ಏನು ಕೆಟ್ಟೆಯಲ್ಲೋ ಮನುಜ
ಹಾನಿಯಾದೆಯಲ್ಲೋ ಪ
ಕಾಣದೆ ಏನೇನು ಗಾಣದೆತ್ತಿನಂತೆ
ನಾನಾ ಯೋನಿಗಳು ಖೂನವಿಲ್ಲದೆ ತಿರುಗಿ ಅ.ಪ
ಕಾಲ ಕಳೆದೆಯಲ್ಲ ಕಾಲದ ಮೂಲ ತಿಳಿಯಲಿಲ್ಲ
ಮೂಳನಾದೆಯಲ್ಲ ಭವದ ಮಾಲ ಗೆಲಿಯಲಿಲ್ಲ
ಕಾಳುಕತ್ತಲೆಂಬ ಹಾಳು ಸಂಸಾರ ಮಾಯಾ
ಜಾಲದಿ ಬಿದ್ದೆಮಧಾಳಿಗೀಡಾದೆಯಲ್ಲ 1
ನಾರಿ ನಿನ್ನವಳಲ್ಲ ಹುಟ್ಟಿದ ಪೋರ ನಿನಗಿಲ್ಲ
ಯಾರಿಗೆಯಾರಿಲ್ಲ ನಿನ್ನ್ಹಿಂದೆ ಯಾರು ಬರುವುದಿಲ್ಲ
ಧಾರುಣಿಸುಖವಿದು ಸಾರಮಯ ಸುವಿ
ಚಾರದೆ ನೋಡದೆ ಘೋರನರಕಿಯಾದೆ 2
ಮನೆಮಾರು ನಿನಗಿಲ್ಲ ಗಳಿಸಿದ ಧನವು ನಿನ್ನದಲ್ಲ
ಕ್ಷಣಿಕವಾದದ್ದೆಲ್ಲ ಜಗಸುಖ ನಿನಗೊಂದು ಸ್ಥಿರವಿಲ್ಲ
ವನಜನಾಭ ನಮ್ಮ ಜನಕ ಶ್ರೀರಾಮನ
ವನರುಹಂಘ್ರಿ ನಂಬಿ ಘನಮುಕ್ತಿ ಪಡೀಲಿಲ್ಲ 3