ಎಚ್ಚರಿಕೆ ಎಚ್ಚರಿಕೆ ಅಚ್ಚುತ ಮೆಚ್ಚನು ಎಚ್ಚರಿಕೆ ಪ.
ಇಚ್ಛಿಸದಿಹ ಸುಖ ಸ್ವಚ್ಛ ಭಕುತಿಯಲಿ ಹರಿ ಇಚ್ಚೆಯಲಿರು ಮನವೆಅ.ಪ.
ಹಗಲು ಹಸಿ ಮುಂದಿರುಳು ನಿದ್ರೆ
ಹಗೆಯಹುದೆಂದು ಬಗೆಯದೆ ನೀ
ಜಗದೊಡೆಯನು ಸಿಗ್ಯಮಿಗೆ ಧ್ಯಾನಿಸದೆ
ಅಘ ಪೋಗುವುದೆ ಮನವೆಚ್ಚರಿಕೆ 1
ಯಾಕೆಂತು ನೀ ಪರರ ಯೊಚಿಸುವೆ ನಿನ
ಸಾಕುವನ್ಯಾರೆಂದು ಯೋಚಿಸದೆÉ
ಆ ಕೈವಲ್ಯಾಧಿಪನೆಂದು ತಿಳಿ ಅ
ನೇಕ ರೂಪಿಲಿಹ ಎಚ್ಚರಿಕೆ 2
ಪರಸಖನ ಎನಗೆ ಹರಿಯೆಂದ
ತರಳನ ಸಲಹಿತು ನಾರಾಯಣ ನಾಮ
ಗರುಡಗಮನ ಶ್ರೀ ಶ್ರೀನಿವಾಸನೆ
ನಿರುತ ಮರೆಯದಿರು ಮನವೆಚ್ಚರಿಕೆ 3