ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಾರುತಿ ತಂದು ಬೆಳಗಿರೆ | ಅಂಗನೇಯರು ರಂಗಗೇ ||ಅ|| ತುಂಗ ಮಹಿಮ ಶುಭಾಂಗ ಕರುಣಾ | ಪಾಂಗ ಶ್ರೀನರಸಿಂಗಗೇ ಅ.ಪ. ಪ್ರಳಯ ಜಲಧಿಯೊಳಾಲದೆಲೆಯಲಿ | ಮಲಗಿ ಬೆರಳು ಸವಿದಗೇಶ್ರೀಲತಾಂಗಿಯು ಸ್ತೋತ್ರ ಗೈಯ್ಯಲು |ಒಲಿದು ಜೀವರ ಸೃಜಿಸಿದವಗೆ 1 ಮೂಲಕಾರಣ ಮಾಡಿ ಪ್ರಕೃತಿಯ | ನಾಲಕ್ಕಿಪ್ಪತ್ತು ತತ್ವದಾಲೀಲೆಯಿಂದಲಿ ಸೃಜಿಸಿ ಬೊಮ್ಮನ ಚೆಲುವ ತನುವನೆ ಮಾಡ್ದಗೇ2 ಮತ್ತೆ ವಾರಧಿ ಶಯ್ಯನಾಗುತ | ತತ್ವಮಾನಿ ಬೊಮ್ಮನಪೆತ್ತು ತನ್ನಯ ಪೊಕ್ಕಳಿಂದಲಿ | ಕೀರ್ತಿಯನು ಪಡೆದಾತಗೇ 3 ನೀರೊಳಾಡಿ ನಗವ ನೆಗಹಿ | ಕೋರೆದಾಡೆಯ ತೋರ್ದಗೇನರಸಿಂಹಗೆ ದಾನ ಬೇಡ್ದಗೆ | ಧೀರ ಪರಶುರಾಮ ರಾಮಗೇ 4 ಗಿರಿಯ ನೆಗಹಿ ನಗಗಳ್ವೈರಿಯ | ಮರುಳು ಮಾಡಿದ ಚೆಲುವಗೇಬರಿಯ ಮೈಯ್ಯಗೆ ತುರಗನೇರಿದ | ಗುರು ಗೋವಿಂದ ವಿಠಲಗೇ 5
--------------
ಗುರುಗೋವಿಂದವಿಠಲರು
ಮಂಗಳೆಂದು ಬೆಳಗಿರಾರುತಿ ರಂಗಗೇ ನೀಲಾಂಗಗೆ ಪ ತುಂಗವಿಕ್ರಮನಿಮಗಿ ಭೂವರದಗೆ ನರಮೃಗನಿಗೆ ಅ.ಪ ಬಾಲ ಭಾರ್ಗವ ರಾಮ ಮಾತುಳಕಾಲ ವೀತಚೈಲಗೆ | ಶೀಲ ಮೂರುತಿಯಾದ ಕಲ್ಕಿರೂಪಗೆ | ರಮೆಯರಸಗೆ 1 ಧುರದಿ ರವಿಸುತ | ಉರುಗಗಳವನು ಭರದಿ ಬಿಡೆ ಕಡು ಕರುಣದಿ ನರನರಧ ಧರೆಗೊತ್ತಿ ಸಲಹಿದ ಶೌರಿಗೆ ಮುರವೈರಿಗೆ 2 ವಟದ ವೃಕ್ಷದಿ ವಟುರೂಪಿಯಲಿ ಪವಳಿಸಿದ ಪರಮಾತ್ಮಗೆ | ತಟತಸನ್ನಿಭ ಶಾಮಸುಂದರವಿಠಲಗೆ ವಿಪಗಮನಗೆ 3
--------------
ಶಾಮಸುಂದರ ವಿಠಲ