ಆಪ್ತರಾರೆಂಬುದನು ಆಲೋಚನೆಯ ಮಾಡೆ
ಆಪ್ತರೊಬ್ಬರ ಕಾಣೆ ನೀನಲ್ಲದೆ ಪ
ಆಪ್ತರನ್ಯರ ನಂಬಿ ತಪ್ತ ಜೀವನನಾದೆ
ತೃಪ್ತಿಯ ಬೇಡುವೆ ನಿತ್ಯತೃಪ್ತ ನಿನ್ನನು ದೇವ ಅ.ಪ
ಕೋಳಿಕೂಗದೆ ಬೆಳಕು ಬಾರದೆನ್ನುವ ನುಡಿಯ
ಕೇಳಿ ತಲೆದೂಗಿದೆನು ಮೂಢತನದಿ
ಪೇಳಿದುದು ಮಾಡಿದೆನು ತಾಳಿದೆನು ಮರ್ಮನುಡಿ
ಪೇಳಲೇನುಪಯೋಗ ಶ್ರೀಲಲಾಮ ಸುಧಾಮ 1
ದಿಟ್ಟ ಜನರಾಪ್ತರಾಗುವರೆ ಜಗದಿ
ಇಷ್ಟರಂದದಿ ಹೊರಗೆ ಕೆಟ್ಟ ಯೋಚನೆಯೊಳಗೆ
ಸುಟ್ಟ ಬೆರಳಿಗೆ ಸುಣ್ಣವಿಡುವರೊಬ್ಬರ ಕಾಣೆ 2
ಕೂತ ಕೊಂಬೆಯ ಬುಡವ ತಾ ತರಿವ ಮೇಧಾವಿ
ಮಾತು ಕೇಳುವ ಜನಗಳಾಪ್ತರಾಗುವರೆ
ಪ್ರೀತ ನೀನಾಗೊ ಅನಿಮಿತ್ತಬಾಂಧವ ನಿನ್ನ
ದೂತ ದೂತರ ದೂತನಾಗುವೆ ಪ್ರಸನ್ನ 3