ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೃಷ್ಟ ಅದೃಷ್ಟದ ಬಲವು ನೊಡಿ ವಿಸ್ತಾರ ಸೃಷ್ಟಿಯಲಿ ಮುಟ್ಟಿ ಮುದ್ರಿಸಿದ ವಾಕ್ಯಂಗಳು ಕೇಳಿ ಆತ್ಮನಿಷ್ಠ ಜನರು 1 ದೃಷ್ಟಿ ಪುರುಷನ ಸೈನ್ಯಗಳು ಕೇಳಿ ಚಿತ್ತದಲಿ ಮಾನವರು ಅe್ಞÁನವೆಂಬಾಶ ಗತಿಯು ಮಾಯಾಮೋಹಕವೆಂಬ ಸುತರು 2 ಬಂಟ ಜನರು ಪ್ರಪಂಚ ಸೈನ್ಯಾಧಿಪತಿ ಸುಖ ದು:ಖದಳ ಭಾರಗಳು3 ಚಂಚಲವಂಚಲಶ್ವಗಳು ಅಹಂ ಮಮತಾ ಗಜಗಳು ಅವಸ್ಥೆಗಳು ಕಾಲಾಳುಗಳು ಮನ್ನೆವಾರರು ಕರಣಗಳು4 ಮೆರೆಯುತಿಹರು ಪಂಚೇಂದ್ರಿಯಗಳು ಸೂಸುತಲಿಹ ಬೇಹಿನವರು ಮೊದಲಾದ ದಶವಾಯುಗಳು 5 ಸುತ್ತಲಿಹ ಪರಿವಾರಗಳು ಸಪ್ತವ್ಯಸನ ಭೂಷಣಂಗಳು ಪಂಚಾಗ್ನಿಗಳು ಪಂಜಿನವರು ಅಷ್ಟಮದವು ಕಾವಲಿಗಳು 6 ಮೂರು ಪರಿಯ ತ್ರಿಗುಣಗಳು ಸೈನ್ಯದ ಪಾರುಪತ್ಯದವರು ಜಾಗ್ರಸ್ವಪ್ನ ಸುಷುಪ್ತಿಗಳು ಛತ್ರ ಚಾಮರ ಭೂಷಣಗಳು 7 ಸಪ್ತಧಾತುದ ಸುಖಾಸನವು ಪಂಚಾತ್ಮಗಳು ನಿಶ್ಯಾನಿಗಳು ತಾಮಸವೆಂಬ ಭೇರಿಗಳು ಅಹಂಕಾರವು ಕಹಳೆಗಳು 8 ಪರಿ ಚಂದ ಚಂದದಲಿ ಇಳಿದಿಹ ಸೈನ್ಯ ಭಾರಗಳು 9 ಜನನ ಮರಣದ ಮಂಟಪವು ಕಟ್ಟಿಹರು ವಿಸ್ತಾರದಲಿ ಚಿಂತಿ ಮುಪ್ಪಳಿಯು ಭ್ರಾಂತಿಗಳಲಿ ಸ್ಥಿತಿ ಸ್ಥಳಲಿಹ ದ್ವಾರಗಳು 10 ದುರ್ಮೋಹ ಬಲದಲಿ ತನುವೆಂಬ ದುರ್ಗಬಲದಲಿ ಕದನ ಮಾಡುವರನುದಿನದಲಿ 11 ಇನ್ನು ಅದೃಷ್ಟದ ಬಲವು ಕೇಳಿ ಚೆನ್ನಾಗಿ ಮನದಲಿ ಸಮ್ಯe್ಞÁನೆಂಬಾಶಗತಿಯ e್ಞÁನ ವೈರಾಗ್ಯಸುತರು 12 ಬಂಟ ಜನರು ಬೋಧ ಸೈನ್ಯಾಧಿಪತಿಯ ದೃಢ ನಿಶ್ಚಯ ದಳ ಭಾರಗಳು 13 ನಿರ್ಮಳ ನಿಶ್ಚಳಶ್ವಗಳು ವಿವೇಕವೆಂಬ ಗಜಗಳು ಮಗುಟ ವರ್ಧನರು 14 ಶೂರತನದ ಪ್ರರಾಕ್ರಮರು ಸ್ಮರಣೆ ಚಿಂತನೆ ಧ್ಯಾನಗಳು ಸೂಸುತಲಿಹ ಬೇಹಿನವರು ಯೋಚನೆ ಅವಲೋಕನೆಗಳು 15 ಸುತ್ತಲಿಹ ಪರಿವಾರಗಳು ರತಿಪ್ರೇಮ ಸದ್ಭಾವನೆಗಳು ಲಯ ಲಕ್ಷ್ಯಗಳು ಪಂಜಿನವರು ಮೌನ್ಯ ಮೋನವೆ ಕಾವಲಿಗಳು 16 ನಾದ ಬಿಂದು ಕಳೆಯಗಳು ಸೈನ್ಯದ ಪಾರುಪತ್ಯವರು ಅನಿಮಿಷ ಛತ್ರ ಚಾಮರವು ಏಕಾಕಾರವೆ ನಿಶ್ಯಾನಿಗಳು 17 ಅನುಭವ ಸುಖಾಸನಗಳು ತೂರ್ಯಾವಸ್ಥೆಯ ಭೂಷಣಗಳು ಆನಂದಮಯವೆ ಭೇರಿಗಳು ನಿಶ್ಚಿಂತವೆ ಕಹಳೆಗಳು 18 ಸುe್ಞÁನದ ಮೊದಲಾದ ಅಂಗಡಿಯು ಇಳಿದಿಹ ಸಾಲವರಿಯಲಿ ಚಂದ ಚಂದ ಶೃಂಗಾರದಲಿ ಇಳಿದಿಹ ಸೈನ್ಯ ಭಾರಗಳು 19 ಸದ್ಗತಿ ಮುಕ್ತಿ ಮಂಟಪವು ಹೊಳೆಯುತಿಹದು ಸ್ಯೆನ್ಯದೊಳಲಿ ಶೋಭಿಸುವದು ಶೃಂಗಾರದಲಿ 20 ನಿರಾಶವೆಂಬ ಪ್ಯಾಟಿಯಲಿ ಇಳಿದಿಹದು ಸಂತೋಷದಲಿ ದೃಷ್ಟಿ ಪುರುಷನ ಅಟ್ಟಲೆಯ ಕೇಳಿ ನಡೆಯಿತು ಮಾರ್ಬಲವು 21 ಧಿಮಿ ಧಿಮಿಗುಡುತ ನಾದ ಮಾಡಿದರಾನಂದಲ ಗ್ಹೇಳೆನಿಸುತ್ತ ಕಹಳೆಗಳು ಭೋರ್ಗರೆಯುತಲಿ ನಡೆದರು 22 ನಡೆವರು ಅತಿಶಯ ಶೀಘ್ರದಲಿ ಬಾಣ ಬಾಣಗಳು ಮಾಡುತಲಿ ದಣಿದಣಿಸುತಲಿ ನಡೆದರು 23 ತುಂಬಿದ ಸೈನ್ಯ ಭಾರಗಳು ಉಬ್ಬು ಕೊಬ್ಬಿ ನಡೆದವು ನಗುತ ಗೆಲವಿಂದಶ್ವಗಳು ಏರಿ ಹಾರಿಸುತ ನಡೆದರು 24 ಮಗುಟ ವರ್ಧನರು ನಡೆದರು ಅತಿ ಹರುಷದಲಿ ಕಾಲಾಳುಗಳು ಮುಂದೆ ಮಾಡಿ ನಡೆಯಿತು ದಳ ಭಾರಗಳು 25 ಶೂರತನದ ಪರಾಕ್ರಮರು ಮುಂದಾಗಿ ಬ್ಯಾಗೆ ನಡೆದರು ಅಬ್ಬರಿಸುತಲಿ ಮಾರ್ಬಲವು ನಡೆಯಿತವರ ಸೈನ್ಯ ಮ್ಯಾಲೆ 26 ವಿವೇಕವೆಂಬ ಗಜಗಳು ವಾಲ್ಯಾಡುತಲಿ ನಡೆದರು ರಗಡಿಸುತ ಡೋಲಿಸುತಲಿ ನಡೆದರು ಪರಚಕ್ರ ಮ್ಯಾಲೆ 27 ನಡೆವ ಮಾರ್ಬಲದ ಧೂಳಿಗಳು ಮುಸುಕಿತು ಸುವಾಸನೆಗಳು ಗರ್ಜಿಸುವ ಧ್ವನಿಗೇಳಿ ಹೆದರಿತು ಶತ್ರು ಮಾರ್ಬಲವು 28 ಕಂಡು ದೃಷ್ಟರ ಸೈನ್ಯದವರು ಸಿದ್ದವಾದರು ಸಮಸ್ತದಲಿ ತಮ್ಮ ತಮ್ಮೊಳು ಹಾಕ್ಯಾಡುತಲಿ ನಡೆದುಬಂದರು ಸನ್ಮುಖಕೆ 29 ಚಿಂತಿಸುತಲಿ ಪರಾಕ್ರಮರು ಬಂದರು ವೀರ ಕಾಳಗಕೆ ಕಾಳಿ ಭೇರಿಗಳು ಬಾರಿಸುತ ಬಂದರು ಮಹಾಜನರು 30 ಕೂಗಿ ಚೀರುತ ಒದರುತಲಿ ಬಂದು ನಿಂದರು ಪರಾಕ್ರಮರು ಅಹಂ ಮಮತಾ ಗಜಗಳು ನಡೆದು ಬಂದವು ಎದುರಾಗ 31 ಕಾಲಾಳು ಸಹ ಕೂಡಿಕೊಂಡು ರಚಿಸಿ ಬಂದರಶ್ವಗಳು ಕೂಡಿತು ಉಭಯ ದಳವು 32 ಸುವಾಸನೆ ಧೂಳಿಯೊಳಗೆ ಅಡಗಿತು ದುರ್ವಾಸನೆಯು ಅಹಂ ಮಮತಾ ಗಜಗಳು ಕಂಡು ಓಡಿದವು ಹಿಂದಾಗಿ33 ಬೆನ್ನಟ್ಟಿ ವಿವೇಕ ಗಜವು ಹೊಡೆದು ಕೆಡವಿದವು ಧರೆಗೆ ಅವಸ್ಥೆಗಳು ಕಾಲಾಳುಗಳು ಜಗಳ ಮಾಡಿದವು ನಿಮಿಷವು 34 ವಿಚಾರ ಕಾಲಾಳು ಮುಂದೆ ಓಡಿದರು ದೆಸೆದೆಸೆಗೆ ಚಂಚಳವೆಂಚಳಶ್ವಗಳು ಏರಿ ಬಂದರು ರಾವುತರು 35 ಯುದ್ದಮಾಡಿದರರಗಳಿಗೆಯು ಶುದ್ಧಿ ಇಲ್ಲದೆ ಓಡಿದರು ನಿರ್ಮಳ ನಿಶ್ಚಳಶ್ವಗಳು ಏರಿ ಬೆನ್ನಟ್ಟಿ ನಡೆದರು 36 ಚಂಚಳ ವೆಂಚಳಶ್ವಗಳ್ಹರಿಗಡೆದರು ಕಾಲು ಬಲ ರಾಹುತರ ಸಹವಾಗಿ ಕಡೆದೊಟ್ಟಿದರು ಶಿರಸವನು 37 ವೀರರು ಕಾಮಕ್ರೋಧಗಳು ಬಂದರು ಅತಿಶಯಉಗ್ರದಲಿ ಶಮೆ ದಮೆ ವೀರಗಳೊಡನೆ ಕಾದಿ ಮಡಿದರು ಆ ಕ್ಷಣದಲಿ 38 ಬಂಟ ಜನರು ಬಂದರು ಸಿಟ್ಟು ಕೋಪದಲಿ ಭಾವ ಭಕ್ತಿಯ ಬಂಟರೊಡನೆ ಕಾದಿ ಕಾಲಾಳು ಮಡಿದರು 39 ಪ್ರಪಂಚ ಸೈನ್ಯಾಧಿಪತಿಯ ಕೈಸೆರೆಯಲಿ ಹಿಡಿದರು ಬೋಧ ಸೈನ್ಯಾಧಿಪತಿಯು ನಾದಘೋಷವು ಮಾಡಿಸಿದನು 40 ಉಲ್ಹಾಸವೆಂಬ ಸರವರಿಯು ಹಚ್ಚಿಸಿದರು ಸೈನ್ಯದೊಳಲ್ಲಿ ದಯ ಕರುಣ ಭಾಂಡಾರಗಳು ಒಡೆದು ಧರ್ಮ ಮಾಡಿದರು 41 ಪಂಚೇಂದ್ರಿಯಗಳ ಪರಾಕ್ರಮರ ಹಿಡಿದು ಕಟ್ಟಿದರು ಪಾಶದಲಿ ಸ್ಮರಣಿ ಚಿಂತನೆ ಪರಾಕ್ರಮರು ಉಬ್ಬಿದರು ಹರುಷದಲಿ 42 ದಶವಾಯುಗಳ ಬೇಹಿನವರ ಹಿಡಿದು ಬಂಧನವ ಮಾಡಿದರು ಅವಲೋಕನೆ ಬೇಹಿನವರ ಸದ್ಬ್ರಹ್ಮದಲಿ ಸುಖಿಸಿದರು 43 ಸಪ್ತವ್ಯಸನ ಪರಿವಾರಗಳು ರತಿಪ್ರೇಮರೊಡನೆ ಕೂಡಿದರು ಪಂಚಾಗ್ನಿಗಳು ಪಂಜಿನವರು ಪಂಚ ಪಾಲದಿ ಅಡಗಿದರು 44 ಲಯ ಲಕ್ಷಗಳು ಪಂಜಿನವರು ಸಂಜೀವದಂತೆ ಹೊಳೆವರು ಅಷ್ಟಮದವು ಕಾವಲಿಗಳು ಅಡಗಿದವು ಸ್ಥಳ ಸ್ಥಳಲಿ 45 ಮೌನ್ಯ ಮೋನವೆ ಕಾವಲೆಗಳು ತಾವೆ ತಾವಾಗಿ ದೋರಿದರು ತ್ರಿಗುಣರ ಪಾರುಪತ್ಯದವರು ಒಂದು ಸ್ಥಳದಲಿರಿಸಿದರು 46 ನಾದ ಬಿಂದು ಕಳೆಯಗಳು ಮುಟ್ಟಿ ಪಾರುಪತ್ಯ ಮಾಡುವರು ಶತ್ರುರಾಘನ ಭೂಷಣಗಳು ಸೆಳೆದುಕೊಂಡರು ಗಳಿಗೆಯೊಳು 47 ಅವಿದ್ಯ ಮೊದಲಾದಾಗದರಿಂದ ಚೋಳಿಯು ಮಾಡಿದರು ಜನನ ಮರಣದ ಮಂಪಟವು ಸುಟ್ಟು ಸಂಹಾರ ಮಾಡಿದರು 48 ಚಿಂತೆ ಭ್ರಾಂತಿಯ ದ್ವಾರಗಳು ಕಿತ್ತಿ ಬೀಸಾಟಿದರು ಆಶಾಪ್ಯಾಟಿಗೆ ಧಾಳಿನಿಕ್ಕಿ ಲೂಟಿಸಿದರು ನಿಮಿಷದಲಿ 49 ತನು ದುರ್ಗ ವಶಮಾಡಿಕೊಂಡು ಇಳಿಯಿತು ಸೈನ್ಯ ಸುಖದಲಿ ಸದ್ಗತಿ ಮುಕ್ತಿ ಮಂಟಪವು ಕೊಟ್ಟರು ಅಚಲದಲಿ 50 ಯೋಗ ಭೋಗದ ದ್ವಾರದಿಂದ ನಡೆದರು ಮಹಾ ಭಕ್ತಜನರು ಮನ್ನೆವಾರರು ಕರಣಗಳು ಅಭಯವ ಕೊಂಡು ನಡೆದರು 51 ಅe್ಞÁನವೆಂಬಾಶಾಗತಿಯು ಮುಕ್ತವಾದಳು ಸುe್ಞÁನz ಮಾಯವಾದರು ವೈರಾಗ್ಯದಲಿ52 ದೃಷ್ಟ ಪುರುಷನ ತಂದಿನ್ನು ಇಟ್ಟುಕೊಂಡರು ತಮ್ಮೊಳಲಿ ತನು ದುರ್ಗ ವಶಮಾಡಿಕೊಂಡು ಮುಂದೆನಡೆದರಾನಂದದಲಿ 53 ಅಧಾರ ಪುರ ಬೆನ್ನಮಾಡಿ ನಡೆದರು ಬ್ರಹ್ಮಾಂಡಪುರಕೆ ವಿಘ್ನಹರನ ಬಲಗೊಂಡು ಮ್ಯಾಲೆ ಮಣಿಪುರಕೆ ನಡೆದರು 54 ಅನಾಹತಪುರ ದಾಟಿ ಮುಂದೆ ನಡೆದರು ವಿಶುದ್ಧ ಪುರಕೆ ಸ್ಥಳ ಸ್ಥಳ ಹರುಷ ನೋಡುತಲಿ ನಡೆದರಗ್ನಿ ಚಕ್ರಪುರಕೆ 55 ಮ್ಯಾಲಿಹ ಬ್ರಹ್ಮಾಂಡ ಪುರವು ಹೊಳೆಯುತಿಹದು ಪರಿಪರಿಲಿ ಸಹಸ್ರದಳ ಕಮಲಗಲು ಥಳಥಳಿಸುವದದರೊಳು 56 ಘನ ಬೆಳಗಿನ ಪ್ರಭೆಯುಗಳು ಹೊಳಯುತಿಹುದು ಕಿರಣಗಳು ಹರಿ ಬ್ರಹ್ಮಾದಿಗಳು ವಂದಿಸುವ ಸ್ಥಳ ನೋಡಿ ಗುರು ಕರುಣದಲಿ 57 ಪಿಂಡ ಬ್ರಹ್ಮಾಂಡೈಕ್ಯಪುರದಿ ಒಳಗಿಹ ಹಂಸಾತ್ಮಗತಿಯು ಸಹಸ್ರ ರವಿಕೋಟಿ ತೇಜ ಭಾಸುವಾ ವಸ್ತುಗತಿಯು 58 ವಿಶ್ವ ವ್ಯಾಪಕನೆಂಬ ಸ್ಥಿತಿಯು ಮಹಿಮಾನಂದ ಸ್ಫೂರ್ತಿಯು 59 ದೃಷ್ಟಾದೃಷ್ಟಗತಿಯು ದೋರಿದ ಗುರು ಸದೃಷ್ಟದಲಿ ಗುರು ಕರುಣದ ಕಟಾಕ್ಷದಲಿ ಬೆರೆಯಿತು ಮನ ಹರುಷದಲಿ 60 ಕಂಡು ಮಹಿಪತಿಯ ಜೀವನವು ಧನ್ಯವಾಯಿತು ದೃಷ್ಟದಲಿ ಪರಮಾನಂದ ಸುಪಥದಲಿ ಜೀವನ ಮುಕ್ತ್ಯದರಲ್ಲಿ 61
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶಾರದೇ ಮಜ್ಜನನಿಯೆ - ಶಾರದೇ ಪ ಶಾರದೆ ಶರಣೆಂಬೆ ನಿನ್ನ | ಚರಣನೀರಜ ದ್ವಂದ್ವಕೆ ಯನ್ನ | ಆಹಕಾರುಣ್ಯದಲಿ ಹೃದಯ | ವಾರಿಜದೊಳು ಮೆರೆವಮಾರಮಣನ ದಿವ್ಯ | ಮೂರುತಿ ತೋರಿಸು ಅ.ಪ. ವಾಣಿ ನಿಲ್ಲ್ವುದು ಎನ್ನ ವದನಾ | ದಲ್ಲಿನೀ ನುಡಿಸೇ ಹರಿ ಗಾನಾ | ಕರವೀಣೆ ನುಡಿಪಂತೆ ಯೆನ್ನಾ | ದೇಹವೀಣೆ ನುಡಿಸೇ ನೀ ಮುನ್ನಾ | ಅಹವೇಣಿ ಮಾಧವನಾದ | ಶ್ರೀನಿವಾಸನ ಕಾಂಬe್ಞÁನಾನು ಸಂಧಾನ | ಮಾಣದೆ ಎನಗೀಯೇ 1 ಅಜ್ಞರೊಳಾಗ್ರಾಣಿ ನಾನು | ಇಂಗಿತಜ್ಞಳೆ ನಾ ಪೇಳ್ವುದೇನೂ | ಆಭಿಜ್ಞರೊಳಿರಿಸುವುದಿನ್ನೂ | ಸರ್‍ವಜ್ಞರ ಮತ ತಿಳಿಸಿನ್ನೂ | ಆಹವಿe್ಞÁನ ಸುಸಖ ಬ್ರಹ್ಮ | ಯe್ಞÁನೆ ಜಗಕೆಂಬಸುe್ಞÁನ ಸುಖವಿತ್ತು | ಪ್ರಾಜ್ಞನ ಕಾಣಿಸೇ 2 ವ್ರತನೇಮ ಉಪವಾಸ ಒಂದೂ | ಮಾಡಿಕೃತಕೃತ್ಯನಲ್ಲಮ್ಮ ಬಂಧೂ | ಕೃತಿಪತಿಯೆ ಎನಗೆ ಗತಿ ಎಂದೂ | ದ್ವಂದ್ವಕೃತಿಗಳ ನರ್ಪಿಪ ಸಂದೂ | ಆಹಹಿತದಿ ತಿಳಿಸಿ ಗುರು | ಗೋವಿಂದ ವಿಠಲನಸುತನಾಗಿ ಮೆರೆವಂಥ | ಚತುರಾಸ್ಯ ಪ್ರಿಯರಾಣಿ 3
--------------
ಗುರುಗೋವಿಂದವಿಠಲರು