ಎಲ್ಲರ ಮಾತು ನಿಜ | ಇದು
ಅಲ್ಲ ಎಂಬುದು ಸಜ ಪ
ಬಲ್ಲವರು ಮನದಲಿ ಯೋಚಿಪುದು ಸು-
ಸೂರಿ ಜನಗಳಿಗೆ ಅ.ಪ
ಅಂತರ್ಯಾಮಿಯ ವೀಕ್ಷಾ | ಇದು ಅ
ದ್ವೈತ ಮತದ ದೀಕ್ಷಾ
ಸ್ವಾಂತದಿ ನೋಡೆ ಪ್ರಪಂಚಕಾಯ ಭಗ
ವಂತನೆಂಬುದು ವಿಶಿಷ್ಟಾದ್ವೈತವು 1
ಅಣುರೇಣು ತೃಣಕಾಷ್ಠದಲಿ | ನೋಡೆ ಅ-
ವನೇ ವ್ಯಾಪಿಸಿಹನಲ್ಲಿ
ರೇಣು ಬೇರೆ ಅವನೇ ಬೇರೆ
ಅನಿಲಾಂತರ್ಗತನಾಗಿ ಸಮಸ್ತದಿ 2
ಮೂರು ವಿಧದ ಜೀವಗಳು ಕರ್ಮ
ಮೂರಾಗಿ ತೋರುವ ಗುರುರಾಮ ವಿಠಲನು 3