ಎಂದೂ ಹಿಡಿಯದಿರು ಗರ್ವಾ | ಗೋ
ವಿಂದನಲೀಲೆಯ ಕಾಣೊ ಸರ್ವಾ ಪ
ಕ್ಷಿತಿಯೊಳಧಿಕವೆನ್ನ ಕುಲವು | ಗುಣ |
ವತಿ ಸುಲಕ್ಷಣೆಯಾದಾ | ಸತಿಯಳ ವಲವು |
ಸುತನಲ್ಲಿ ಗುಣ ನಿಶ್ಚಲಿಪು | ಯನ |
ಗತಿಶಯ ಭಾಗ್ಯದ ಧನ ಧಾನ್ಯ ಒಲವು 1
ಎಲ್ಲರೊಳಗ ಅಭಿಮಾನಿ | ಶಾಸ್ತ್ರ |
ಬಲ್ಲಿದ ಯೌವ್ವನ ತ್ರಾಣಿ | ಯನ್ನು |
ಸೊಲ್ಲು ಸೊಲ್ಲಿಗ್ಹೇಳುವ ಕವಿತೆಯ ವಾಣಿ 2
ಸುಂದರವಾದ ಮಂದಿರವು | ಯನ |
ಗೊಂದು ಕೊರತೆಯಿಲ್ಲಾವೆಂಬುದೀ ಮರವು
ಹೊಂದದೆ ಬಾಗಿರೆಚ್ಚವು | ಗುರು |
ತಂದೆ ಮಹಿಪತಿ ಬೋಧಿಸಿದರಹು 3