ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೋಗಣೆಯ ಮಾಡು ಸಾರಸುಖದೊಡೆಯ ಪ. ಸತ್ಯವಾದ ಜಗಕೆ ಕರ್ತುಕಾರಣ ನೀನೆ ಮುಕ್ತಿದಾಯಕ ನಿತ್ಯತೃಪ್ತನಹುದೈ ಸತ್ಯವಾದವತಾರ ಸಕಲಗುಣ ಪರಿಪೂರ್ಣ ಸಿರಿ ಪರಮ ದಯಾಳು1 ಅಣುರೋಮಕೂಪದಲಿ ಅಂಡಜಾಂಡಗಳಿರಲು ಘನಕೃಪಾಂಬುಧಿ ನಿಮ್ಮ ಪೊಗಳಲಳವೆ ಫಣಿಶಾಯಿಯಾಗಿದ್ದ ಭುವನವ್ಯಾಪಕ ಹರಿಯ ಘನಭಕುತಿಲ್ಯಜಭವರು ಪೂಜೆಮಾಡುವರು 2 ಗಂಗೆಗೋದಾವರಿ ತುಂಗಭದ್ರೆ ಯಮುನೆ ರÀಂಗಸನ್ನಿಧಿಯಾದ ಕಾವೇರಿಯು ಮಂಗಳ ಭೀಮರಥಿ ನಿಮಗೆ ಮಜ್ಜನಕೆ ಅಣಿಮಾಡಿ ಅಂಗಜನಯ್ಯ ಭಾಪೆಂದು ಪೊಗಳೆ 3 ರನ್ನಮಯವಾಗಿರ್ದ ಹೊನ್ನಮಂಟಪದೊಳಗೆ ಸ್ವರ್ಣಪಾತ್ರೆಗಳಲ್ಲಿ ಸ್ವಯಂಪಾಕವು ನಿನ್ನ ಸೊಸೆ ವಾಣಿ ಭಾರತಿದೇವಿ ಕಡುಜಾಣೆ ಚೆನ್ನಾಗಿ ನೈವೇದ್ಯವನ್ನೆ ಮಾಡುವರು 4 ಗಂಧ ಕಸ್ತೂರಿ ಪುನುಗು[ಚಂದನ] ಜವ್ವಾಜಿ ಮುಂದೆ ಕುಂಕುಮದ ಕೇಸರಿಯ ಲೇಪ ಚೆಂದದ ಕೇದಿಗೆ ಮುಡಿವಾಳ ಸಂಪಿಗೆ ಕಂದರ್ಪನಯ್ಯಗೊಪ್ಪಿತು ಮಲ್ಲಿಗೆ 5 ದೆಸೆದೆಸೆಗೆ ಪರಿಮಳಿಪ ಕುಶಲದ ಚಿತ್ರಾನ್ನ ಬಿಸಿದೋಸೆಗೆ ಬೆಣ್ಣೆ ಲೇಹ್ಯಪೇಯ ಬಸಿರೊಳಗೆ ಈರೇಳು ಜಗವನಿಂಬಿಟ್ಟವಗೆ ನಸುನಗುತ ಇಂದಿರಾದೇವಿ ಬಡಿಸೆ 6 ನೂರು ಯೋಜನದಗಲ ಸರಸಿಜ ಬ್ರಹ್ಮಾಂಡ ಹದಿ ನಾರು ಬಣ್ಣದ ಚಿನ್ನದ್ಹರಿವಾಣವು ಸಾರೆಯಲಿ ಪೊಂಬಟ್ಟಲೆಂಬ ಸಾಗರದೊಳಗೆ ಮೇರುಗಿರಿಯೆಂಬೊ ದೀಪಗಳು ಬೆಳಗೆ 7 ಘೃತ ಸೂಪ ಲೋಕಪತಿಗನುವಾದ ದಿವ್ಯಾನ್ನವು ಬೇಕಾದ ಪಂಚಭಕ್ಷ್ಯ ರಸಾಯನವ ಏಕಾಂತದಲ್ಲಿ ನಿಮ್ಮ ದೇವಿ ಬಡಿಸೆ 8 ಖಳರಕುಲವೈರಿಗೆ ತಿಳಿನೀರುಮಜ್ಜಿಗೆ ಎಳನೀರು ಪಾನಕ ಸೀತಳುದಕ ಬಳಲಿದಿರಿ ಬಳಲಿದಿರಿ ಎನುತ ಹಯವದನಗೆ ನಳಿನಾಕ್ಷಿ ಕರ್ಪೂರವೀಳ್ಯವನೆ ಕೊಡಲು 9
--------------
ವಾದಿರಾಜ
ಜಯಜಯತು ಜಾಹ್ನವಿಯೆ ಭಕ್ತ ಸಂಜೀವಿ ಜಯ ಮಂಗಳವನೀಯೆ ಜಯ ನಮ್ಮ ಕಾಯೆ ಪ ಕಮಲಜನು ಪಾತ್ರೆಯೊಳು ಧರಿಸಲಾ ಹರಿಪಾದ- ಕಮಲವನು ತೊಳೆಯಲಾವೇಗದಿಂದ ವಿಮಲ ಸಂಗತಿಯಿಂದ ಮಂದಾದಿನಿಯೆನಿಸಿ ಸುಮನ ಸಾವನಿಯಲ್ಲಿ ಮೆರೆದೆ ಸುರನದಿಯೆ1 ಧ್ರುವಲೋಕಕಿಳಿದು ಅಮರಾವತಿಯ ಸಾರಿದೆ ರವಿಯಂತೆ ಪೊಳೆಯುತ ಆ ಜನ ಮಧ್ಯದಿಂ ಭುವನದೊಳಗೀರೈದು ನೂರು ಯೋಜನದಗಲ ತವಕದಿಂದಲಿ ಧುಮುಕಿ ಚತುರ ಭಾಗವಾದೆ 2 ಶಿವನ ಮಸ್ತಕದಲ್ಲಿ ಶೋಭಿಸುವ ಮಹಮಹಿಮೆ ಭವದೊರೆ ಭಗೀರಥಗೆ ವಲಿದು ಬರುತ ಕವಿ ಜನ್ಹುಮುನಿಯಿಂದ ಪುಟ್ಟಿ ಹಿಮಗಿರಿ ದಾಟಿ ಜವನ ಭಗಿನಿಯ ಕೂಡಿ ಮಣಿಕರ್ಣಿಕೆಯ ನೆರದೆ 3 ಅಳಕನಂದನೆ ನಿನ್ನ ಸ್ಮರಣೆ ಮಾಡಿದ ಜನಕೆ ಕುಲಕೋಟಿ ಪಾವನವು ಸಂದೇಹವಿಲ್ಲ ಮಜ್ಜನ ಪಾನ ಮಾಡಿದಗೆ ಪೊಳೆಗೆ ವೈಕುಂಠಪುರ ಅವನ ಹೃದಯದಲಿ 4 ದೇಶದೇಶಗಳಿಂದ ಬಂದ ಸುಜನರ ಪಾಪ ನಾಶನವ ಮಾಳ್ಪ ನೀ ನಿಷ್ಕಾಮದಿ ಮಾಧವ ವಿಜಯವಿಠ್ಠಲನ ಸೋಸಿನಿಂದಲಿ ಪೊಗಳುತಿಹೆ ಸುವಿಖ್ಯಾತೆ 5
--------------
ವಿಜಯದಾಸ
ನೋಡಿ ನೋಡಿ ಸತ್ಯಪ್ರಿಯರ ನಾ ನಿಂದು ನಿಂದು ಪಾಡಿ ಪಾಡಿ ಯೋಗಿವರ್ಯರ ನಾ ಪಾಡಪಂಥದಲಿ ಬಂದ ಮೂಢ ಮಿಥ್ಯಾವಾದಿಗಳ ಓಡಿಸಿ ತನ್ನನು ಕೊಂ ಡಾಡಿದವರ ಪೊರೆವ ಯತಿಯ ಪ ನಾಗಸರ ನಾಗಬಂಧ ಕೊಂಬು ಕೊಳಲು ರಾಗದಿಂದ ಪಾಡುವ ಸನಾಯಿಸುತಿಗಳು ಬೇಗಿ ಕೂಗುವ ಹೆಗ್ಗಾಳೆ ದುಂದುಭಿ ಎಸಿಯೆ ಚತು ಪರಿಯಂತ ಮೆರೆದ ಯೋಗಿಗಳಾಗ್ರಣ್ಯನ1 ವಾದಿಗಳೆದೆಯು ಬಿರಿಯೆ ಧವಳ ಶಂಖದಾ ನಾದ ಒಪ್ಪ್ಪಿಸುತ್ತಿ ಮೆರೆವ ಬಿರಿದು ಸಮುದಾಯ ಮೇದಿನಿ ಸುರರು ಬಲದಾರಿಯಲಿ ಬರೆ ಆಶೀ ರ್ವಾದವನ್ನು ಕೊಡುವ ಧೀರನು 2 ಗಜ ಪಾಯಿದಳನೇಕಸಂದಣಿ ಯೋಜನದಗಲಕೆ ಘೋಷಣವಾಗಲು ರಾಜಾಧಿರಾಜರು ಪೂಜೆಯನ್ನು ಮಾಡುತಿರೆ ಈ ಜಗದೊಳಗೆ ಸಿದ್ಧ ತೇಜಪುಂಜರನ್ನ 3 ಅದ್ವೈತಮತಶಾಸ್ತ್ರ ವದ್ದು ಕಳವುತ ಮಧ್ವಮತವ ಎಂಬೊ ಸುಧಾಬ್ಧಿಗೆ ರಾಕೇಂದುನಂತೆ ಇದ್ದು ಭವರೋಗಳಿಗೆ ಮದ್ದು ಅಹುದೋ ಸುಗುಣದವರ4 ಹಿಂಡು ಬರಲಾಗಿ ಕಂಡು ಹರುಷದಿಂದ ಸಭಾಮಂಡಿತರಾಗಿ ಖಂಡ ತುಂಡು ಮಾಡಿ ಅವರ ದಿಂಡುಗೆಡಹಿ ಮಂಡಲಕೆ ಪುಂಡರಿಕಾಕ್ಷನೆ ಉದ್ದಂಡನೆಂದು ಸಾರಿದರನ5 ಬಿಜವಾಡದಲಿ ಕೃಷ್ಣ ತಜ್ಜಲದೊಳು ದುರ್ಜಂತುಗಳು ನರರಾ ಬೆಚ್ಚರಿಸಲು ಪ್ರಜ್ವಲಿಸುತ ಪೋಗಿ ಮಾರ್ಜನೆ ಯನ್ನು ಗೈದು ಭೀತ ರಾಜಝರವ ಬಿಡಿಸಿ ಕಾಯಿದ ಸಜ್ಜನರ ಮನೋಹರ 6 ದೇಶÀದೊಳೀ ಶೇಷವಾದ ದಾಸರ ಪ್ರಿಯ ಸಿರಿ ವಿಜಯವಿಠ್ಠಲೇಶನಂಘ್ರಿಯ ಸಾಸಿರ ದಳದ ಧ್ಯಾನ ಮೀಸಲಾಗಿ ಮಾಡುತಿಪ್ಪ ದೋಷರಹಿತರಾದ ಸಂ ನ್ಯಾಸ ಕುಲಭೂಷಣನಾ 7
--------------
ವಿಜಯದಾಸ