ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯೇ ಸರ್ವಸಾರವೆಂದು ಸಾರುವರು |ತೆರೆದು ಹೇಳಿ ತತ್ತ್ವವನು ತಾರಿಸುವರು ಪ ಮೊರೆ ಹೊಕ್ಕವರ ಮನದ ಮಲಕು ಬಿಡಿಸುವರು |ಹರಿದು ಹೋಗುವವಗೆ ಕರೆದು ಕಡೆಗ್ಹಾಕುವರು1 ಧರೆಯೊಳವರೇ ಸಾಧು ಪುರುಷರೆನಿಸುವರು |ಸಿರಿಗೆ ಸೆರಗೊಡ್ಡಿ ಸಿರಬಾಗಿ ನಡಿಯದವರು 2 ಬರಿಯ ತರ್ಕದಿಂದ ಖಂಡಿಸದವರು |ಸರಿಗೆ ಬಂದರೆ ಸುಮ್ಮನೆ ಸಹಿಸುವರು 3 ಕಾಯ ಕದ್ದು ಕರ್ಮಪಾಶ ಕಳೆದವರು |ರಾಯ ರಂಕರಿಗೆ ಸರಿ ತಿಳಿದವರು 4 ಮಾಯದ ಮೂಲವಾದ ಭೇದವಳಿದವರು |ಲಯದ ಮನೆಯ ಮೆಟ್ಟಿ ಭಯ ಮೀರಿದವರು 5 ಅರಿತು ಅರಿಯದವರಂತೆ ತೋರುತಿಹರು |ಮರೆತು ಮರವಿಗೆ ತಾವೆ ಮರವಾಗಿಹರು6 ಗುರು ರುಕ್ಮಭೂಷಣನಂತ ತೋರಿಸುವರು |ತ್ವರಿತದಿ ತಮ್ಮ ನೆಲೆಯ ಕೊಡದವರು 7
--------------
ರುಕ್ಮಾಂಗದರು