ಪೀಠಕೀಗ ಬಾರೊ ದೇವನೆ ಆದ ಪಾಠ ಸಾಕೊ ಕೃಷ್ಣನೆ ಪ.
ಮುತ್ತಿನಾಭರಣವ ತೊಡಿಸುವೆನು
ಕಸ್ತೂರಿ ತಿಲಕವ ತಿದ್ದುವೆನೊ ಕೃಷ್ಣ
ಮಸ್ತಕದರಳೆಲೆ ಮಾಗಾಯಿ ಪೊಳೆಯುತ
ಕಸ್ತೂರಿ ರಂಗ ಬಾರೊ 1
ಕಂಗಳಿಗೆ ಕಪ್ಪು ಹಚ್ಚುವೆನೊ
ರÀಂಗಗೆ ಪೀತಾಂಬರುಡಿಸುವೆನೊ
ಮಂಗಳಾಂಗಗೆ ನಾ ಶೃಂಗಾರ ಮಾಡಿ
ಕಂಗಳಿಂ ನೋಡುವೆನೊ 2
ಕಾಲಲಂದಿಗೆ ಗೆಜ್ಜೆ ಫಳಿರೆನುತ
ನೀಲಮೇಘ ಶ್ಯಾಮ ಶ್ರೀ ಶ್ರೀನಿವಾಸ
ಬಾಲ ಗೋಪಾಲ ಸುಶೀಲ ಮುರಳಿಧರ
ರಮಾಲೋಲ ಶ್ರೀ ಕೃಷ್ಣ ಬಾರೋ3