ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತುಳಸಿ ನಿನ್ನ ಭಜಿಸುವೆ | ಬಳಸಿ ಬಳಸಿ ನಮಿಸುವೆ ಪ ಕೊಳಲಬಾಲನರಸಿಯೇ | ನಳಿನವಿಸರಗಂಧಿಯೇ ಅ.ಪ ಗಾನಕೊಲಿದು ನಲಿವಳೇ | ಜ್ಞಾನವಿತ್ತು ಕಾವಳೆ ನಿನ್ನಕರುಣೆ ಕೃಷ್ಣನೊಲವು | ನಿನ್ನಸ್ಮರಣೆ ಪಾಪಹರವು 1 ಮಂಗಳಾಂಗಿ ತುಳಸಿದೇವಿ ರಂಗಗಿರಿಯ ನೀವದೇವಿ ಮಾಂಗಿರೀಶ ದಯಿತೆ ಮಹಿತೆ ಇಂಗಿತಾರ್ಥವೀವ ಮಾತೆ 2 ಬೃಂದಾವನ ದಿವ್ಯಸದನೆ ಇಂದೀವರ ಭವ್ಯವದನೆ ಕುಂದಾವಳಿ ಸದೃಶರದನೆ ನಂದಾತ್ಮಜ ಮನಮೋಹನೆ 3 ಸರಸವಿರಸಭರಿತೆ ನಮಿತೆ ಪರಮಚತುರೆ ಸುರಸನ್ನುತೆ ಮುರಳಿಗಾನಲಸಿತೆ ಮಾತೆ ವಂದೆ ಮಾಂಗಿರೀಶಸಹಿತೆ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾವಿನಕೆರೆ 8 ರಂಗಗಿರಿಯನೇರಿಬರುವಾ ತಂಗಿ ಬರುವೆಯಾ ಪ ಅಂಗನೆಯರು ಕುಣಿದು ಮಣಿವ ಸಂಗದೊಳಿರುವಾ ಅ.ಪ ಅವನ ಪಾದದ ನಡಗೆ ಚಂದ | ಧವಳಹಂಸ ಮನಕಾನಂದಾ ಅವನ ನಲಿವು ನವಿಲಿಗಂದ | ಅವನ ಉಲಿವು ಕೋಗಿಲೆಯಂದಾ 1 ಅವನ ಕರದ ವೇಣುಗಾನ ಭುವನಕೆಲ್ಲ ಅಮೃತಪಾನ ಅವನ ನಗೆಯ ತೋರ್ಪ ಭವವ ಕಳೆವ ಪುಣ್ಯಸದನ 2 ವಾರಿವಾಹ ವರ್ಣದವನು ಹಾರಪದಕ ಧರಿಸಿದವನು ಚಾರುಸುಂದರ ಪೀತಾಂಬರನು 3 ಹಿಂದೆ ನೀನು ನೋಡಲಿಲ್ಲ ಮುಂದೆ ನಾನು ಕರೆವುದಿಲ್ಲ ಇಂದು ಬಂದೆಬರುವನಲ್ಲ ಸಂದೇಹ ಎಳ್ಳಷ್ಟೂ ಇಲ್ಲ 4 ಬೊಮ್ಮನಪ್ಪನವನೆ ನೀರೆ ನಮ್ಮ ಮಾಂಗಿರಿಗೊಪ್ಪುವ ತಾರೆ ಹೊಮ್ಮಿದಾ ಸಂಪ್ರೀತಿಯ ಬೀರೆ ಸುಮ್ಮನೆ ನನ್ನೊಡನೆ ಬಾರೆ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್