(ಬ್ರಹ್ಮಣ್ಯತೀರ್ಥರು)
ಬ್ರಹ್ಮಣ್ಯತೀರ್ಥರ ಚರಣಾಬ್ಜಯುಗ್ಮವ
ಸಂಭ್ರಮದಲಿ ಸೇವಿಪೆ ಪ
ಅಂಬುಜಬಂಧು ಸನ್ನಿಭಸಾಧುವೆನುತ ಶ್ರೀ
ಕುಂಭಿಣಿ ಮುನಿವರ್ಯರಾ ಆರ್ಯರಾ ಅ.ಪ.
ತಿದ್ದಿದ ಶ್ರೀಪುಂಡ್ರ ಮುದ್ರೆಗಳಿಂದಲಿ ಸಂ-
ಶುದ್ಧಿ ಮಂಗಳಗಾತ್ರರ
ರುದ್ರಗಳೊಲಿದು ಸದ್ವಿದ್ಯೆಗಳನಿತ್ತು
ಉದ್ಧಾರ ಮಾಡಲೆಂದೂ ನಾ ಬಂದೂ 1
ಶಿಷ್ಯರುಗಳು ತಂದ ಭಿಕ್ಷಾನ್ನಂಗಳನಂದು
ಆಕ್ಷಣ ಮಂತ್ರದಿಂದ
ತÀಕ್ಷಣ ಕಲ್ಪಸಿದಂತೆ ಗೈದಾ ಧೀರ
ರÀಕ್ಷಿಸೆಂದೆರಗುವೆ ನಾ ಬೇಡುವೆ 2
ಕಾಂತೆಯೋರ್ವಳು ತನ್ನ ಕಾಂತ ಸ್ವರ್ಗವನೈದೆ
ಚಿಂತಿಸುತತಿ ಶೋಕದಿ
ಕಾಂತೆ ವಂದಿಸಲು ಸೌಮಾಂಗಲ್ಯವರವನಿತ್ತು
ಕಾಂತನ ರಕ್ಷಿಸಿದ ಕೋವಿದರಾದ 3
ಕುಂದದೆ ಸನ್ಮುನಿವೃಂದದೊಡನೆ ಬಹು
ವೃಂದಾವನದಿ ಶೋಭಿಪ
ಇಂದಿರೆಯರಸ ನರಸಿಂಹವಿಠ್ಠಲನ
ಸನ್ನಿಧಿವರ ಪಾತ್ರರಾ ಪೂತಾತ್ಮರಾ 4