ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ದೇಹ ನಿನ್ನ ಒಳಗೊಂಡಿತೊ ಇಷ್ಟಾದ ಮೇಲೆ ಪ. ದೇಹ್ಯ ಬಾಹ್ಯ ವ್ಯಾಪಾರವ ನೀ ಪರಿಹರಿಸಿದೇ ದೇವ ಅ.ಪ. ದೇಹದೊಳಗಿದ್ದವರು ಬಾಹ್ಯ ವ್ಯಾಪಾರಕ್ಕೆಳೆಯೆ ಈ ದೇಹ ಬಾಂಧವರು ಎಲ್ಲ ಎನ್ನ ದೇಹ ಕೀಳು ಮಾಡಿ ನೋಡೆ ದಾಹ ಹತ್ತಿತೋ ನಿನ್ನಲ್ಲಿ ದೇಹ ಸಾರ್ಥಕವಾಗಲು 1 ರಂಗ ನಿನ್ನ ಸ್ತುತಿಮಾಡೆ ಹಂಗಿಸುವರೆಂದು ಇದ್ದೆ ಹಂಗಿಸಿ ಭಂಗಿಸಿ ರಂಗಕ್ಕೆಳಸಿ ಎನ್ನ ನಿನ್ನ ಅಂತರಂಗಕ್ಕೆ ಎಳೆತಂದೆ ಹರಿ ರಂಗಾ ನಿನ್ನ ಸಿರಿಯಾರೋ ಮಂಗಳ ಮಹಿಮ 2 ಕಂತು ಜನಕನೆ ನಾ ನೆಂದು ಸ್ತುತಿಸಲು ನಿನ್ನ ಅಂತರದಂತಿರಲಿ ಪಂಥ ಬೇಡ ಎನ್ನ ಮೇಲೆ ಇಂತು ಕೃಪೆ ತೋರಿಸುತ ನಿಂತು ಅಂತರಂಗಕೆ ಬಾ ಲಕ್ಷ್ಮೀಕಾಂತ ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ
ಕೊಳಲೇನು ಪುಣ್ಯವ ಮಾಡಿ ರಂಗನ ಬಳಿಗೆ ಬಂದಿತೇ ಪ ನಳಿನ ನೇತ್ರೆಯರ ಮನಸು ಎಲ್ಲಾ ಸೆಳೆದು ಪೋದೀತೇ ಅ.ಪ. ವನಜನಾಭನು ಯಮುನೆಯಲ್ಲಿ ಕೊಳಲನೂದುವಮನಸು ನಿಲ್ಲದ ನಡೀರೆ ಪೋಗೋಣ ಕೇಳಿ ನಾದವ 1 ಇಂದು ಗೋವುಗಳ 2 ಎಂಥ ರಾಗ ಮಾಡುವೋನು ಕಂತುಪಿತನುಅಂತರಂಗಕೆ ಸುಖವನಿತ್ತು ಭ್ರಾಂತಿಗೊಳಿಸುವ 3 ಕುಂಡಲ ಹಾರಪದಕ ಧರಿಸಿ ಕುಳಿತಿಹಸರಸಿಜಾಕ್ಷಿಯರೆ ನೋಳ್ಪ ಜನಕೆ ಹರುಷ ಕೊಡುತಿಹ 4 ಸಿರಿಯು ಬಂದು ಮುರಳಿಯಾಗಿ ಮರುಳು ಮಾಡುವನೆಪರರಿಗಿಂಥ ಸುಖವುಂಟೆಂದು ಭ್ರಾಂತಿಗೊಳಿಸುವನೆ ] 5 ಇಂದು ನಮ್ಮೊಳು ಸರಸವಾಡುವನೆ 6
--------------
ಇಂದಿರೇಶರು
ದೇವೀ ಶ್ರೀ ತುಳಸೀ ದುರಿತೌಘವಿನಾಶಿ ಪ ಶ್ರೀ ವರನಾನಂದಾಶ್ರು ಸುಜಾತೆ ಕೃ ಪಾವ ಲೋಕೆ ಜಗಪಾವನಿ ಜನನಿ ಅ.ಪ ತುಂಗ ಮಂಗಳರೂಪಿಣಿ ಸುಗುಣ ತ ರಂಗೆ ಪರಮ ಕಲ್ಯಾಣಿ ನಿತ್ಯ ಮಂಗಳರೂಪ, ನೃ ಸಿಂಗ ಕರಿಗೀಶನು ಸುಖಪೂರ್ಣನು ಮಂಗಳಕರುಣಾಪಾಂಗದಿ ನಿನ್ನನ ರ್ಧಾಂಗಿಯೆಂದಂಗೀಕರಿಸುತಲೆಮ್ಮಂತ ರಂಗಕೆ ಸಂತಸ ಕಂಗಳಿಗುತ್ಸವ ಹಿಂಗದೆ ತರಲೆಂದು ಭಿನ್ನಪಗೈವೆವು
--------------
ವರಾವಾಣಿರಾಮರಾಯದಾಸರು
ಭೂಷಣವಿದು ಭೂಷಣ ಕೇಶವಧ್ಯಾನ ಪಭೂಷಣವದನಾ ವಿಭೀಷಣ ಧರಿಸುತೆನಾಶರಹಿತ ಪೌರುಷವಾಂತ ಧರಣಿಯೊಳು ಅ.ಪಶೇಷಶಯನನಾಮ ಭೂಷಣದೋಷರಹಿತ ಶಿರೋಧಿ ಭೂಷಣಶ್ರೀಶ ವಿಠ್ಠಲನಾಮ ಭೂಷಣಶೇಷಫಣಿಮಣಿಧೃತ ಭೂಷಣ1 ಕರಯುಗಗಳ ಭೂಷಣ ಹರಿಪೂಜೆಯುಶಿರಕೆ ವಂದನೆ ಭೂಷಣಹರಿಪಾದದರ್ಶನ ವರನೇತ್ರಭೂಷಣವರಕ್ಷೇತ್ರಸಂಚಾರ ಚರಣಕೆ ಭೂಷಣ 2 ಹರಿಯ ಚರಿತೆಯು ಕರ್ಣಭೂಷಣಹರಿತುಳಸಿ ನಾಸಿಕಕೆ ಭೂಷಣಹರಿಯ ಕೊಂಡಾಡುವುದೆ ರಸನೆಗೆ ಭೂಷಣಹರಿಯ ಭಜನೆಯು [ಜಿಹ್ವಾಭೂಷಣ] 3 ಧರೆಯೊಳು ಜನಿಸಿದ ಮಾನವರಿಗೆಹರಿನಾಮವೆ ಭೂಷಣಾಸಿರಿರಮಣನಾಮ ಕಿರೀಟವಯ್ಯವರದನೆಂಬುವನಾಮ ವರಕರ್ಣಾಭರಣವು 4 ಗಂಗಾಜನಕನೆಂಬ ನಾಮವೆ ಅಂತರಂಗಕೆ ಮಣಿಭೂಷಣಾರಂಗನೆಂಬುವ ನಾಮ ಹಸ್ತಸಿಂಗರದ ಪೀತಾಂಬರವು ತಾಮಾಂಗಿರೀಶನ ನಾಮ ಮಂಗಳಕರ ಭೂಷಣವೈ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೆಡಗೊಡದಿರು ದೇಶಿಗ ನಾ ರಂಗಕೆಡಗೊಡದಿರು ದೇಶಿಗ ನಾ ಪ.ನುಡಿ ನುಡಿದು ಮುಪ್ಪಾದೆ ನನ್ನಯನಡೆ ನೋಡಲು ಹುರುಳಿಲ್ಲಹುಡಿ ಹುಡಿಯಾದೆನೊ ವಿಷಯದ ಬಯಕೆಲಿಅಡಿಗಡಿಗೊದಗಿತು ಪಾಪವು ರಂಗ 1ಜಪತಪವ್ರತಗಳ ನೇಮವನರಿಯೆನಿಪುಣ ಪೂಜಾವಿಧಿಯರಿಯೆಅಪರಿಮಿತಶುಭಕ್ರಿಯದೊಳು ಕಾಮನಚಪಲತೆ ಭ್ರಮೆಗೊಳಿಸುತಿದೆ ರಂಗ 2ಹಿಡಿ ಹಿಡಿ ಮುಳುಗುವೆ ಯಾರಿಲ್ಲವೊ ಪಾಲ್ಗಡಲೊಡೆಯ ಭವಾಬ್ಧಿಯಲಿಚಡಪಡಿಸುವೆ ಮೂರುರಿಯಲಿಹರಿನಿನ್ನಡಿಯೆಡೆಲಿಡು ಪ್ರಸನ್ವೆಂಕಟ ರಂಗ 3
--------------
ಪ್ರಸನ್ನವೆಂಕಟದಾಸರು
ತಾರಾಪತಿಯಹುದೌ ಸತ್ಯಾಭಿನವ ತೀರ್ಥ ಗುರುವೆ ಪ.ತಾರಾಪತಿಯಂತೆ ಕೀರ್ತಿ ಪ್ರಸರವಿಸ್ತಾರದಿಬುಧಚಕೋರವೃಂದಕೆ ನೀನು1ಇಕ್ಷುಚಾಪನ ಗದೆ ಕಕ್ಷಿಪ ಮಾಯಿಗಳನೀಕ್ಷಿಪೆ ನಿರುತ ಸತ್ಪ್ರೇಕ್ಷೆಂದುಕಾಂತಿಗೆ 2ಶ್ರೀರಾಮ ವೇದವ್ಯಾಸರ ಸೇವೆಯೊಳಿಹೆಮಾರುತಿಮತತತ್ವ ವಾರಿಧಿತರಂಗಕೆ 3ಗುರುಪಾದ ಸ್ಮರಣೆಯ ಮರೆಯದೆ ಅಮೃತ ವಾಕ್ಯಗರೆಯುತಹೃತ್ತಾಪಪರಿಹರಿಸುವಂಥ4ಪ್ರಸನ್ವೆಂಕಟ ಪ್ರೀತ ಶ್ರೀ ಸತ್ಯನಾಥರ ಸುತವಸುಧೆಯಾಚಕಕುಮುದಕುಸುಮಕೋರಕಕೆ5
--------------
ಪ್ರಸನ್ನವೆಂಕಟದಾಸರು
ದಯೆಮಾಡಿ ಸಲಹಯ್ಯ ಭಯನಿವಾರಣನೆ |ಹಯವದನ ನಾ ನಿನ್ನಚರಣನಂಬಿದೆ ಕೃಷ್ಣಪಕ್ಷಣಕ್ಷಣಕೆ ನಾ ಮಾಡಿದಂಥ ಪಾಪಗಳೆಲ್ಲ |ಎಣಿಸಲಳವಲ್ಲಷ್ಟು ಇಷ್ಟು ಎಂದು ||ಫಣಿಶಾಹಿ ಅವಗುಣವ ನೋಡದೇಚರಣಸ್ಮ-ರಣೆಯ ಮಾಡುವಂಥ ಭಕುತಿಯನಿತ್ತು 1ಕಂಡ ಕಂಡ ಕಡೆಗೆ ಪೋಪ ಚಂಚಲಮನಸುಲಂಡತನದಲಿ ಬಹಳ ಭ್ರಷ್ಟ ನಾನು ||ಭಂಡಾಟದವನೆಂದು ಬಹಿರಂಗಕೆಳೆಯದೆ |ಕೊಂಡಾಡುವಂಥ ಭಕುತಿಯನಿತ್ತು ಸಲಹಯ್ಯ 2ಜಾತಿಧರ್ಮವ ಬಿಟ್ಟು ಅಜಮಿಳನು ಇರತಿರಲು |ಪ್ರೀತಿಯಿಂದಲಿ ಮುಕುತಿಕೊಡಲಿಲ್ಲವೆ ||ಖ್ಯಾತಿಯನುಕೇಳಿಮೊರೆಹೊಕ್ಕೆ ದಯಾನಿಧಿಯೆ -ಬೆ-|ನ್ನಾತು ಕಾಯಯ್ಯ ಶ್ರೀ ಪುರಂದರವಿಠಲ 3
--------------
ಪುರಂದರದಾಸರು