ಹೋಗುತಾದೋ ಹೊತ್ತು ಹೋಗುತಾದೋ
ಸಾಗಿ ಮುಂಚೆ ಮತ್ತೆ ತಿರುಗಿ ಬಾರದಂತೆ ಪ
ಹಿಂದಿನ ಸುಕೃತದಿಂದ ಒದಗಿದಂಥ
ಸುಂದರಮಾದ್ಹೊತ್ತು ಎಂದೆಂದು ಸಿಗದಂತೆ 1
ಅರ್ತುಕೊಂಡವರಿಗೆ ಸಾರ್ಥಕಗೊಳಿಸುತ್ತ
ಮರ್ತಕರಿಗೆ ಮತ್ತೆ ಗುರ್ತು ತೋರದಂತೆ 2
ಎಷ್ಟೆಷ್ಟೋ ಯೋನಿಯೊಳ್ಹುಟ್ಟ್ಹುಟ್ಟಿ ಬಲಗೋ
ಳಿಟ್ಟು ಪಡೆದ ಹೊತ್ತು ನಷ್ಟವಾಗುತ ವ್ಯರ್ಥ 3
ಅಘನಾಶಗೊಳಿಸಿ ಬಹು ಮಿಗಿಲಾದ ಪದವೀನ
ಸಿಗದಂಥ ವಸ್ತಿದು ಅಗಲಿ ತಾ ಸುಮ್ಮನೆ 4
ನೇಮವಲ್ಲೆಲೋ ಮತ್ತೆ ಆ ಮಹ ಸಮಯವು
ಪಡಿ 5