ರಾಜಿಯಿದ್ದೋರೆಲ್ಲ ಕೇಳ್ಬಹುದಣ್ಣ
ಪೂಜೆ ಮಾಡೋ ಇದ ಹೇಳತೀನಣ್ಣ ಪ
ಸಾಜದ ಹಾದಿಲಿ ಬಾಳ್ಯವ್ರಣ್ಣ ಅ.ಪ
ಹಾಸಿಗೇಲಿ ತಿಂಡಿ ತಿನಬಾರ್ದಣ್ಣ
ಮೋಸದ ಯೋಚನೆ ಯಿರಬಾರ್ದಣ್ಣ
ಕಾಸಿಗೆ ಸುಳ್ಳ ಯೋಳ್ಬಾರದಣ್ಣ 1
ನಾಮ ಇಬೂತಿಯ ಅಣೆಗಚ್ರಣ್ಣ
ರಾಮಾ ನಿನ್ಪಾದ್ವೇಗತಿಯೆನ್ನಣ್ಣ 2
ಮಣ್ಣಿನ ಭೂಮಿಯ ನಂಬದಿರಣ್ಣ
ಸಣ್ಣ ಕೃಷ್ಣನೇ ಗತಿಯೆನ್ನಣ್ಣ 3
ನೋಡುವ ಕಣ್ಗಳ ಮನದಲಿಡಣ್ಣ
ನೋಡದರಲಿ ಹೊಳೆ ಹೊಳೆವಾಬಣ್ಣ 4
ಅದರ ಮೇಲೆಳ್ಡು ಕಾಲ್ಗಳ ನೋಡಣ್ಣ
ಮದನ ಗೋಪಣ್ಣನು ಕಾಣುವನಣ್ಣ 5
ಮಡಿಯ ಪೀತಾಂಬ್ರದವುಡಗೆಯ ನೋಡಣ್ಣ
ಹಿಡಿದೆತ್ತಿದ ಕೈಕೊಳಲನು ನೋಡು 6
ಮುಡಿಯ ಕಿರೀಟದ ಹೊಳಪನು ನೋಡು
ನಡುಹಣೆಯ ನಿಡು ತಿಲಕವ ನೋಡು
ಕಡೆನೋಟದ ಕಣ್ಮಿಂಚನು ನೋಡು 7
ಅಂಬರದಂತೆ ಸರೀರವ ನೋಡು
ನಂಬಿಕೆಯಲಿ ಸರಣಾರ್ತಿಯ ಮಾಡು 8
ಬೋಗಾನಂದವ ಪಡಿತೀಯಣ್ಣ
ಕೂಗಿಗೆ ಬರುವನು ಮಾಂಗಿರಿಯಣ್ಣ 9