ಸಾರತರದ ಮುರಳಿದನಿಯ ಕೇಳಿದೆ ಏನೆ ಪ
ನಾರಿಮಣಿಯರುಲಿವದನಿಯ ಕೇಳಿದೆ ಏನೆ ಅ.ಪ
ನಲಿದು ಕುಣಿವ ಲಲನೆಯರನು ನೋಡಿದೆ ಏನೆ
ಝಣ ಝಣ ಝಣ ಕಿಣಿ ಕಿಣಿ [ಭರ್ತಾ] ರವವು ಕೇಳ್ವುದೇನೆ1
ಬಡನಡುವಿನ ಮಡದಿಯವನ ಅಡಿಯ ಪಿಡಿವೆ ಏನೆ
ಕಡುಬೆಡಗಿನ ಹುಡುಗಿಯವನ ಅಡಿಯ ಪಿಡಿವೆ ಏನೆ
ಸಡಗರದಲಿ ನಡೆದು ಮನವ ರಂಗಗೀವೆ ಏನೆ 2
ಮನದ ಕಲುಷವಳಿದು ಮುದವ ತಳೆದಿಹೆಯೇನೆ
ಇನಿದುವಚನ ಕನಸು ನೆನಸ ತಳೆದಿಹೆಯೇನೆ
ತನುಮನಧನ ಮಾಂಗಿರೀಶಗೊಪ್ಪಿಪೆಯೇನೇ 3