ಇದೇ ಭಕುತಿ ಮತಿಗೆ ಮುಕುತಿ |
ಇದಕ್ಕಧಿಕವಾಗಿಪ್ಪ ವಿಧಿಗಳೆಲ್ಲಿಯಿಲ್ಲಾ ಪ
ರತುನ ಗರ್ಭದೊಳಗೆ ತಿಳಿ |
ರತುನ ಸಮಕ್ಷೇತ್ರಗಳಿಗೆ |
ರತುನವೆನ್ನಿ ಯತಿವಂಶ |
ರÀತುನ ಮಧ್ವಮುನಿಮಾಡಿದಾ 1
ಪದ ಜೀವಸ್ತರಿಗದೆ ಪಾ |
ಪ ಜನರು ಕೃಷ್ಣರಾಯನ ಪಾದವ ನೋಡಿ ನಿತ್ಯಾ |
ಸಾಧನಿ ಮನ ಮಾಡಿರಯ್ಯಾ 2
ಏಳು ಒಂದು ಮಠದ ಲೋಕರಂಸೆ ಸದನವೆನ್ನಿ |
ಪೇಳಲೇನು ಅವರೇ ಯಿಲ್ಲಿ
ಊಳಿಗವ ಮಾಡುತ್ತಿಪ್ಪರು 3
ಮೇರೊ ಪರ್ವತ ತುಲ್ಯವಿದೆ |
ವಾರಿಜನೆ ಮಧ್ವರಾಯ |
ಈ ರಜತ ಪೀಠವೆ ಮಂದಿರ ಶತಕೋಟಿ ಎನ್ನೀ4
ಮೆರೆವ ಮಧ್ವತೀರ್ಥ ಬಾಹಿರ |
ವರಣ ಉದಕವೆನ್ನಿ ಇಲ್ಲಿ |
ಚರಿಸುವಂಥ ಸುಗುಣ ತೃಣಾ
ದ್ಯರು ಮುಕುತಿ ಯೋಗ್ಯರಹುದು5
ಉಡಪಿ ಯಾತ್ರೆ ಮಾಡಿದವನು |
ಪೊಡವಿ ತುಂಬ ಯಾತ್ರೆ |
ಬಿಡದೆ ಚರಿಸಿದವನೆ ಎಂದು |
ಮೃಡನು ಇಲ್ಲಿ ಸಾರುತಿಪ್ಪಾ 6
ಉಬ್ಬಿ ಸರ್ವ ಇಂದ್ರಿಯಂಗಳಾ |
ಹಬ್ಬವಾಗಿ ಸುಖಿಪದಕೆ |
ಊರ್ಬಿಯೊಳಗೆ ಉಡುಪಿ ಯಾತ್ರೆ |
ಅಬ್ಬದಲೆ ದೊರಕದಯ್ಯಾ 7
ಹಿಂಗಿ ಪೋಗದಕೆ ಇದೇ |
ಅಂಗವಲ್ಲದೆ ಬೇರೆ ಇಲ್ಲ |
ರಂಗ ಸುಲಭಸಾಧ್ಯಾವಾಹಾ 8
ನೂರು ಕಲ್ಪಧರ್ಮ
ಮಾರನಯ್ಯ ವಿಜಯವಿಠ್ಠಲನ |
ಸಾರಿ ತಂದು ಕೊಡುವಾ9