ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ನಿನ್ನ ಹಿತವಾ ಪಡೆದ್ಕೋ ಯಲೆ ಜೀವವೇ | ಶ್ರೀನಾಥನಂಘ್ರಿ ನಂಬಿ ಸುಖಿಸಲಾರೆಯಾ ಪ ಶ್ವಾನ ಸೂಕರಾದಾ ನಾನಾ ಯೋನಿಯಲ್ಲಿ ತೊಳಲಿ ಬಂದು | ಮಾನವ ಜನ್ಮ ಪುಣ್ಯದಿಂದ ಬಂದುದಾ | ಭವ | ಕಾನನದ ಮಾರ್ಗವನು ಜರೆಯಲಾಪೆಯಾ 1 ಕಾಮ ಕ್ರೋಧ ಲೋಭವೆಂಬಾ ತಾಮಸದ ಬಲಿಗೆ ಸಿಲುಕಿ | ನೇಮಗೆಟ್ಟಾ ವ್ಯರ್ಥನಾದೆ ಹರಿಯ ನಾಮವಾ | ಪ್ರೇಮದಿಂದ ಸ್ಮರಿಸಿ ಭಕ್ತಿ ಸೀಮೆಯೊಳು ಪಡೆದು ಮುಕ್ತಿ | ಸಾಮರಾಜ್ಯ ಪದವಿಯನು ಸಾರಲಾಪೆಯಾ 2 ಮರದು ತನ್ನ ನಿದ್ರೆಯೊಳು ಅರಸು ರಂಕನಾಗಿವಂತೆ | ಶರೀರ ತಾನೆಂಬ ವಿದ್ಯಾವಳಿದು ಜಾಗಿಸೀ | ಗುರು ಮಹಿಪತಿಸ್ವಾಮಿ ಕಿರಣವೆಲ್ಲರೊಳು ಕಂಡು | ಶರಣರಾ ವೃತ್ತಿಯೊಳು ಬರಸಲಾಪೆಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಒಂದು ಬಾರಿ ಸ್ಮರಣೆ ಸಾಲದೆ ಆನಂದ- ಪ. ತೀರ್ಥರ ಪೂರ್ಣಪ್ರಜ್ಞರ ಸರ್ವಜ್ಞರಾಯರ ಮಧ್ವರಾಯರಅ.ಪ. ಹಿಂದನೇಕ ಜನ್ಮಗಳಲಿ ನೊಂದು ಯೋನಿಯಲ್ಲಿ ಬಂದುಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗೆ 1 ಪ್ರಕೃತಿ ಬಂಧದಲ್ಲಿ ಸಿಲುಕಿ ಸಕಲ ವಿಷಯಗಳಲಿ ನೊಂದುಅಕಳಂಕಚರಿತ ಹರಿಯ ಪಾದಭಕುತಿ ಬೇಕೆಂಬುವರಿಗೆ 2 ಆರುಮಂದಿ ವ್ಶೆರಿಗಳನು ಸೇರಲೀಸದಂತೆ ಜರಿದುಧೀರನಾಗಿ ಹರಿಯ ಪಾದವ ಸೇರಬೇಕೆಂಬುವರಿಗೆ 3 ಘೋರ ಸಂಸಾರಾಂಬುಧಿಗೆ ಪರಮe್ಞÁನವೆಂಬ ವಾಡೆಏರಿ ಮೆಲ್ಲನೆ ಹರಿಯಪಾದ ಸೇರಬೇಕೆಂಬುವರಿಗೆ4 ಹೀನಬುದ್ಧಿಯಿಂದ ಶ್ರೀ ಹಯವದನನ್ನ ಜರಿದು ತಾನು ಬದುಕಲರಿಯದಿರಲು ತೋರಿಕೊಟ್ಟ ಮಧ್ವಮುನಿಯ 5
--------------
ವಾದಿರಾಜ
ಕ್ಲೇಶ ಕಷ್ಟದಿ ಮುಳುಗಿ ಬಳಲಬೇಡ ಪ ಹಿಂದೆ ನಾನಾ ಯೋನಿಯಲ್ಲಿ ಹಡಿಕೆಯೊಳು ಜನಿಸಿ ಜನಿಸಿತಂದೆ ತಾಯಿ ಹೆಂಡಿರೇಸು ಲೆಕ್ಕವಾಯ್ತು ನೋಡಮುಂದೆ ಬಹ ದುಃಖಕೆ ಮುಳುಗಿ ಮುಳುಗಿ ಧೈರ್ಯ ಪಡೆದುಮಂದ ಮತಿಯಾಗಿ ಗುರುವ ಮರೆಯಲಿ ಬೇಡ 1 ದುರ್ಜನರ ಸಂಗ ಮಾಡಿ ದುಷ್ಟ ನಡತೆಯಲ್ಲಿ ನಡೆದುಸಜ್ಜನರ ಸಂಗ ನೀ ಮರೆಯಲಿ ಬೇಡಜಜ್ಜುಗಟ್ಟಿ ಪಾಪಕರ್ಮ ಜರಿದು ಜರಿದುಜೋಕೆಯಲ್ಲಿ ಸದ್ಗುರುನಾಥ ಸ್ಮರಣೆ ಮಾಡು2 ಮನೆಯು ಮಕ್ಕಳೆಂಬ ಧನವು ಪಶುಗಳಲ್ಲಿ ಆಸೆಯಿಟ್ಟುನೆನೆಸಿ ನೆನೆಸಿ ಬಿಕ್ಕಿ ಬಿಕ್ಕಿ ಅಳಲು ಬೇಡಚಿನ್ಮಯ ಚಿದಾನಂದಾವಧೂತನೊಳು ಬೆರೆತುಘನವನೈದಿ ಸದ್ಗುಣಾದಿ ತಿಳಿದು ನೋಡ 3
--------------
ಚಿದಾನಂದ ಅವಧೂತರು
ಗುರುದತ್ತ ದಿಗಂಬರ ಸ್ತುತಿ ಈಸಲಾರೆ ಗುರುವೆ ಸಂಸಾರಶರಧಿಯ ಮೋಸದಿಂದ ಬಿದ್ದು ನಾನು ಘಾಸಿಯಾಗಿ ನೊಂದೆ ಗುರುವೆ ಪ ಗುರುವೆ ಬೇರೆ ಗತಿಯ ಕಾಣೆ ನೀನೆಗತಿ ದಿಗಂಬರೇಶ ಮರಯ ಹೊಕ್ಕೆನಿಂದು ನಿಮ್ಮ ಚರಣ ಕಮಲವ ತರುಣ ದಿಂದಲೆನ್ನ ಭವದ ಶರಧಿಯನ್ನು ದಾಟುವಂಥ ಪರಿಯನೊರೆದು ನಾವೆಯಿಂದ ದಡವ ಸೇರಿಸೋ 1 ಮಡದಿ ಮಕ್ಕಳೆಂಬುದೊಂದು ನೆಗಳುಖಂಡವನ್ನು ಕಚ್ಚಿ ಮಡುವಿಗೆಳೆದು ತಿನ್ನು ತಾವೆ ತಡೆಯಲಾರೆನು ನಡುವೆ ಸೊಸೆಯು ಎಂಬನಾಯಿ ಜಡಿದು ಘೋರ ಸರ್ಪದಂತೆ ಕಡಿಯೆ ವಿಷಮ ನೆತ್ತಿಗಡರಿ ಮಡಿವಕಾಲ ಬಂದಿತು 2 ಹಲವು ಜನ್ಮದಲ್ಲಿ ಬಂದು ಹಲವು ಕರ್ಮವನು ಮಾಡಿ ಹಲವು ಯೋನಿಯಲ್ಲಿ ಹುಟ್ಟಿ ಹಲವು ನರಕವ ಹಲವು ಪರಿಯ ಲುಂಡು ದಣಿಯ ನೆಲೆಯ ಗಾಣದೆನ್ನಜೀವ ತೊಳಲಿತಿನ್ನುಗತಿಯ ಕಾಣೆ ಗುರು ಚಿದಂಬರ 3 ಕಾಲವೆಲ್ಲಸಂದು ತುದಿಯಕಾಲ ಬಂತು ಕಂಡ ಪರಿಯೆ ತಾಳಿ ಕಿವಿಗೆ ಊದ್ರ್ವಗತಿಗೆ ಪೋಪಮಂತ್ರವನ್ನು ತಿಳಿಸಿ ನಿರಾಳ ವಸ್ತುವನ್ನು ತೋರೋವರ ದಿಗಂಬರಾ 4 ಆಸೆಯೆಂಬ ನಾರಿಯನ್ನು ನಾಶಗೈದು ಗುರುವಿನಡಿಗೆ ಹಾಸಿತನುವ ದಡದಂತೆ ಬೇಡಿಕೊಂಡೆನು ಈಸ ಮಸ್ತಲೋಕವನ್ನು ಪೋಷಿಸುವ ಲಕ್ಷ್ಮೀಪತಿಯ ದಾಸಗಭಯವಿತ್ತು ಕಾಯೋವರ ದಿಗಂಬರ 5
--------------
ಕವಿ ಪರಮದೇವದಾಸರು
ಸಾಧಿಸಿ ಪಡೆದಿದ್ದೀ ನರಜನುಮ ಸಂ ಪಾದಿಸಿ ಕೊಳ್ಳೆಲೆ ಹರಿನಾಮ ಪ ಪೋದಬಳಿಕ ಇಂಥ ಮಹಜನುಮ ಮತ್ತೆ ಸಾಧನ ಸಾಧ್ಯವಲ್ಲೆಲೊ ತಮ್ಮ ಅ.ಪ ಮಡದಿಮಕ್ಕಳೆಂಬ ಒಣಭ್ರಾಂತಿ ನಿನ ಗ್ಹಿಡಿದಿದೆ ಮಾಯದ ಘನಚಿಂತಿ ಒಡೆದು ತೋರುವ ಜಗಕ್ಷಣ ಸಂತಿ ಇದು ಕಡೆಗೆ ಒಂದು ಇಲ್ಲ ನಿನ್ನ ಸಂಗತಿ1 ಅರ್ಥಇಲ್ಲದೆ ನಾನಾ ಯೋನಿಯಲ್ಲಿ ನೀ ಸತ್ತುಹುಟ್ಟುತ ಬಹು ಬಳಲುವ್ಯಲೇ ಸತ್ಯ ನಿತ್ಯಸುಖ ತಿಳಿಮರುಳೇ ಕಾಂಬ ಮತ್ರ್ಯಭೋಗವೆಲ್ಲ ಸುಳ್ಳುಸುಳ್ಳೆ 2 ತೊಳಲುತ ಎಂಭತ್ತು ನಾಲ್ಕುಲಕ್ಷ ಜನ್ಮ ತಾಳುತ ಪಡೆದಿದ್ದಿ ಬಲುಶಿಕ್ಷೆ ಚೆಲುವ ಶ್ರೀರಾಮನೊಳು ಇಡು ಲಕ್ಷ್ಯ ನಿನಗೊಲಿದು ಕೊಡುವ ಸ್ವಾಮಿ ನಿಜಮೋಕ್ಷ 3
--------------
ರಾಮದಾಸರು