ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿತ್ತೈಸಬೇಕೆನ್ನ ಮಾತು ಕೇಳಯ್ಯ ಮತ್ತೆ ಹುಟ್ಟದಂತೆ ಮಾಡೊ ರಂಗಯ್ಯ ಪ ನಾನಾ ಯೋನಿಯಲೆನ್ನ ನೀನಿಡದಿರಯ್ಯ ಶ್ರೀನಿವಾಸ ಬೇಡಿಕೊಂಬೆ ಶ್ರೀ ರಂಗಯ್ಯ 1 ದೀನ ರಕ್ಷಕನೆಂದು ದೈನ್ಯದಿಂ ಬೇಡುವೆ e್ಞÁನವಂತನ ಮಾಡಿ ಸಲಹೊ ರಂಗಯ್ಯ 2 ದಾನವಾಂತಕ ನಿನ್ನ ಭಕುತರಪರಾಧ ನೀನೆಣಿಸದೆ ನಿರುತ ಸಲಹೊ ರಂಗಯ್ಯ 3 ನಾ ನಿನ್ನ ಮರೆತರೂ ನೀ ನನ್ನ ಮರೆಯೆ ಏನೆಂಬೆ ನಿನ್ನ ಕರುಣಕೆ ಶ್ರೀ ರಂಗಯ್ಯ 4 ಭಾನು ಕೋಟಿ ಪ್ರಕಾಶ ಶ್ರೀ ರಂಗಯ್ಯವಿಠಲ ಮಾನದಿಂದಲಿ ಪೊರೆಯೊ ಶ್ರೀನಿಧಿ ರಂಗಯ್ಯ 5
--------------
ರಂಗೇಶವಿಠಲದಾಸರು