ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಟ್ಟಿ ಮನವ ಕೊಡೊ ಹರಿ ಹರಿ ಗಟ್ಟಿ ಮನವ ಕೊಡೊ ಪ ಸೃಷ್ಟಿಕರ್ತನೆ ನಿನ್ನ ಶಿಷ್ಟ ಪಾದದೆನಗೆ ನಿಷ್ಠೆ ಭಕ್ತಿಯ ನೀಡು ಬಿಟ್ಟು ಅಗಲದಂತೆ ಅ.ಪ ದುರಿತದೋಷಗಳು ಕಡಿದು ಬರುವ ಕಂಟಕವನ್ನು ಪರಹರಿಸೆನಗೆ ಅರಿವು ನಿಲಿಸಾತ್ಮನ ಕುರಹು ತಿಳಿಸುಸಿರಿವರನೆ ಕರುಣದಿ 1 ಚಲನವಲನಗಳನು ಕಳೆದು ನಿಲಿಸು ಜ್ಞಾನವನ್ನು ಹೊಲೆಯ ದೇಹದ ನೆಲೆಯ ತಿಳಿಸಿ ಎನ ಗಳುಕಿಸು ಭವದಾಸೆ ಘಳಿಲನೆ ಒಲಿದು 2 ತಾಪತ್ರಯಗಳನು ಛೇದಿಸಿ ಪಾಪಶೇಷಗಳನ್ನು ಲೋಪಮಾಡಿ ಇಹದ್ವ್ಯಾಪರದೊಳಗಿಂದ ನೀ ಪೊರೆ ಭವನಿರ್ಲೇಪನೆ ದಯದಿ 3 ಕಟ್ಟಿ ಕಾದುತ್ತಿರುವಸಂಸಾರ ಕೆಟ್ಟಬವಣೆಜನ ಬಟ್ಟ ಬಯಲು ಮಾಡಿಕೊಟ್ಟು ನಿಜಾನಂದ ಶಿಷ್ಟರೊಳಾಡಿಸೆನ್ನ ಸೃಷ್ಟೀಶ ದಯದಿಂ 4 ನೀನೆ ಕರುಣದಿಂದ ಬಿಡಿಸಯ್ಯ ಯೋನಿಮಾರ್ಗ ತಂದೆ ಧ್ಯಾನದಿರಿಸಿ ನಿನ್ನ ಮಾಣದ ಪದ ನೀಡು ದೀನದಯಾಳು ಶ್ರೀ ಜಾನಕಿರಾಮ 5
--------------
ರಾಮದಾಸರು