂದರ್ಶನಾದದ್ದು ತಂದೆಯ ಕಥೆಸ್ಮøತಿಗೆ ತಂದು ಅದು ವಿಸ್ತಾರದಿಂದ ಪೇಳುವೆನು ಸುಧರ್ಮನೆಂದು ಇರವನು ಅವಗೆ ಮುಂದೆ ಇಬ್ಬರು ಸುತರು ಚಂದದಲಿ ಆಕಾಶನೆಂದು ತೊಂಡಮಾನಸೆನಿಸುವನು 1 ವ್ಯಾಕುಲದಿ ಹೀಗೆ ಇಲ್ಲೆಂದು ಶೋಕದಲಿ ಕಣ್ಣೀರು ಹಾಕಿ ಸ್ಮರಿಸಿದ ದೇವಲೋಕ ಗುರುವ ಯಾಕೆ ಸ್ಮರಿಸಿದೆ ಎನ್ನನೀಕಾಲದಲಿ ಏನುಬೇಕು ಬೇಡಲೋನೀನು ನಾ ಶೋಕವನು ನುಡಿದಾ2 ಪಾಪಿಷ್ಠ ಏನು ಇದ್ದೇನು ನಾನು ಮಾಡಿದ ಪೇಳೋ ಹೀನಬುದ್ಧಿ ಕೊಲಿಸಿದೆನೇನು ಏನು ಕಾರಣ ಸಂತಾನ ಕಣ್ಣಿಲಿ ಕಾಣೆ ನಾನು ಅಯ್ಯಯ್ಯೊ 3 ಮಕ್ಕಳಾಡಿದರೆ ಬಹಳಕ್ಕರತೆ ಜೀವಕ್ಕೆ ಮಕ್ಕಳಿಲ್ಲದೆ ಮತ್ತೆ ಮಿಕ್ಕರಸ ಮಕ್ಕಳಿÀಂದಲೆ ಹಬ್ಬ ಹುಣ್ಣಿಮೆಯು ಉಲ್ಲಾಸ ಮಕ್ಕಳಿಂದಲೆ ಮುಂಜಿ ಮದುವೆಯ ಧರೆಯೊಳಗಿಲ್ಲ ಮಕ್ಕಳಿಂದಲೆ ಇಹವು ಮಕ್ಕಳಿಂದಲೆ ಪರವು ಮಕ್ಕಳಿಲ್ಲೆನ್ನ ಭಾಗ್ಯಕ್ಕೆ ಅಯ್ಯಯ್ಯ 4 ನೋಡಿಲ್ಲ ಮಕ್ಕಳಾಡಿದ ಮಾತು ನಕ್ಕು ಕೇಳಿಲ್ಲ ನಾ ಮಕ್ಕಳಿಂದಲೆ ಕೂಡಿ ಅಕ್ಕರದಿ ಉಣಲಿಲ್ಲ ಮಕ್ಕಳನು ಎತ್ತಿ ಮುದ್ದಿಕ್ಕಿದವನಲ್ಲ ಮಕ್ಕಳಿಲ್ಲದ ಮನುಜ ಲೆಕ್ಕದಾವದರೊಳಗೆ ಬೆಕ್ಕು ಮೊದಲಾದಂಥ ಮಿಕ್ಕ ಪ್ರಾಣಿಗಳೆಲ್ಲ ಮಕ್ಕಳಾಡಿದ ಬಹಳ ಚಕ್ಕಂದವನು ನೋಡಿ ಸೌಖ್ಯ ಪಡುತಿಹದಯ್ಯ ಧಿಕ್ಕರಿಸು ಎನ ಜನ್ಮ ಅದಕ್ಕಿಂತ ವ್ಯರ್ಥ 5 ಮುನ್ನ ನಮ್ಮೊಳಗಾರು ಉಣ್ಣದಲೆ ಈ ಬದುಕು ಮಣ್ಣು ಪಾಲಾಗುವದು ಘನ್ನ ಈ ಚಿಂತಿಯಲಿ ಬಣ್ಣಗೆಟ್ಟೆನು ಕುದ್ದು ಸುಣ್ಣಾದೆನಯ್ಯ ಉಭಯಕುಲ ತಾರಿಸುವಂಥ ನಾನು ಅಣ್ಣತಮ್ಮರ ಒಳಗೆ ಪುಣ್ಯ ಇಲ್ಲೊಬ್ಬನಲಿ ಪುಣ್ಯಗುರುವೆ 6 ರಾಗ:ಶಂಕರಾಭರಣ ಆದಿತಾಳ ಇಂಥ ಮಾತಿಗೆ ಜೀಯ ಹೀಗಂತ ನುಡಿದನು ಚಿಂತೆ ಮಾಡಬೇಡ ಭೂಕಾಂತ ಎಂದನು 1 ಪುತ್ರ ಕಾಮೇಷ್ಟಿಮಾಡು ಭಕ್ತಿಯಿಂದಲಿ ಪುತ್ರನಾಗುವನು ನಿಮಗೆ ಸತ್ಯ ನೀ ತಿಳಿ 2 ಗುರುವಿನ ಮಾತುಕೇಳಿ ಪರಮ ಹರುಷದಿಂದಲಿ ಅರಸ ಬ್ರಾಹ್ಮಣರನೆಲ್ಲ ಕರೆಸಿದಾಗಲೇ 3 ಮುಂದೆ ಯಜ್ಞ ಮಾಡಬೇಕು ಎಂದÀು ತ್ವರದಲಿ ಒಂದು ಭೂಮಿ ಶೋಧಿಸಿದನು ಚಂದದಲಿ 4 ಚಲುವ ನೇಗಿಲ ಜಗ್ಗಿ ಎಳೆವ ಕಾಲಕೆ ಹೊಳೆವ ಪದ್ಮ ಬಂತು ಅಲ್ಲಿ ಸುಳಿದು ಮೇಲಕೆ 5 ಇರುವಳೊಬ್ಬಳಲ್ಲಿ ಮತ್ತೆ ಪರಮಸುಂದರಿ ಅರಸನೋಡಿ ಬೆರಗಿನಿಂತ ಸ್ಮರಿಸಿ ಪರಿಪರಿ 6 ಕಾಣಿಸಿದಲೆ ಗಗನದಲಿ ವಾಣಿಯಾಯಿತು ಕಾಣದಿದ್ದರೂ ಈಗ ಸಕಲಪ್ರಾಣಿ ಕೇಳಿತೊ 7 ಇನ್ನು ಚಿಂತೆ ಮಾಡಬೇಡ ಧನ್ಯ ಅರಸ ನೀ ನಿನ್ನ ಮಗಳು ಎಂದು ಚೆನ್ನಾಗಿ ತಿಳಿಯೋ ನೀ8 ಕ್ಲೇಶ ಹಿಂದೆ ಬಿಡುವಿಯೊ ಮುಂದೆ ಮುಂದಕಿನ್ನು ಆನಂದ ಬಡವಿಯೊ9 ಗಗನ ವಾಣಿಯನ್ನು ಕೇಳಿ ಅರಸ ಬಗೆಯಲಿ ಮಗಳ ನೆತ್ತಿಕೊಂಡನಾಗ ಮುಗಳು ನಗೆಯಲಿ 10 ತಂದೆ ಮಗಳ ಜನ್ಮ ಪದ್ಮದಿಂದ ತಿಳಿದನು ಮುಂದೆ ಪದ್ಮಾವತಿಯೆಂದು ಕರೆದನು11 ಮಗಳಕಾಲಗುಣದಿ ಮುಂದೆ ಮಗನು ಆದನು ಅವನ ಕರೆದ ವಸುಧಾನನೆಂದು ಗಗನರಾಜನು 12 ತಕ್ಕವಾಗಿ ಅರಸಗ್ಹೀಗೆ ಮಕ್ಕಳಾದರು ಸೌಖ್ಯದಿಂದ ಮುಂದೆ ದಿನದಿನಕ್ಕೆ ಬೆಳೆದರು13 ಬಂತು ಯೌವನವು ಭೂಕಾಂತ ಪುತ್ರಿಗೆ ಬಂತು ಆಗ ಮತ್ತೆ ಬಹಳ ಚಿಂತೆ ಅರಸಗೆ 14 ಇಂಥ ಮಗಳಿಗಿನ್ನು ತಕ್ಕಂಥ ಪುರುಷನು ಪ್ರಾಂತದೊಳಗೆ ಇಲ್ಲದಿವ್ಯ ಕಾಂತಿ ಮಂತನು 15 ಎಂತು ನೋಡಲಿನ್ನು ಹುಡುಕಿ ಶ್ರಾಂತನಾದೆನು ಚಿಂತೆಯೊಳಗೆ ಬಿದ್ದು ಮುಂದೆ ಪ್ರಾಂತಗಾಣೇನು 16 ಅಂತರಂಗದೊಳಗೆ ಹೀಗಂತ ಅನುದಿನ ಚಿಂತಿಸಿದನು ಮರೆತು ಅನಂತಾದ್ರೀಶನ17 ವಚನ ಚಂದಾದ ಕುಸುಮಗಳ ಕೂಡಿ ಮುಂದೆ ಇಂದು ಮುಖಿಯು ನೋಡುತಲೆ ಮುಂದೆ ತೆಗೆದು ತ್ವರದಿಂದ ಆಭರಣಗಳ ಮುಂದೆ ತರಿಸಿದಳು1 ಕೆತ್ತಿಸಿದ ರಾಗುಟಿಯ ಒತ್ತಿ ಮೊದಲ್ಹಾಕಿ ಹತ್ತೊತ್ತಿದಳು ಸಾಲ್ಹಿಡಿದು ಇತ್ತಿತ್ತು ಮತ್ತೆ ತುದಿಗೆ ಅತ್ತಿತ್ತ ಮತ್ತ ಮೇಲರಿಸಿನವ ಚಿತ್ತಗೊಟ್ಟಚ್ಚಿದಳು ಚಿತ್ತಾರ ಬರೆದಂತೆ ಮತ್ತ ಗಜಗಮನೆ 2 ಥಳಥಳನೆ ಜಾತಿಯಿಂದ್ಹೊಳೆವ ಮುತ್ತಿನ ಭವ್ಯ ಎಳೆಯ ಇಮ್ಮಡಿ ಮಾಡಿ ನಳಿನಾಕ್ಷಿ ಬೈತಲಗೆ ಅಳತೆಯಿಂದ್ಹಾಕಿದಳು ತಳಪಿನಲಿ ಎಡಬಲಕೆ ಎಳೆದು ಕಟ್ಟಿದಳ್ಹಿಂದೆ ಹೆರಳಿಗ್ಹಾಕಿ ತೊಳೆದ ಮುತ್ತಿನ ಬುಗಡಿ ಪೊಳೆವ ಮೀನ್ಬಾವಲಿಯು ಝಳಿ ಝಳಿತವಾಗಿರುವ ಗಿಳಿಗಂಟಿ ಚಳತುಂಬುಗಳ ನಿಟ್ಟು ಕರ್ಣದಲಿ ಉಳಿದ ದ್ರಾಕ್ಷಾಲತೆಯ ಎಳೆದು ಬಿಗಿದಳು ಮೇಲೆ ಸುಳಿಗುರಳಿನಲ್ಲಿ 3 ಇದ್ದ ಮುತ್ತುಗಳ್ಹಚ್ಚಿ ತಿದ್ದಿ ಮಾಡಿದ ನತ್ತು ಉದ್ರೇಕದಿಂದಿಡಲು ಮುದ್ದು ಸುರಿವುತ ಮುಂಚೆ ಇದ್ದ ಮುಖ ಮತ್ತೆ ಎದ್ದು ಕಾಣಿಸಿತು ಪ್ರದ್ಯುಮ್ನ ಚಾಪದಂತೆರಡÀು ಹುಬ್ಬುಗಳ ಮಧ್ಯೆ ನೊಸಲಿನ ಮೇಲೆ ಶುದ್ಧ ಕಸ್ತೂರಿಯನ್ನು ತಿದ್ದಿ ತಿಲಕವನಿಟ್ಟು ತಿದ್ದಿದಳು ಕಾಡಿಗೆಯ ಪದ್ಮಲೋಚನಗಳಿಗೆ ಪದ್ಮಜಾತೆ 4 ಚಂದ್ರಗಾವಿಯನ್ನುಟ್ಟು ಚಂದಾದ ಕುಪ್ಪಸವ ಮುಂದೆ ಬಿಗಿ ಬಿಗಿತೊಟ್ಟು ಮುಂದಲೆಗೆ ಶೋಭಿಸುವ ಚಂದ್ರಸೂರ್ಯರನಿಟ್ಟು ಚೆಂದಾಗಿ ಬೈತಲೆಗೆ ಚಂದಿರವ ಸುರಿದಳು ಚಂದ್ರಮುಖಿಯು ಪರಿ ಗೀರು ಗಂಧವನು ಕೈಗ್ಹಚ್ಚಿ ಮುಂದೆ ಕೊರಳಿಗೆ ಒರಿಸಿ ಚಂದ್ರಸರ ಮುಂದೆ ಹಾಕಿದಳು 5 ಮೇಲಿಟ್ಟು ಚಿಂತಾಕವನು ಕಟ್ಟಿ ತಾಯತ ಬಟ್ಟಕುಚಗಳ ಏಕಾವಳಿಯ ಇಟ್ಟು ಪುತ್ಥಳಿ ಸರವು ಅಷ್ಟು ಸರಗಳನೆಲ್ಲ ಮೆಟ್ಟಿ ಮೇಲ್ಮೆರೆವಂಥ ಶ್ರೇಷ್ಠ ಸರಿಗಿಯತರಿಸಿ ಇಟ್ಟಳಾಕೆ6 ಟೊಂಕದಲಿ ಒಡ್ಯಾಣ ಮುಂದಲಂಕರಿಸಿದಳು ಪೊಂಕದಿಂದಿಟ್ಟು ಅಕಳಂಕ ಕೊಂಕವನು ಮಾಡುತಲೆÉ ಕಿಂಕಿಣಿಪೈಜಣ ಇಟ್ಟಳಾಕೆ7 ಪಿಲ್ಲೆ ಮೇಲಾದ ಮುಸುಕಿಕ್ಕಿ ಬಹು ಬಾಲೆಯರು ಕೊಟ್ಟ ಕೂಡಿ ಭಾಳ ಹರುಷದಿ ಹೊರಟಳಾಕಾಲದಲ್ಲಿ. 8 ವಚನ ಪರಿ ಗಜಗಮನದಿಂದಾ ವನ ಮದನ ಸತಿಯಂತಿಪ್ಪ ತರುಣಿರೂಪವ ತಾಳಿ ವನಮಧ್ಯದಲ್ಲಿ ತಾಂ ಬೆಸಗೊಂಡಳು ಯಾರಲೆ ಬಾಲೆ ನೀ ಬಾಲಚಂದ್ರ ಲಲಾಟೆ ಕಾಳಾಹಿ ವೇಣೀ ನೀ ಜಾತೆಯರ ಕೂಡಿ ಬಳಗವು ಕಾಂತನ್ಯಾರು ಪೇಳೆಂದು 1 ಧ್ವನಿ ಕೇಳೆ ಕುಸುಮಕ್ಕೆ ನಾ ಬಂದೆ ತಿಳಿಯೆ ಮಾತಿನರಗಿಳಿಯೆ 1 ಅಸಮ ತೋಂಡಮಾನನೆಂಬುವನು ನಮ್ಮ ಕಕ್ಕನು 2 ನಾ ಖೂನವನು ಪೇಳಿದೆ ಸಾರಿ ಪೇಳಿದೆ &ಟಿ
--------------
ಅನಂತಾದ್ರೀಶ - ಕಥನಕಾವ್ಯಗಳು
ಕರುಣದಿಂದ ಕಾಯೊ ಎನ್ನನು ಉರಗಾದ್ರಿವಾಸ ವಿಠ್ಠಲ ದೇವ ಪ ತಂದೆ ವೆಂಕಟೇಶ ವಿಠ್ಠಲ ಬಂದು ಎನ್ನ ಹೃದಯದಲ್ಲಿ ನಿಂದು ನಾಮ ನುಡಿಸಿ ಪೇಳ್ವ ಚಂದ ಮನಕೆ ತಂದು ಕೊಡುತ 1 ವಾಸುದೇವ ನಿನ್ನ ಮಹಿಮೆ ತೋಷದಿಂದ ಭಜಿಸುವುದಕೆ ದೋಷಗುಣಗಳನ್ನೆ ಕಳೆದು- ಲ್ಲಾಸ ಮನಕೆ ಒದಗುವಂತೆ 2 ಮಂದಮತಿಗಳಾದ ಜನಕೆ ಮುಂದೆ ಗತಿಯ ಪಥವ ತೋರಿ ಬಂಧನಂಗಳನ್ನೆ ತರಿದು ತಂದೆ ಕಾಯೊ ಇಂದಿರೇಶ 3 ಬೊಕ್ಕಸದ ದ್ರವ್ಯ ಜನರು ವೆಚ್ಚಮಾಡುತಿರುಹ ತೆರದಿ ಮೆಚ್ಚಿ ಬಂದ ಜನರ ಮನದ ಇಚ್ಛೆ ಪೂರ್ತಿಗೊಳಿಸಿ ಪೊರೆದೆ 4 ಅಂತರಂಗದೊಳಗೆ ನಿನ್ನ ಚಿಂತೆ ಮರೆಯದಂತೆ ಕೊಟ್ಟು ಅಂತರಾತ್ಮ ಕಮಲನಾಭ ಸಂತೈಸಿ ಕಾಯೊ5 ಟ ಟ ಅಸ್ವತಂತ್ರ ಜೀವಾಂತರ್ಗತ ಶ್ರಿ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಉರಗಾದ್ರಿವಾಸ ವಿಠ್ಠಲಾಭಿನ್ನ ಶ್ರಿ ಗುರುವಾಸುದೇವ ವಿಠ್ಠಲಾ ಭಿನ್ನ ಶ್ರೀ ತಂದೆ ವೆಂಕಟೇಶ ವಿಠ್ಠಲಾತ್ಮಕ ಶ್ರೀ ಕಮಲನಾಭ ವಿಠ್ಠಲಾಯ:ನಮ: ಟ ಶ್ರೀ ಕಮಲನಾಭ ವಿಠ್ಠಲ ದಾಸರಾದ ಜೀವೂಬಾಯಿ ಅವರು ರಚಿಸಿದ ಮೊತ್ತ ಮೊದಲ ಹಾಡು.
--------------
ನಿಡಗುರುಕಿ ಜೀವೂಬಾಯಿ
ಧ್ಯಾನವನು ಮಾಡು ಬಿಂಬ ಮೂರುತಿಯಪ ಆನಂದದಲಿ ಕುಳಿತು ಅಂತರಂಗದಲಿ ಅ.ಪ ಸದಾಚಾರನಾಗಿ ದ್ವಾದಶಗುರುಗಳಿಗೆರಗಿ ಮುದದಿಂದ ಮೂಲಮಂತ್ರವನು ಜಪಿಸಿ ಸದಮಲ ಭಕುತಿಯಲಿ ದೇಹಸ್ಥಿತಿಯನೆ ತಿಳಿದು ಪದಮಾಸನವ ಹಾಕಿ ಪರಮ ವಿಶ್ವಾಸದಲಿ1 ಅಂಗವನು ಚಲಿಸದೆ ಚೆನ್ನಾಗಿ ದೃಢವಾಗಿ ಕಂಗಳನೆ ಮುಚ್ಚಿ ಇಂದ್ರಿಯಗಳನೆ ತೆರೆದು ಮಂಗಳ ಶೋಭಿತ ಅಖಂಡ ಧ್ಯಾನದಂತ ರಂಗದೊಳಗೆ ನಿಲಿಸಿ ಎಲ್ಲವನು ಕಾಣೊ 2 ಭಗವದ್ರೂಪಗಳೆಲ್ಲ ಒಂದು ಬಾರಿ ಸ್ಮರಿಸಿ ಮಗುಳೆ ಪರಮ ಗುರುವಿನ ಮೂರ್ತಿಗೆ ತೆಗೆದು ಆಹ್ವಾನಮಾಡಿ ಅಲ್ಲಿಂದ ಹರುಷದಿ ಸ್ವಗುರು ಬಿಂಬಮೂರ್ತಿಯಲಿ ಐಕ್ಯವನೆ ಮಾಡು3 ತಿರುಗಿ ಮೆಟ್ಟಿಕೆ ಮೂರು ವೇಗದಿಂದಲಿ ನಿನ್ನ ಲ್ಲಿರುವ ಮೂರ್ತಿಯಲ್ಲಿ ಚಿಂತನೆಯ ಮಾಡೊ ಭರದಿಂದ ಎಲ್ಲವನು ತಂದು ಹೃದಯದಲ್ಲಿ ಸ್ಥಿರವಾಗಿ ಇಪ್ಪ ಮೂರುತಿಯೊಡನೆ ಕಲೆಸು 4 ಆತನೆ ಬಿಂಬ ಮೂರುತಿಯೆಂದು ತಿಳಿದುಕೊ ಆ ತರುವಾಯ ನಾಡಿಗಳ ಗ್ರಹಿಸಿ ಆ ತೈಜಸನ ತಂದು ವಿಶ್ವಮೂರ್ತಿಯಲ್ಲಿ ಪ್ರೀತಿಯುಳ್ಳವನಾಗಿ ಪತಿಕರಿಸು ಮರುಳೆ 5 ಜ್ಞಾನ ಪ್ರಕಾಶದಲಿ ಇದ್ದು ನಿನ್ನ ಹೃದಯ ಕಮಲ ಮಧ್ಯ ಮೂರ್ತಿ ನಿಲ್ಲಿಸಿ ಬಾಹ್ಯದಲಿ ಏನೇನು ಪೂಜೆಯನು ಉಳ್ಳದನು ಮಾಡೊ6 ಗುಣ ನಾಲ್ಕರಿಂದಲಿ ಉಪಾಸನವನೆ ಮಾಡು ಕ್ಷಣ ಕ್ಷಣಕೆ ಹರಿಪಾದವನು ನೋಡುತ ಅಣುರೇಣು ಚೇತನಾಚೇತನಕೆ ನೇಮಕ ಫಣಿಶಯನನಲ್ಲದೆ ಮತ್ತೊಬ್ಬರಿಲ್ಲವೆಂದು 7 ಮಮತೆಯನು ತೊರೆದು ಮೇಲೊಂದಪೇಕ್ಷಿಸದೆ ಸಮ ವಿಷಮ ತಿಳಿದೊಂದೆ ಭಕುತಿಯಲ್ಲಿ ಸ-ಮಾಧಿಗೊಳಗಾಗಿ ದಿವ್ಯ ದೃಷ್ಟಿಲಿ ಸರ್ವ ಕ್ರಮ ಅನುಕ್ರಮದಿಂದ ಭರಿತಭಾವುಕನಾಗೊ 8 ಪರಿ ಧೇನಿಸಲು ದೇವ ಕರುಣನ ಮಾಡೆ ಪಾಪ ಸಂಚಿತವು ಪ್ರಾರಬ್ಧ ನಾಶ ಅಪರೋಕ್ಷಿತನಾಗಿ ತನ್ನ ಯೋಗ್ಯತದಷ್ಟು ಗೋಪಾಲ ವಿಜಯವಿಠ್ಠಲನೊಲಿವನಾಗ9
--------------
ವಿಜಯದಾಸ
ನಾ ಕಂಡ ಕನಸು ಕನಸಲ್ಲ ಅದು ಹೇಳಲು ಬಾರದು ಕೇಳಲು ಬಾರದು ಪ ಕಂಗಳ ಮುಟ್ಟಿ ನಾನಿರುತಿಹೆ ಅಂತರಂಗದೊಳಗೆ ದೃಷ್ಟಿಯನಿಡೆಮಂಗಳವಿತ್ತು ಮಹತ್ತುಯಿತ್ತು ಜಂಗಮವಿತ್ತು ಜಗತ್ತು ಇತ್ತು1 ಧ್ಯಾನವು ಗುರುಪಾದದಲ್ಲಿರೆ ಒಳ್ಳೆ ಗಾನವು ಕಿವಿಗೆ ಕೇಳಿಸುತಲಿರೆಆನಂದವಿತ್ತು ಸುಖತರವಿತ್ತು ತನ್ಮಯವಿತ್ತು ಥಳಿಥಳಿಸಿತ್ತು 2 ಆನಂದ ಮನೆಯೊಳಗಾನಿರೆ ಚಿದಾನಂದ ದೇವರ ಕೂಡಿರೆತಾನೆ ತಾನಿತ್ತು ತವೆ ಬೆರೆತಿತ್ತು ಏನೇನೋ ಇತ್ತು ಎಂತೆಂತೋ ಇತ್ತು 3
--------------
ಚಿದಾನಂದ ಅವಧೂತರು
ಭಾರ ನಿನ್ನದೊ ಪ ಭಾರ ನಿನ್ನದಯ್ಯ ಹರಿಯೆ ಘೋರ ಈ ಸಂ ಸಾರದೊಳಗೆ ಪಾರುಮಾಡಿ ಪೊರೆವುದೆನ್ನ ಅ.ಪ ಕರುಣಾ ನಿಲಯನೆಂದು ನಿನ್ನ ಮೊರೆಯ ಹೊಕ್ಕು ಬೇಡಿಕೊಂಬೆ ನರನ ಭವದಗುಣಗÀಳಳಿದು ಹರಿಯೆ ನಿಮ್ಮ ಚರಣಸ್ಮರಣೆ ಕರುಣದಿಂದ ನೀಡಿ ಪೊರೆಯೊ ಶರಣಜನರ ಅಸಹಾಯಕರ 1 ಶ್ರೀಶ ಶ್ರೀನಿವಾಸ ನೀನೆ ದಾಸನ ಮನದಾಸೆಯ ಪೂರೈಸುವ ದಾತನೆಂದು ನಿನ್ನ ದಾಸತ್ವ ಬೇಡ್ವೆ ದೋಷದೂರ ಘಾಸಿಮಾಡದೆ ಹೇಸಿ ಭವದಿ ಪೋಷಿಸಯ್ಯ ಬೇಗ ಈಶ 2 ಚಿಂತೆ ಭ್ರಾಂತಿ ದೂರಮಾಡಿ ಸಂತಸ ಸುಖವನ್ನು ನೀಡಿ ಕಂತುಜನಕ ನಿಮ್ಮ ಭಕ್ತಿ ಅಂತ್ಯದಲ್ಲಿ ನಿಲ್ಲಿಸಿ ಎ ನ್ನಂತರಂಗದೊಳಗೆ ತೋರೊ ಸಂತರೊಡೆಯ ಸೀತಾರಾಮ 3
--------------
ರಾಮದಾಸರು
ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರು ಭೂ -ರಂಗದೊಳಗೆಲ್ಲ ಪಾಂಡುರಂಗ ಪರದೈವವೆಂದು ಪ.ಹರಿಯು ಮುಡಿದ ಹೂವ ಹರಿವಾಣದೊಳಗಿಟ್ಟುಕೊಂಡುಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಳಿಕ್ಕುತ 1ಒಡಲ ಜಾಗಟೆಯ ಮಾಡಿ ಮಿಡಿವಗುಣಿ ನಾಲಗೆಯ ಮಾಡಿಒಡನೆ ಢಣ ಢಣ ಢಣ ಢಣ ಎಂದುಕುಣಿದು ಚಪ್ಪಳಿಕ್ಕುತ 2ಇಂತು ಸಕಲ ಜಗಕೆ ಲಕ್ಷ್ಮೀಕಾಂತನೆ ಪರದೈವವೆಂದುಕಂತುಪಿತ ಪುರಂದರವಿಠಲ ಪರದೈವವೆಂದು 3
--------------
ಪುರಂದರದಾಸರು